ಬುಧವಾರ, ಜನವರಿ 22, 2020
20 °C

ಕ್ರಿಕೆಟ್‌: ಕ್ಲೀನ್‌ ಸ್ವೀಪ್‌ ಸಾಧಿಸಿದ ವಿಂಡೀಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗ್ರೆನಡಾ: ಎವಿನ್‌ ಲೂಯಿಸ್‌ (102; 97 ಎಸೆತ, 6 ಬೌಂಡರಿ, 5 ಸಿಕ್ಸರ್‌) ಅವರ ಆಕರ್ಷಕ ಶತಕ ಮತ್ತು ಹೇಡನ್‌ ವಾಲ್ಶ್‌ (36ಕ್ಕೆ4) ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ವೆಸ್ಟ್‌ ಇಂಡೀಸ್ ತಂಡ ಐರ್ಲೆಂಡ್‌ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಡಕ್ವರ್ಥ್‌ ಲೂಯಿಸ್‌ ನಿಯಮದ ಅನ್ವಯ 5 ವಿಕೆಟ್‌ಗಳಿಂದ ಗೆದ್ದಿದೆ. ಇದರೊಂದಿಗೆ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ (3–0) ಸಾಧನೆ ಮಾಡಿದೆ.

ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಐರ್ಲೆಂಡ್‌ 49.1 ಓವರ್‌ಗಳಲ್ಲಿ 203ರನ್‌ ಗಳಿಗೆ ಆಲೌಟ್‌ ಆಯಿತು. ವಿಂಡೀಸ್‌ ತಂಡದ ಇನಿಂಗ್ಸ್‌ ವೇಳೆ ಧಾರಾಕಾರ ಮಳೆ ಸುರಿಯಿತು. ಹೀಗಾಗಿ ಆತಿಥೇಯರಿಗೆ 47 ಓವರ್‌ಗಳಲ್ಲಿ 197ರನ್‌ಗಳ ಗೆಲುವಿನ ಗುರಿ ನೀಡಲಾಯಿತು. ಕೀರನ್‌ ಪೊಲಾರ್ಡ್‌ ಬಳಗ 36.2 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಗುರಿ ಕ್ರಮಿಸಿತು.

ಸಂಕ್ಷಿಪ್ತ ಸ್ಕೋರ್‌: ಐರ್ಲೆಂಡ್‌; 49.1 ಓವರ್‌ಗಳಲ್ಲಿ 203 (ಜೇಮ್ಸ್‌ ಮೆಕ್ಲಮ್‌ 20, ಆ್ಯಂಡಿ ಬಾಲ್‌ಬಿರ್ನಿ 71, ಕೆವಿನ್‌ ಓಬ್ರಿಯನ್‌ 21, ಆ್ಯಂಡಿ ಮೆಕ್‌ಬ್ರೈನ್ ಔಟಾಗದೆ 25; ಒಶೇನ್‌ ಥಾಮಸ್‌ 41ಕ್ಕೆ3, ರಾಸ್ಟನ್‌ ಚೇಸ್‌ 53ಕ್ಕೆ2, ಹೇಡನ್‌ ವಾಲ್ಶ್‌ 36ಕ್ಕೆ4).

ವೆಸ್ಟ್‌ ಇಂಡೀಸ್‌: 36.2 ಓವರ್‌ಗಳಲ್ಲಿ 5 ವಿಕೆಟ್‌ಗೆ 199 (ಎವಿನ್‌ ಲೂಯಿಸ್‌ 102, ಬ್ರೆಂಡನ್‌ ಕಿಂಗ್‌ 38, ನಿಕೋಲಸ್‌ ಪೂರನ್‌ ಔಟಾಗದೆ 43; ಆ್ಯಂಡಿ ಮೆಕ್‌ಬ್ರೈನ್‌ 50ಕ್ಕೆ2, ಬಾರಿ ಮೆಕ್‌ಕಾರ್ಟಿ 49ಕ್ಕೆ1, ಕ್ರೆಗ್‌ ಯಂಗ್‌ 57ಕ್ಕೆ1, ಸಿಮಿ ಸಿಂಗ್‌ 29ಕ್ಕೆ1). ಫಲಿತಾಂಶ: ವಿಂಡೀಸ್‌ ತಂಡಕ್ಕೆ 5 ವಿಕೆಟ್ ಗೆಲುವು.

ಪಂದ್ಯ ಮತ್ತು ಸರಣಿ ಶ್ರೇಷ್ಠ: ಎವಿನ್‌ ಲೂಯಿಸ್‌.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು