ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೆಹ್ವಾಗ್ ರೀತಿ ಸ್ಫೋಟಕ ಬ್ಯಾಟ್ಸ್‌ಮನ್ ಅಲ್ಲದಿದ್ದರೂ, ಮಯಂಕ್‌ಗೆ ಸ್ಪಷ್ಟತೆ ಇದೆ’

Last Updated 20 ಫೆಬ್ರುವರಿ 2020, 11:38 IST
ಅಕ್ಷರ ಗಾತ್ರ

ನವದೆಹಲಿ:ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಅಥವಾ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್‌ ಅವರಂತೆ ಸ್ಫೋಟಕಬ್ಯಾಟಿಂಗ್‌ ನಡೆಸದಿದ್ದರೂ,ಆಟದ ಬಗ್ಗೆ ಹೊಂದಿರುವ ಸ್ಪಷ್ಟತೆಯೇಮಯಂಕ್ ಅಗರವಾಲ್‌ ಅವರ ದೊಡ್ಡ ಶಕ್ತಿ ಎಂದುಮಾಜಿ ಆಟಗಾರ ಗೌತಮ್‌ ಗಂಭೀರ್‌ ಹೇಳಿದ್ದಾರೆ. ಮಾತ್ರವಲ್ಲದೆ ನ್ಯೂಜಿಲೆಂಡ್‌ ವಿರುದ್ಧದ ಎರಡು ಪ‍ಂದ್ಯಗಳ ಟೆಸ್ಟ್ ಸರಣಿಯಲ್ಲಿ ಮಯಂಕ್‌ ಮಿಂಚಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ನಾನು ಮಯಂಕ್‌ರಲ್ಲಿ ಅಪಾರ ವಿಶ್ವಾಸ ಇಟ್ಟಿದ್ದೇನೆ. ಆತಪ್ರತಿಭಾಶಾಲಿ ಆಟಗಾರನಾಗಿರದೇ ಇರಬಹುದು. ಆದರೆ, ಸಂಘಟನಾತ್ಮಕವಾಗಿ ಆಡುತ್ತಾನೆ. ವಿರೇಂದ್ರ ಸೆಹ್ವಾಗ್‌ ಅಥವಾ ಡೇವಿಡ್‌ ವಾರ್ಡರ್‌ ಅವರು ಬೌಲರ್‌ಗಳಲ್ಲಿ ಭಯ ಮೂಡಿಸುವಂತೆ, ಮಯಂಕ್‌ ಆಡುವುದಿಲ್ಲ. ಆದರೆ, ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಮಯಂಕ್‌ಗೆ ಸ್ಪಷ್ಟತೆ ಇದೆ’ ಎಂದು ಪತ್ರಿಕೆಯೊಂದಕ್ಕೆ ಬರೆದಿರುವ ಲೇಖನದಲ್ಲಿ ತಿಳಿಸಿದ್ದಾರೆ.

ಕಳೆದ ಸರಣಿಗಳಲ್ಲಿ ಭಾರತ ಪರ ಮಯಂಕ್‌ ಅವರೊಟ್ಟಿಗೆ ಇನಿಂಗ್ಸ್‌ ಆರಂಭಿಸಿದ್ದ ರೋಹಿತ್‌ ಶರ್ಮಾ ಗಾಯಾಳಾಗಿದ್ದು ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿ ಈ ಸರಣಿಯಲ್ಲಿ ಮಯಂಕ್‌ ಜೊತೆಗೆ ಇನಿಂಗ್ಸ್‌ ಆರಂಭಿಸುವವರು ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರೋಹಿತ್‌ ಸ್ಥಾನಕ್ಕಾಗಿಪೃಥ್ವಿ ಶಾ ಮತ್ತು ಶುಭಮನ್‌ ಗಿಲ್ ಸ್ಪರ್ಧೆಯಲ್ಲಿದ್ದಾರೆ.

ಈ ಬಗ್ಗೆಯೂ ಬರೆದಿರುವ ಗಂಭೀರ್‌, ‘ನಾವು ಭಾರತ ಪರ ಹೊಸ ಆರಂಭಿಕ ಜೋಡಿಯನ್ನು ಕಾಣಲಿದ್ದೇವೆ. ಪೃಥ್ವಿ ಶಾ ಇಲ್ಲವೇ ಶುಭಮನ್‌ ಗಿಲ್ ಇಬ್ಬರೂ ಅವಕಾಶವನ್ನು ಹೇಗೆ ಬಳಸಿಕೊಳ್ಳಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT