ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌: ಅಗ್ರಸ್ಥಾನದಲ್ಲಿ ಭಾರತ

2ನೇ ಸ್ಥಾನದಲ್ಲಿರುವ ಕಿವೀಸ್‌ಗೂ ಭಾರತಕ್ಕೂ 240 ಅಂಕಗಳ ಅಂತರ
Last Updated 16 ನವೆಂಬರ್ 2019, 16:01 IST
ಅಕ್ಷರ ಗಾತ್ರ

ನವದೆಹಲಿ:ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಆಡಿರುವ ಆರೂಪಂದ್ಯಗಳನ್ನು ಗೆದ್ದಿರುವ ಭಾರತ, ತನ್ನ ಖಾತೆಯಲ್ಲಿ ಒಟ್ಟು 300 ಅಂಕಗಳನ್ನು ಹೊಂದಿದ್ದು ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

60 ಅಂಕಗಳನ್ನು ಹೊಂದಿರುವ ನ್ಯೂಜಿಲೆಂಡ್‌ ತಂಡಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಇಷ್ಷೇ ಅಂಕ ಹೊಂದಿರುವ ಶ್ರೀಲಂಕಾ ಮೂರನೇ ಸ್ಥಾನದಲ್ಲಿದೆ.ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಕ್ರಮವಾಗಿ 4, 5ನೇ ಸ್ಥಾನದಲ್ಲಿವೆ.

ಪಾಯಿಂಟ್‌ ಹಂಚಿಕೆ ಹೇಗೆ?
ಸರಣಿಯ ಸ್ವರೂಪಕ್ಕೆ ಅನುಗುಣವಾಗಿ ಪಾಯಿಂಟ್ ಹಂಚಿಕೆ ಮಾಡಲಾಗುತ್ತದೆ.
ಉದಾಹರಣೆಗೆ.. ಎರಡು ಪಂದ್ಯಗಳ ಸರಣಿಯಲ್ಲಿ ಪ್ರತಿ ಪಂದ್ಯ ಗೆಲುವಿಗೆ 60 ಅಂಕ, ಪಂದ್ಯ ಸಮಬಲ ಕಂಡುಬಂದರೆ 30 ಅಂಕ ಹಾಗೂ ಡ್ರಾ ಮಾಡಿಕೊಂಡರೆ 20 ಅಂಕ ನಿಗದಿಪಡಿಸಲಾಗಿರುತ್ತದೆ.

ಸರಣಿ ಪಂದ್ಯ ಗೆದ್ದರೆ ಪಂದ್ಯ ಸಮಬಲವಾದರೆ ಪಂದ್ಯ ಡ್ರಾ ಆದರೆ
2 ಪಂದ್ಯ 60 30 20
3 ಪಂದ್ಯ 40 20 13
4 ಪಂದ್ಯ 30 15 10
5 ಪಂದ್ಯ 24 12 08

ಸದ್ಯ ಭಾರತ ತಂಡಚಾಂಪಿಯನ್‌ಷಿಪ್‌ನಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಎರಡು ಪಂದ್ಯಗಳ ಸರಣಿ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಸರಣಿಯನ್ನೂ ಕ್ಲೀನ್‌ ಸ್ವೀಪ್‌ ಮಾಡಿದೆ. ಮಾತ್ರವಲ್ಲದೆ ಪ್ರಸ್ತುತ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಎರಡು ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಗೆದ್ದಿದೆ. ಅದರಂತೆ ವಿಂಡೀಸ್‌ ವಿರುದ್ಧದ ಎರಡು ಗೆಲುವುಗಳಿಂದ 120 (60+60) ಅಂಕ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಗೆಲುವುಗಳಿಂದ ಒಟ್ಟು 120 (40+40+40) ಅಂಕಗಳನ್ನು ಗಳಿಸಿದೆ. ಬಾಂಗ್ಲಾ ಎದುರು ಮೊದಲ ಪಂದ್ಯ ಗೆದ್ದಿರುವುದರಿಂದ ಒಟ್ಟು 300 ಅಂಕಗಳು ಭಾರತದ ಖಾತೆಯಲ್ಲಿವೆ.

ಶ್ರೀಲಂಕಾ ಹಾಗೂ ನ್ಯೂಜಿಲೆಂಡ್‌ ನಡುವಣ ಎರಡು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ಒಂದೊಂದು ಪಂದ್ಯ ಗೆದ್ದು, ತಲಾ 60 ಅಂಕ ಹೊಂದಿವೆ.‌

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಐದು ಪಂದ್ಯಗಳ ಆ್ಯಷಸ್‌ ಸರಣಿ ಆಡಿವೆ. ಎರಡೂ ತಂಡಗಳು ಎರಡೆರಡು ಪಂದ್ಯ ಗೆದ್ದಿವೆ. ಉಳಿದೊಂದು ಪಂದ್ಯ ಡ್ರಾ ಆಗಿದೆ. ಹಾಗಾಗಿ ನಿಯಮದಂತೆ ಎರಡು ಗೆಲುವಿಗೆ 48 (24 + 24) ಅಂಕ ಮತ್ತು ಡ್ರಾ ಸಾಧನೆಗೆ 8 ಎಂಟು ಅಂಕಗಳು ಸೇರಿ ತಲಾ ಒಟ್ಟು 56 ಅಂಕ ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT