ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ವಿರುದ್ಧ ಮುಯ್ಯಿ ತೀರಿಸಿಕೊಳ್ಳುತ್ತೇವೆ: ಜೋ ರೂಟ್‌

Last Updated 9 ಜುಲೈ 2019, 19:45 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಂ: ‘ರೌಂಡ್‌ ರಾಬಿನ್‌ ಲೀಗ್‌ ಹಂತದಲ್ಲಿ ಆಸ್ಟ್ರೇಲಿಯಾ ನಮ್ಮ ಎದುರು ಗೆದ್ದಿದೆ. ಆ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ಸಿದ್ಧರಾಗಿದ್ದೇವೆ’ ಎಂದು ಇಂಗ್ಲೆಂಡ್‌ ತಂಡದ ಬ್ಯಾಟ್ಸ್‌ಮನ್‌ ಜೋ ರೂಟ್‌ ತಿಳಿಸಿದ್ದಾರೆ.

ಎಜ್‌ಬಾಸ್ಟನ್‌ನಲ್ಲಿ ಗುರುವಾರ ನಡೆಯುವ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.

‘ಹಿಂದಿನ 11 ಏಕದಿನ ಪಂದ್ಯಗಳ ಪೈಕಿ ಒಂಬತ್ತರಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ್ದೇವೆ. ಹಿಂದಿನ ನಾಲ್ಕು ವರ್ಷಗಳಲ್ಲಿ ನಡೆದ ಸರಣಿಗಳಲ್ಲೂ ತಂಡದಿಂದ ಶ್ರೇಷ್ಠ ಸಾಮರ್ಥ್ಯ ಮೂಡಿಬಂದಿದೆ. ಹೀಗಾಗಿ ಆಟಗಾರರ ವಿಶ್ವಾಸ ಇಮ್ಮಡಿಸಿದೆ. ನಾಲ್ಕರ ಘಟ್ಟದಲ್ಲಿ ಆ್ಯರನ್‌ ಫಿಂಚ್‌ ಬಳಗವನ್ನು ಸೋಲಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ’ ಎಂದಿದ್ದಾರೆ.

‘ಕ್ರಿಕೆಟ್‌ನಲ್ಲಿ ಪಂದ್ಯದ ದಿನ ಏನು ಬೇಕಾದರೂ ನಡೆಯಬಹುದು. ಯಾರು ಆಟದ ಎಲ್ಲಾ ವಿಭಾಗಗಳಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರುತ್ತಾರೊ ಅವರಿಗೆ ಗೆಲುವು ಒಲಿಯುವುದು ನಿಶ್ಚಿತ. ಹೀಗಾಗಿ ಅಂಕಿ ಸಂಖ್ಯೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಗುಣಮಟ್ಟದ ಆಟ ಆಡುವತ್ತ ಮಾತ್ರ ಚಿತ್ತ ಹರಿಸುತ್ತೇವೆ’ ಎಂದು ನುಡಿದಿದ್ದಾರೆ.

‘ಹೊಸ ಚೆಂಡಿನೊಂದಿಗೆ ಕಣಕ್ಕಿಳಿಯುವ ಮಿಷೆಲ್‌ ಸ್ಟಾರ್ಕ್‌ ಮತ್ತು ಜೇಸನ್‌ ಬೆಹ್ರೆನ್‌ಡೊರ್ಫ್‌ ತುಂಬಾ ಅಪಾಯಕಾರಿ. ಅವರನ್ನು ಎದುರಿಸಲು ಸೂಕ್ತ ರಣತಂತ್ರ ಹೆಣೆದು ಕಣಕ್ಕಿಳಿಯುತ್ತೇವೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT