ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ಪಂದ್ಯದಲ್ಲಿ ಫೀಲ್ಡಿಂಗ್‌ ಮಾಡಿದ ಶ್ವಾನ: ವಿಡಿಯೊ ನೋಡಿ

Last Updated 12 ಸೆಪ್ಟೆಂಬರ್ 2021, 8:39 IST
ಅಕ್ಷರ ಗಾತ್ರ

ಐರ್ಲೆಂಡ್‌: ಟಿ20 ಕ್ರಿಕೆಟ್‌ ಪಂದ್ಯದ ವೇಳೆ ನಾಯಿಯೊಂದು ಫೀಲ್ಡಿಂಗ್‌ಗೆ ಇಳಿದಿದ್ದು, ಬ್ಯಾಟ್ಸ್‌ಮನ್‌ಗಳು ರನ್‌ ಕದಿಯುತ್ತಿದ್ದಾಗ ಚೆಂಡನ್ನು ಕಚ್ಚಿಕೊಂಡು ವಿಕೆಟ್‌ನತ್ತ ಓಡಿದೆ. ನಾಯಿಯ ಕ್ಷೇತ್ರರಕ್ಷಣೆಯ ಆಟವನ್ನು ನೋಡಿದ ಆಟಗಾರರು ಮೂಕವಿಸ್ಮಿತರಾಗಿದ್ದಾರೆ.

ಬ್ರೀಡಿ ಕ್ರಿಕೆಟ್‌ ಕ್ಲಬ್‌ ಮತ್ತು ಉತ್ತರ ಐರ್ಲೆಂಡ್‌ ಕ್ರಿಕೆಟ್‌ ಕ್ಲಬ್‌ನ ನಾಗರಿಕ ಸೇವಾ ತಂಡ(ಸಿಎಸ್ಎನ್‌ಐ) ದ ನಡುವೆ ನಡೆಯುತ್ತಿದ್ದ ಆಲ್‌-ಐರ್ಲೆಂಡ್‌ ಟಿ20 ಮಹಿಳೆಯರ ಸೆಮಿ-ಫೈನಲ್‌ ಪಂದ್ಯದಲ್ಲಿ ಈ ಘಟನೆ ನಡೆದಿದೆ.

ಸಿಎಸ್ಎನ್‌ಐ ತಂಡದ ಆಟಗಾರ್ತಿ ಅಬ್ಬಿ ಲೆಕ್ಕಿ ಬ್ಯಾಟ್‌ನಿಂದ ಚಿಮ್ಮಿದ ಚೆಂಡನ್ನು ಹಿಡಿಯಲು ನಾಯಿ ಪ್ರೇಕ್ಷಕರ ಗ್ಯಾಲರಿ ಕಡೆಯಿಂದ ಓಡಿ ಬಂದಿದೆ. ಆದರೆ ಫೀಲ್ಡರ್‌ ಕೈಗೆ ಚೆಂಡು ಸಿಕ್ಕಿದ್ದರಿಂದ ಮೊದಲ ಪ್ರಯತ್ನದಲ್ಲಿ ನಾಯಿ ಸೋತಿದೆ. ಇದೇ ವೇಳೆ ರನ್‌ ಕದಿಯುತ್ತಿದ್ದಾಗ ಔಟ್‌ ಮಾಡಲು ಪ್ರಯತ್ನಿಸಿ ಎಸೆದ ಚೆಂಡು ಕ್ರೀಸ್‌ನಿಂದ ದೂರ ಹೋಗಿದೆ. ತಕ್ಷಣ ವೇಗವಾಗಿ ಓಡಿ ಬಂದ ನಾಯಿ ಚಾಕಚಕ್ಯತೆಯಿಂದ ಬಾಯಲ್ಲಿ ಹಿಡಿದು ಓಡ ತೊಡಗಿದೆ.

ಪಂದ್ಯದ ನಡುವೆ ಎದುರಾದ ಅಡೆತಡೆಗೆ ಆಟಗಾರರು ಕಕ್ಕಾಬಿಕ್ಕಿಯಾದರೂ ನಾಯಿಯ ತುಂಟಾಟ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದೆ. ನಾಯಿಯನ್ನು ಅಲ್ಲಿಂದ ಎಳೆದೊಯ್ಯಲು ಬಂದ ಮಾಲೀಕನ ಕೈಗೆ ಸಿಗದೆ ಓಡುತ್ತಿದ್ದ ನಾಯಿಯನ್ನು ಸಿಎಸ್ಎನ್‌ಐ ತಂಡದ ಆಟಗಾರ್ತಿ ಕೈಚಾಚಿ ಕರೆದಿದ್ದಾರೆ. ನೇರವಾಗಿ ಆಕೆಯತ್ತ ಹೋದ ನಾಯಿ, ಮುದ್ದು ಮಾಡಿಸಿಕೊಳ್ಳುತ್ತ ನಿಂತಿದ್ದಾಗ ಮಾಲೀಕನ ಕೈಸೆರೆಯಾಗಿದೆ.

ಪಂದ್ಯದ ನಡುವೆ ನಡೆದ ಈ ಘಟನೆಯ ವಿಡಿಯೊವನ್ನು ಐರ್ಲೆಂಡ್‌ ವುಮನ್ಸ್‌ ಕ್ರಿಕೆಟ್‌ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಅದ್ಭುತ ಫೀಲ್ಡಿಂಗ್‌ ಎಂದು ಶ್ಲಾಘಿಸಿದೆ. ನಾಯಿಯ ಫೀಲ್ಡಿಂಗ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಾಯಿಯ ಫೀಲ್ಡಿಂಗ್‌ನದ್ದೇ ಸದ್ದಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT