ಅಖಿಲ ಧನಂಜಯ ಮೇಲೆ ಐಸಿಸಿ ಕೆಂಗಣ್ಣು

7

ಅಖಿಲ ಧನಂಜಯ ಮೇಲೆ ಐಸಿಸಿ ಕೆಂಗಣ್ಣು

Published:
Updated:
Deccan Herald

ಕೊಲಂಬೊ: ಶ್ರೀಲಂಕಾದ ಆಫ್ ಸ್ಪಿನ್ನರ್ ಅಖಿಲ ಧನಂಜಯ ಅವರ ಬೌಲಿಂಗ್ ಶೈಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತೀಚೆಗೆ ನಡೆದ ಏಕದಿನ, ಟ್ವೆಂಟಿ–20 ಮತ್ತು ಟೆಸ್ಟ್ ಪಂದ್ಯಗಳಲ್ಲಿ ಅವರು ಮಾಡಿರುವ ಬೌಲಿಂಗ್ ಬಗ್ಗೆ ಐಸಿಸಿ ಭಾನುವಾರ ಸಂದೇಹ ವ್ಯಕ್ತಪಡಿಸಿದೆ.

ಧನಂಜಯ ಅವರ ಬೌಲಿಂಗ್ ಶೈಲಿಯನ್ನು ವಿಶ್ಲೇಷಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಅವರು ಎರಡು ವಾರ ಪರೀಕ್ಷೆಗೆ ಹಾಜರಾಗಬೇಕು ಎಂದು ತಿಳಿಸಿರುವ ಐಸಿಸಿ, ಪರೀಕ್ಷೆಯ ವರದಿ ಬರುವವರೆಗೆ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪಾಲ್ಗೊಳ್ಳಲು ಅವರಿಗೆ ಅವಕಾಶ ನೀಡಿದೆ.

ಕಳೆದ ವಾರ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಧನಂಜಯ 184 ರನ್‌ ನೀಡಿ ಎರಡು ವಿಕೆಟ್ ಕಬಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !