ಮಂಗಳವಾರ, ಜೂನ್ 28, 2022
26 °C
ವೃತ್ತಿ ಆರಂಭದ ಸವಿ ನೆನಪು

ಬಜಾಜ್ ಸ್ಕೂಟರ್‌ನೊಂದಿಗೆ ಸವಿ ನೆನಪುಗಳನ್ನು ಮೆಲಕು ಹಾಕಿದ ಅಜರುದ್ದಿನ್

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತ ತಂಡದ ಮಾಜಿ ಕ್ರಿಕೇಟಿಗ ಮಹಮ್ಮದ್ ಅಜರುದ್ದೀನ್ ಅವರು ಶುಕ್ರವಾರ ಟ್ವಿಟರ್‌ನಲ್ಲಿ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ತಮ್ಮ ಬಜಾಜ್ ಚೇತಕ್ ಸ್ಕೂಟರ್ ನ ಮೂರು ಚಿತ್ರಗಳನ್ನು ಹಂಚಿಕೊಂಡು ಅದರೊಂದಿಗೆ ಕಳೆದ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.

‘ನನ್ನ ವೃತ್ತಿ ಆರಂಭದ ಸವಿ ನೆನಪುಗಳಲ್ಲಿ ಇದೊಂದು (ಬಜಾಜ್ ಸ್ಕೂಟರ್) ಅವಿಷ್ಮರಣೀಯವಾದದ್ದು. ಇದನ್ನು ನಾನು ನನ್ನ ಹಿತೈಷಿಯೊಬ್ಬರಿಂದ ನನ್ನ ಪ್ರತಿಭೆಗೆ ಮನ್ನಣೆಯಾಗಿ ಪಡೆದಿದ್ದೆ. ಇದೇ ಸ್ಕೂಟರ್‌ನಲ್ಲಿ ನಾನು ಮೈದಾನಕ್ಕೆ ತೆರಳಿ ಕ್ರಿಕೆಟ್ ಅಭ್ಯಾಸ ನಡೆಸುತ್ತಿದ್ದೆ‘ ಎಂದು ಅಜರುದ್ದೀನ್ ಬರೆದುಕೊಂಡಿದ್ದಾರೆ.

 

ಭಾರತ ಟೆಸ್ಟ್‌ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಅವರು ಭಾರತದ ಪರವಾಗಿ 99 ಟೆಸ್ಟ್‌ ಪಂದ್ಯ, 334 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಪ್ರಸ್ತುತ ಅವರು ರಾಜಕೀಯದಲ್ಲಿ ಸಕ್ರಿಯರಾಗಿರುವುದಲ್ಲದೇ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿದ್ದಾರೆ.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು