ಸೆಂಚುರಿಯನ್: ತಮ್ಮ ಕ್ರಿಕೆಟ್ ವೃತ್ತಿ ಜೀವನದ ಅಂತಿಮ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಎಡಗೈ ಆರಂಭಿಕ ಬ್ಯಾಟರ್ ಡೀನ್ ಎಲ್ಗರ್ ನಾಯಕರಾಗಲಿದ್ದಾರೆ.

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ನಾಯಕ ತೆಂಬಾ ಬವುಮಾ, ಭಾರತ ವಿರುದ್ಧ ಕೇಪ್ಟೌನ್ನಲ್ಲಿ ನಡೆಯಲಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ 36 ವರ್ಷದ ಎಲ್ಗರ್ ಅವರನ್ನು ನಾಯಕರನ್ನಾಗಿ ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ) ನೇಮಕಗೊಳಿಸಿದೆ.
.WTC Points Table: ಭಾರತಕ್ಕೆ ಎರಡು ಅಂಕ ಕಡಿತ; 6ನೇ ಸ್ಥಾನಕ್ಕೆ ಕುಸಿತ.ದ.ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್; ಭಾರತ ತಂಡಕ್ಕೆ ಆವೇಶ್ ಖಾನ್ ಸೇರ್ಪಡೆ.
ಸೆಂಚುರಿಯನ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಇನಿಂಗ್ಸ್ ಹಾಗೂ 32 ರನ್ ಅಂತರದ ಗೆಲುವು ದಾಖಲಿಸಿತ್ತು. ಈ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಬವುಮಾ ಗಾಯಗೊಂಡಿದ್ದರು. ಇದರಿಂದಾಗಿ ಮೊದಲ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿರಲಿಲ್ಲ.

ಈ ಪಂದ್ಯದಲ್ಲಿ ಶತಕ (185) ಗಳಿಸಿದ್ದ ಎಲ್ಗರ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಮತ್ತೊಂದೆಡೆ ತೆಂಬಾ ಬವುಮಾ ಅವರ ಸ್ಥಾನವನ್ನು ಜುಬೇರ್ ಹಂಝಾ ತುಂಬಲಿದ್ದಾರೆ.

ಡೀನ್ ಎಲ್ಗರ್ ಟೆಸ್ಟ್ ವೃತ್ತಿ ಜೀವನ:

ಪಂದ್ಯ: 85

ಇನಿಂಗ್ಸ್: 150

ಅಜೇಯ: 10

ರನ್: 5,331

ಗರಿಷ್ಠ: 199

ಸರಾಸರಿ: 38.08

ಶತಕ: 14

ಅರ್ಧಶತಕ: 23

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.