ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದುಲೀಪ್ ಟ್ರೋಫಿ: ಭಾರತ ಸಿ ತಂಡದ ಹೋರಾಟ

ಅಭಿಷೇಕ್ ಪೊರೆಲ್‌ 82
Published : 20 ಸೆಪ್ಟೆಂಬರ್ 2024, 15:43 IST
Last Updated : 20 ಸೆಪ್ಟೆಂಬರ್ 2024, 15:43 IST
ಫಾಲೋ ಮಾಡಿ
Comments

ಅನಂತಪುರ: ಪ್ರಮುಖ ಆಟಗಾರರಾದ ಋತುರಾಜ್ ಗಾಯಕವಾಡ, ಸಾಯಿ ಸುದರ್ಶನ್, ರಜತ್ ಪಾಟೀದಾರ ಮತ್ತು ಇಶಾನ್ ಕಿಶನ್ ತಮಗೊಲಿದ ಉತ್ತಮ ಅವಕಾಶಗಳನ್ನು ವ್ಯರ್ಥಪಡಿಸಿಕೊಂಡರು. ಭಾರತ ‘ಎ’ ತಂಡದ 297 ರನ್‌ಗಳಿಗೆ ಉತ್ತರವಾಗಿ ದುಲೀಪ್ ಟ್ರೋಫಿ ಕ್ರಿಕೆಟ್‌ ಲೀಗ್‌ ಪಂದ್ಯದ ಎರಡನೇ ದಿನವಾದ ಶುಕ್ರವಾರ ದಿನದಾಟ ಮುಗಿದಾಗ ಭಾರತ ‘ಸಿ’ ತಂಡ 7 ವಿಕೆಟ್‌ಗೆ 216 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಮಧ್ಯಮ ಕ್ರಮಾಂಕದ ಆಟಗಾರ ಅಭಿಷೇಕ್ ಪೊರೆಲ್ 82 (113ಎ, 4x9) ಈ ಮೊತ್ತಕ್ಕೆ ಪ್ರಮುಖ ಕಾರಣರಾದರು. ಕೊನೆಯಲ್ಲಿ ಪುಲ್ಖಿತ್ ನಾರಂಗ್ (ಔಟಾಗದೇ 35) ಮತ್ತು ವೈಶಾಖ ವಿಜಯಕುಮಾರ್ (ಔಟಾಗದೇ 14) ಮುರಿಯದ ಎಂಟನೇ ವಿಕೆಟ್‌ಗೆ 49 ರನ್‌ ಸೇರಿಸಿದ್ದರಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು.

ಉತ್ತರ ಪ್ರದೇಶದ 20 ವರ್ಷ ವಯಸ್ಸಿನ ವೇಗಿ ಅಕಿಬ್‌ ಖಾನ್ (43ಕ್ಕೆ3) ಅವರು ಗಾಯಕವಾಡ್, ಪಾಟೀದಾರ ಮತ್ತು ಸುದರ್ಶನ್ ಅವರ ವಿಕೆಟ್‌ಗಳನ್ನು ಪಡೆದರು.

ಇದಕ್ಕೆ ಮೊದಲು ಗುರುವಾರ 7 ವಿಕೆಟ್‌ಗೆ 224 ರನ್ ಗಳಿಸಿದ್ದ ಭಾರತ ‘ಎ’ ತಂಡ ಕೆಳಕ್ರಮಾಂಕದಲ್ಲಿ ಆವೇಶ್ ಖಾನ್ ಅವರ ಅರ್ಧ ಶತಕದ ನೆರವಿನಿಂದ (ಅಜೇಯ 51, 68ಎ, 4x5, 6x4) ಮೊತ್ತವನ್ನು 300ರ ಬಳಿ ತಲುಪಿಸಿತು. ಅವರಿಗೆ ನೆರವು ನೀಡಿದ ಪ್ರಸಿದ್ಧ ಕೃಷ್ಣ 34 ರನ್ ಗಳಿಸಿದರು. ಶಾಶ್ವತ್ ರಾವತ್‌ (ಗುರುವಾರ ಔಟಾಗದೇ 122) ನಿನ್ನೆಯ ಮೊತ್ತಕ್ಕೆ 2 ರನ್ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಭಾರತ ಎ: 90.5 ಓವರುಗಳಲ್ಲಿ 297 (ಶಾಶ್ವತ್ ರಾವತ್ 124, ; ಭಾರತ: 64 ಓವರುಗಳಲ್ಲಿ 7 ವಿಕೆಟ್‌ಗೆ 216 (ಬಾಬಾ ಇಂದ್ರಜಿತ್ ಗಾಯಗೊಂಡು ನಿವೃತ್ತ 32, ಅಭಿಷೇಕ್ ಪೊರೆಲ್ 82, ಪುಲ್ಖಿತ್‌ ನಾರಂಗ್ ಔಟಾಗದೇ 35, ವೈಶಾಖ ವಿಜಯಕುಮಾರ್ ಔಟಾಗದೇ 14; ಅಕಿಬ್ ಖಾನ್ 43ಕ್ಕೆ3, ಶಮ್ಸ್‌ ಮುಲಾನಿ 30ಕ್ಕೆ2).

ಅಭಿಮನ್ಯು ಈಶ್ವರನ್ ಶತಕ

ಅನಂತಪುರ: ಮತ್ತೊಮ್ಮೆ ಏಕಾಂಗಿಯಾಗಿ ಹೋರಾಡಿದ ಅಭಿಮನ್ಯುವಿನ ಈಶ್ವರನ್ ಅವರು ತಾಳ್ಮೆಯ ಶತಕ (116 170ಎ  ) ಬಾರಿಸಿದರು. ಇದರ ಹೊರತಾಗಿಯೂ ದುಲೀಪ್ ಟ್ರೊಫಿ ಇನ್ನೊಂದು ಲೀಗ್‌ ಪಂದ್ಯದ ಎರಡನೇ ದಿನವಾದ ಶುಕ್ರವಾರ ಭಾರತ ‘ಬಿ’ ತಂಡವು 6 ವಿಕೆಟ್‌ಗೆ 210 ರನ್ ಗಳಿಸಲಷ್ಟೇ ಶಕ್ತವಾಗಿದೆ. ಭಾರತ ‘ಡಿ’ ತಂಡದ ಮೊತ್ತ ದಾಟಲು ಅದು ಇನ್ನೂ 140 ರನ್ ದೂರದಲ್ಲಿದೆ. ಇದಕ್ಕೆ ಮೊದಲು ಸಂಜು ಸ್ಯಾಮ್ಸನ್ ಮೊದಲ ದರ್ಜೆ ಕ್ರಿಕೆಟ್‌ನಲ್ಲಿ 11ನೇ ಶತಕ ಗಳಿಸಿದರು. ಅವರು 106 ರನ್‌ಗಳ (105ಎ 4x12 6x3) ನೆರವಿನಿಂದ ಭಾರತ ‘ಡಿ’ ತನ್ನ ಮೊದಲ ಇನಿಂಗ್ಸ್‌ನಲ್ಲಿ 349 ರನ್‌ಗಳ ಉತ್ತಮ ಮೊತ್ತ ಗಳಿಸಿತು. ವೇಗಿ ನವದೀಪ್ ಸೈನಿ 5 ವಿಕೆಟ್‌ಗಳ ಗೊಂಚಲು ಪಡೆದರು. ಭಾರತ ‘ಬಿ’ ತಂಡದ ಪರ ಈಶ್ವರನ್ ಬಿಟ್ಟರೆ ಉಳಿದವರು ಯಾರೂ ಉಪಯುಕ್ತ ಕೊಡುಗೆ ನೀಡಲಿಲ್ಲ. ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರು ‘ಬಿ’ ತಂಡದ ಪ್ರುಖ ಆಟಗಾರರಾದ ಸೂರ್ಯಕುಮಾರ್ ಯಾದವ್ (5) ಮತ್ತು ಉತ್ತಮ ಲಯದಲ್ಲಿರುವ ಮುಶೀರ್ ಖಾನ್ (5) ಅವರ ವಿಕೆಟ್‌ಗಳನ್ನು ಪಡೆದರು. ಒಂದು ಹಂತದಲ್ಲಿ 100 ರನ್‌ಗಳಾಗುಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿದ್ದ ‘ಬಿ’ ತಂಡ ಅಭಿಮನ್ಯು ಮತ್ತು ವಾಷಿಂಗ್ಟನ್ ಸುಂದರ್ (ಅಜೇಯ 39) ಅವರ ನಡುವೆ ಆರನೇ ವಿಕೆಟ್‌ಗೆ 105 ರನ್ ಜೊತೆಯಾಟದಿಂದ ಕುಸಿತ ತಪ್ಪಿಸುವಲ್ಲಿ ಯಶಸ್ವಿ ಆಯಿತು. ಸ್ಕೋರುಗಳು: ಮೊದಲ ಇನಿಂಗ್ಸ್: ಭಾರತ ‘ಡಿ’: 87.3 ಓವರುಗಳಲ್ಲಿ 349 (ಸಂಜು ಸ್ಯಾಮ್ಸನ್ 106; ನವದೀಪ್‌ ಸೈನಿ 74ಕ್ಕೆ5 ರಾಹುಲ್ ಚಾಹರ್ 60ಕ್ಕೆ3); ಭಾರತ ‘ಬಿ’’ 56 ಓವರುಗಳಲ್ಲಿ 6 ವಿಕೆಟ್‌ಗೆ 210 (ಅಭಿಮನ್ಯು ಈಶ್ವರನ್ 116 ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ 39; ಅರ್ಷದೀಪ್ ಸಿಂಗ್ 30ಕ್ಕೆ3 ಆದಿತ್ಯ ಠಾಕ್ರೆ 33ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT