ಲಂಡನ್: ಕ್ರಿಕೆಟ್ ಅಂಗಳದಲ್ಲಿ ವಿಭಿನ್ನ ಶೈಲಿಯ ಅಂಪೈರಿಂಗ್ ಮೂಲಕ ಗುರುತಿಸಿಕೊಂಡಿದ್ದ 92 ವರ್ಷದ ಹ್ಯಾರಲ್ಡ್ ಡಿಕಿ ಬರ್ಡ್ ಅವರು ಮಂಗಳವಾರ(ಸೆ.23) ನಿಧನರಾಗಿದ್ದಾರೆ.

1973 ರಿಂದ 1996ರವರೆಗೆ 66 ಟೆಸ್ಟ್ ಪಂದ್ಯ ಹಾಗೂ 69 ಏಕದಿನ ಪಂದ್ಯಗಳಿಗೆ ಡಿಕಿ ಬರ್ಡ್ ಅವರು ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.

‘ಕ್ರೀಡಾಸ್ಪೂರ್ತಿಯ ಮೂಲಕ ಕ್ರಿಕೆಟ್ ಜಗತ್ತಿನ ನೆನಪಿನಲ್ಲಿ ಉಳಿಯುವಂತಹ ಅಂಪೈರ್ಗಳಲ್ಲಿ ಒಬ್ಬರಾಗಿರುವ ಡಿಕಿ ಬರ್ಡ್ ಅವರು 92ನೇ ವರ್ಷದಲ್ಲಿ ತಮ್ಮ ಮನೆಯಲ್ಲಿ ಚಿರನಿದ್ರೆಗೆ ಜಾರಿದ್ದಾರೆ. ಅವರ ನಿಧನವು ಕ್ರಿಕೆಟ್ಗೆ ತುಂಬಲಾರದ ನಷ್ಟವಾಗಿದೆ’ ಎಂದು ಯಾರ್ಕ್ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ತಿಳಿಸಿದೆ.

ಯಾರ್ಕ್ಶೈರ್ ಕೌಂಟಿ ಪರ 1956ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಡಿಕಿ ಬರ್ಡ್, 93 ಪಂದ್ಯಗಳಿಂದ 3,314 ರನ್ ಗಳಿಸಿದ್ದರು. 1964 ರಲ್ಲಿ ನಿವೃತ್ತಿ ಘೋಷಿಸಿದ್ದರು.

1974ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ದಿಗ್ಗಜ ಸುನಿಲ್ ಗಾವಸ್ಕರ್ ಅವರ ಕಣ್ಣಿಗೆ ತಲೆಗೂದಲು ತೊಂದರೆ ಮಾಡುತ್ತಿದ್ದರಿಂದ, ಡಿಕಿ ಬರ್ಡ್ ಅವರು ಬಾಲ್ನ ತ್ರೆಡ್ ಕತ್ತರಿಸುವ ಕತ್ತರಿಯಲ್ಲಿ ಕ್ರೀಡಾಂಗಣದಲ್ಲೇ ಗಾವಸ್ಕರ್ ಅವರ ಕೂದಲು ಕತ್ತರಿಸಿದ್ದರು.

ಡಿಕಿ ಬರ್ಡ್ ಅವರು ಕೊನೆಯ ಬಾರಿ 1996ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ನಲ್ಲಿ ಅಂಪೈರ್ ಆಗಿದ್ದರು. ಭಾರತದ ಮಾಜಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ ಆ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.

ಬ್ರಹ್ಮಚಾರಿಯಾಗಿದ್ದ ಡಿಕಿ ಬರ್ಡ್ ಅವರು ರಾಣಿ ಎಲಿಜಬೆತ್, ಲೇಖಕ ಸ್ಟೀಫನ್ ಕಿಂಗ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು.
.ಏಷ್ಯಾ ಕಪ್ | ಯಾವ ತಂಡ ಬೇಕಾದರೂ ಭಾರತವನ್ನು ಸೋಲಿಸಬಹುದು: ಬಾಂಗ್ಲಾ ಕೋಚ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.