ಗುರುವಾರ , ಜುಲೈ 16, 2020
26 °C

ಕೊರೊನಾ ಬಿಕ್ಕಟ್ಟು | ವಿಂಡೀಸ್‌ ಆಟಗಾರರ ವೇತನ ಕಡಿತ

ಪಿಟಿಐ Updated:

ಅಕ್ಷರ ಗಾತ್ರ : | |

ಸೇಂಟ್‌ ಜಾನ್ಸ್‌, ಆ್ಯಂಟಿಗ ಮತ್ತು ಬಾರ್ಬುಡ: ಕೊರೊನಾ ಬಿಕ್ಕಟ್ಟಿನಿಂದ ತತ್ತರಿಸಿರುವ ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ (ಸಿಡಬ್ಲ್ಯುಐ),  ಆಟಗಾರರು ಹಾಗೂ ಎಲ್ಲಾ ಸಿಬ್ಬಂದಿಯ ವೇತನ ಕಡಿತ ಮಾಡಲು ಮುಂದಾಗಿದೆ. ಜುಲೈ ಆರಂಭದಿಂದಲೇ ಇದು ಅನ್ವಯವಾಗಲಿದೆ.

ಹಣಕಾಸು ಕಾರ್ಯತಂತ್ರ ಸಲಹಾ ಸಮಿತಿಯ (ಎಫ್‌ಎಸ್‌ಎಸಿ) ಶಿಫಾರಸಿನ ಆಧಾರದಲ್ಲಿ ಸಿಡಬ್ಲ್ಯುಐ ಈ ನಿರ್ಧಾರ ಕೈಗೊಂಡಿದೆ. 

‘ಕೋವಿಡ್‌ನಿಂದಾಗಿ ಕ್ರಿಕೆಟ್‌ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಹೀಗಾಗಿ ಮಂಡಳಿಗೆ ಯಾವ ಆದಾಯವೂ ಬರುತ್ತಿಲ್ಲ. ನಷ್ಟವನ್ನು ಸರಿದೂಗಿಸುವ ಸಲುವಾಗಿ ಶೇಕಡ 50 ರಷ್ಟು ವೇತನ ಕಡಿತ ಮಾಡುವ ನಿರ್ಧಾರ ಕೈಗೊಂಡಿದ್ದೇವೆ. ಇದು ತಾತ್ಕಾಲಿಕ ಕ್ರಮ’ ಎಂದು ಸಿಡಬ್ಲ್ಯುಐ, ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು