ಗುರುವಾರ , ಅಕ್ಟೋಬರ್ 17, 2019
24 °C

ಮನೀಷ್ ಮದುವೆ?

Published:
Updated:
Prajavani

ಬೆಂಗಳೂರು: ರಾಜ್ಯ ಕ್ರಿಕೆಟ್ ತಂಡದ ನಾಯಕ ಮನೀಷ್ ಪಾಂಡೆ ಅವರು ಮದುವೆಯಾಗಲಿದ್ದಾರೆ. ತಮಿಳು ಚಲನ ಚಿತ್ರಗಳಲ್ಲಿ ನಟಿಸಿರುವ ಆಶ್ರಿತಾ ಶೆಟ್ಟಿ ಅವರ ಕೈಹಿಡಿಯಲಿದ್ದಾರಂತೆ. ವರ್ಷ ಗಳಿಂದ ಇಬ್ಬರೂ ಸ್ನೇಹಿತರಾಗಿದ್ದರು.

ಬಹಳಷ್ಟು ಕಾರ್ಯಕ್ರಮಗಳಲ್ಲಿ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ಇದುವರೆಗೆ ಅವರ ಮದುವೆಯ ವಿಷಯವು ಗುಟ್ಟಾಗಿತ್ತು. ಅವರು ಡಿಸೆಂಬರ್‌ ಮೊದಲ ವಾರದಲ್ಲಿ ಮುಂಬೈನಲ್ಲಿ ಮದುವೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

30 ವರ್ಷದ ಮನೀಷ್ ಭಾರತ ತಂಡವನ್ನು ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಐಪಿಎಲ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ. 

Post Comments (+)