ಶನಿವಾರ, ಅಕ್ಟೋಬರ್ 19, 2019
27 °C

ಅನುಮಾನಾಸ್ಪದ ಬೌಲಿಂಗ್: ಧನಂಜಯಗೆ ಒಂದು ವರ್ಷ ನಿಷೇಧ

Published:
Updated:

ದುಬೈ: ಅನುಮಾನಾಸ್ಪದ ಬೌಲಿಂಗ್ ಶೈಲಿಗಾಗಿ ಶ್ರೀಲಂಕಾದ ಆಫ್‌ ಸ್ಪಿನ್ನರ್‌ ಅಖಿಲ ಧನಂಜಯ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಒಂದು ವರ್ಷದ ನಿಷೇಧ ಶಿಕ್ಷೆ ಹೇರಿದೆ. 25 ವರ್ಷದ ಧನಂಜಯ ಅವರ ಶೈಲಿಯ ಬಗ್ಗೆ ಸ್ವತಂತ್ರವಾಗಿ ವಿಶ್ಲೇಷಣೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ.

ಕಳೆದ ತಿಂಗಳ 14 ರಿಂದ 18ರವರೆಗೆ ಗಾಲೆಯಲ್ಲಿ ನ್ಯೂಜಿಲೆಂಡ್‌ ವಿರುದ್ಧ ನಡೆದ ಟೆಸ್ಟ್‌ ಪಂದ್ಯದ ವೇಳೆ ಅವರ ಬೌಲಿಂಗ್‌ ಶೈಲಿಯ ಬಗ್ಗೆ ಪ್ರಶ್ನೆಗಳು ಮೂಡಿದ್ದವು.

ಚೆನ್ನೈನಲ್ಲಿ ಆ. 29ರಂದು ವಿಶ್ಲೇಷಣೆ ನಡೆಸಿದ ವೇಳೆ ಅವರು ನಿಯಮಬಾಹಿರ ಶೈಲಿಯಲ್ಲಿ ಬೌಲಿಂಗ್‌ ಮಾಡುವುದು ಬೆಳಕಿಗೆ ಬಂದಿತ್ತು. ಈ ಹಿಂದೆಯೂ ಒಮ್ಮೆ (2018 ಡಿಸೆಂಬರ್‌) ಅವರು ಅಮಾನತು ಶಿಕ್ಷೆ ಅನುಭವಿಸಿದ್ದರು. 

Post Comments (+)