ದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಹೀನಾಯವಾಗಿ ಸೋತ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ವಿಮರ್ಶೆ ಮಾಡುವ ಬರದಲ್ಲಿ ಕ್ರಿಕೆಟ್ ದಂತಕಥೆ ಸುನೀಲ್ ಗವಾಸ್ಕರ್ ವಿವಾದ ಸೃಷ್ಟಿ ಮಾಡಿದ್ದಾರೆ.

ನಟಿ ಅನುಷ್ಕಾ ಶರ್ಮಾ ಅವರನ್ನು ಒಳಗೊಂಡಂತೆ ವಿರಾಟ್ ಕೊಹ್ಲಿ ವಿರುದ್ಧ ಗವಾಸ್ಕರ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಸದ್ಯ ಅವರನ್ನು ವಿವಾದಕ್ಕೆ ದೂಡಿದೆ.

ಪಂಜಾಬ್ ತಂಡ ಕ್ಯಾಪ್ಟನ್ ಕೆ.ಎಲ್ ರಾಹುಲ್ ಅವರ ನಿರ್ಣಾಯಕ ಎರಡು ಕ್ಯಾಚ್ಗಳನ್ನು ಕೈ ಚೆಲ್ಲಿದ್ದ ವಿರಾಟ್ ಕೊಹ್ಲಿ, ಚೇಸಿಂಗ್ನಲ್ಲಿ ಉತ್ತಮವಾಗಿ ಆಡುವ ನಿರೀಕ್ಷೆ ಇತ್ತು. ಆದರೆ, ಅವರು ಬ್ಯಾಟಿಂಗ್ನಲ್ಲೂ ವೈಫಲ್ಯ ಅನುಭವಿಸಿದರು. ಐದು ಎಸೆತೆಗಳನ್ನು ಎದುರಿಸಿದ ಅವರು ಕೇವಲ ಒಂದು ರನ್ ಗಳಿಸಿ ಔಟಾದರು.

ಕಾಮೆಂಟರಿ ಬಾಕ್ಸ್ನಲ್ಲಿದ್ದ ಗವಾಸ್ಕರ್ ಅವರು ಕೊಹ್ಲಿ ಅವರ ವೈಫಲ್ಯಕ್ಕೆ ಅವರ ಪತ್ನಿ ಪತ್ನಿ ಅನುಷ್ಕಾ ಅವರನ್ನು ಒಳಗೊಂಡ ಆಕ್ಷೇಪಾರ್ಹವಾದ ಮಾತುಗಳನ್ನು ಆಡಿದ್ದಾರೆ. ಇದು ವಿರಾಟ್ ಕೊಹ್ಲಿ ಅಭಿಮಾನಿಗಳನ್ನು ಕೆರಳಿಸಿದೆ.

‘ಸುನೀಲ್ ಗವಾಸ್ಕರ್ ಅವರನ್ನು ಕಾಮೆಂಟರಿ ಬಾಕ್ಸ್ನಿಂದ ಹೊರಕ್ಕೆ ಎಳೆದುಹಾಕಬೇಕು,’ ಎಂದು ಕೆಲವರು ಬಿಸಿಸಿಐಗೆ ಒತ್ತಾಯಿಸಿದ್ದಾರೆ.

ಅನುಷ್ಕಾ ಶರ್ಮಾ ದೂಷಣೆಗೆ ಒಳಗಾಗುತ್ತಿರುವುದು ಇದೇ ಮೊದಲೇನೇಲ್ಲ. ವಿರಾಟ್ ಕೊಹ್ಲಿ ಕ್ರಿಕೆಟ್ನಲ್ಲಿ ವೈಫಲ್ಯ ಅನುಭವಿಸಿದಾ ಅನುಷ್ಕಾ ಅವರನ್ನು ಚರ್ಚೆಗೆ ಎಳೆದು ತರುವ ಪ್ರಯತ್ನಗಳು ಈಗಾಗಲೇ ಕೆಲ ಬಾರಿ ನಡೆದು ಹೋಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.