ಲೀಡ್ಸ್: ಆತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ನಾಯಕ ಶುಭಮನ್ ಗಿಲ್ ಹಾಗೂ ಉಪನಾಯಕ ರಿಷಭ್ ಪಂತ್, ದಿಗ್ಗಜರ ಸಾಲಿಗೆ ಸೇರಿಕೊಂಡರು.

ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಲೀಡ್ಸ್ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ, ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (101 ರನ್), ನಾಯಕ ಶುಭಮನ್ ಗಿಲ್ (ಅಜೇಯ 127 ರನ್) ಹಾಗೂ ರಿಷಭ್ ಪಂತ್ (65 ರನ್) ಅವರ ಅಮೋಘ ಬ್ಯಾಟಿಂಗ್ ಬಲದಿಂದ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 359 ರನ್ ಕಲೆಹಾಕಿದೆ.

ಇನ್ನೂ ಏಳು ವಿಕೆಟ್ ಬಾಕಿ ಇದ್ದು, ಬೃಹತ್ ಮೊತ್ತ ಕಲೆಹಾಕುವತ್ತ ಹೆಜ್ಜೆ ಇಟ್ಟಿದೆ.

ಪಂತ್ ದಾಖಲೆ
ಇಂಗ್ಲೆಂಡ್ ಬೌಲರ್ಗಳೆದುರು ಲೀಲಾಜಾಲವಾಗಿ ಬ್ಯಾಟ್ ಬೀಸಿದ ಪಂತ್, ಅಜೇಯ ಅರ್ಧಶತಕ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಮೂರು ಸಾವಿರ ರನ್ ಪೂರೈಸಿದ್ದಾರೆ. ಇದರೊಂದಿಗೆ, ಈ ಸಾಧನೆ ಮಾಡಿದ ಭಾರತದ ಎರಡನೇ ವಿಕೆಟ್ ಕೀಪರ್ ಎನಿಸಿದ್ದಾರೆ.

102 ಎಸೆತಗಳಲ್ಲಿ 65 ರನ್ ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿರುವ ಪಂತ್, ಇದುವರೆಗೆ ಒಟ್ಟು 44 ಪಂದ್ಯಗಳ 76 ಇನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 43.04ರ ಸರಾಸರಿಯಲ್ಲಿ 3,013 ರನ್ ಕಲೆಹಾಕಿದ್ದಾರೆ.

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 90 ಪಂದ್ಯಗಳ 144 ಇನಿಂಗ್ಸ್ಗಳಲ್ಲಿ 4,876 ರನ್ ಗಳಿಸಿರುವುದು ಸದ್ಯ ದಾಖಲೆಯಾಗಿದೆ.

ಗಿಲ್ ಸಾಧನೆ
ಈ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿರುವ ಗಿಲ್, ನಾಯಕನಾಗಿ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ ಭಾರತದ 'ದಿಗ್ಗಜರ' ಕ್ಲಬ್ಗೆ ಸೇರಿದರು. ಈ ಹಿಂದೆ ವಿಜಯ್ ಹಜಾರೆ (164*), ಸುನಿಲ್ ಗವಾಸ್ಕರ್ (116), ದಿಲೀಪ್ ವೆಂಗಸರ್ಕರ್ (102) ಮತ್ತು ವಿರಾಟ್ ಕೊಹ್ಲಿ (141) ಅವರೂ ನಾಯಕರಾಗಿ ಮೊದಲ ಟೆಸ್ಟ್ನಲ್ಲೇ ಶತಕ ಬಾರಿಸಿದ್ದರು.

ಒಟ್ಟಾರೆಯಾಗಿ ಇದು ಅವರಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಆರನೇ ಶತಕವಾಗಿದೆ.
.IND vs ENG Test | ಜೈಸ್ವಾಲ್, ಗಿಲ್ ಶತಕ: ಬೃಹತ್ ಮೊತ್ತದತ್ತ ಭಾರತ.ಇಂಗ್ಲೆಂಡ್ ನೆಲದಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಜೈಸ್ವಾಲ್ ಶತಕ ಸಾಧನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.