ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಂಗಣಕ್ಕೆ ಹೆಚ್ಚು ಜನರನ್ನು ಸೆಳೆಯಲಿದೆ ಪಿಂಕ್ ಟೆಸ್ಟ್: ರಾಹುಲ್ ದ್ರಾವಿಡ್‌

Last Updated 19 ನವೆಂಬರ್ 2019, 13:08 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಅಧ್ಯಕ್ಷ ರಾಹುಲ್‌ ದ್ರಾವಿಡ್‌, ‘ಪಿಂಕ್‌ ಟೆಸ್ಟ್‌’ನಿಂದಾಗಿ ಹೆಚ್ಚು ಜನರು ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ದ್ರಾವಿಡ್‌,‘ಟೆಸ್ಟ್‌ ಕ್ರಿಕೆಟ್‌ ನೋಡಲು ಹೆಚ್ಚು ಜನರು ಬರುವಂತೆ ಮಾಡಲು ಇದು ‘ಪಿಂಕ್‌ ಟೆಸ್ಟ್‌’ ಪರಿಹಾರ ಕ್ರಮವೇನಲ್ಲ. ಆದರೆ, ನಮಗೆ ಅಗತ್ಯವಿರುವ ಒಂದು ಮಾರ್ಗವಾಗಿದೆ.ರಾತ್ರಿಯ ವೇಳೆ ಇಬ್ಬನಿಯನ್ನು ನಿಯಂತ್ರಿಸಲು ಸಾಧ್ಯವಾದರೆ, ‌ಇದು ವರ್ಷದ ವಿಶೇಷ ವಾಗಲಿದೆ. ಚೆಂಡು ತೇವವಾದಷ್ಟು ಹೆಚ್ಚು ಸ್ವಿಂಗ್‌ ಪಡೆದುಕೊಳ್ಳುತ್ತದೆ. ಪಿಂಕ್‌ ಬಣ್ಣದ ಚೆಂಡು ಜನರನ್ನು ಕ್ರೀಡಾಂಗಣದತ್ತ ಆಕರ್ಷಿಸುತ್ತದೆ’ ಎಂದು ಹೇಳಿದ್ದಾರೆ.‌

ಮುಂದುವರಿದು, ಟೆಸ್ಟ್‌ ಕ್ರಿಕೆಟ್‌ನತ್ತ ಜನರು ನಿರಾಸಕ್ತಿ ತಳೆಯಲು ಕಾರಣವಾದ ಅಂಶಗಳತ್ತ ಗಮನಹರಿಸಬೇಕು. ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಗೆ ಅಗತ್ಯ ಸೌಕರ್ಯವನ್ನು ಒದಗಿಸಬೇಕು ಎಂದುಆಗ್ರಹಿಸಿದ್ದಾರೆ.

ಅಕ್ಟೋಬರ್‌ ತಿಂಗಳು ಪುಣೆಯಲ್ಲಿ ನಡೆದ ಭಾರತ–ದಕ್ಷಿಣ ಆಫ್ರಿಕಾ ಟೆಸ್ಟ್‌ ಅನ್ನು ಉಲ್ಲೇಖಿಸಿರುವ ಅವರು, ಟೆಸ್ಟ್‌ ಪಂದ್ಯ ನಡೆಯುವಐದು ದಿನವೂ ಮೂಲಭೂತ ಅಗತ್ಯ ಸೌಕರ್ಯ ಇರಲಿಲ್ಲವೆಂದು ಅಭಿಮಾನಿಗಳು ದೂರಿದ್ದರು. ಇಂತಹ ಅಂಶಗಳು ಜನರನ್ನು ಕ್ರೀಡಾಂಗಣದಿಂದ ದೂರ ಉಳಿಯುವಂತೆ ಮಾಡುತ್ತವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ಶೌಚಾಲಯ, ಆಸನ ವ್ಯವಸ್ಥೆ, ವಾಹನ ನಿಲುಗಡೆ ಸೇರಿದಂತೆ ಜನರಿಗೆ ಅಗತ್ಯವಿರುವ ಅಂಶಗಳತ್ತ ಗಮನಹರಿಸಬೇಕು. ಇವು ಜನರನ್ನು ಆಕರ್ಷಿಸುತ್ತವೆ’ ಎಂದು ಮನವರಿಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT