ಸೋಮವಾರ, ಫೆಬ್ರವರಿ 17, 2020
30 °C

ಹಿತಾಸಕ್ತಿ ಸಂಘರ್ಷ: ವಿಚಾರಣೆಗೆ ದ್ರಾವಿಡ್ ಹಾಜರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹಿತಾಸಕ್ತಿ ಸಂಘರ್ಷ ನಿಯಮ  ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಸೋಮವಾರ ಬಿಸಿಸಿಐ ನೀತಿ ಅಧಿಕಾರಿಗ ಸಮ್ಮುಖ ವಿಚಾರಣೆಗೆ ಹಾಜರಾದರು.

‘ವಿಚಾರಣೆ ಮುಗಿದಿದೆ. ಶೀಘ್ರದಲ್ಲಿಯೇ ತೀರ್ಮಾನವನ್ನು ಪ್ರಕಟಿಸಲಾಗುವುದು ನಿರೀಕ್ಷಿಸಿರಿ’ ಎಂದು ನೀತಿ ಅಧಿಕಾರಿ ಡಿ.ಕೆ. ಜೈನ್ ತಿಳಿಸಿದ್ದಾರೆ.

ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ (ಎಂಪಿಸಿಎ) ಆಜೀವ ಸದಸ್ಯ ಸಂಜೀವ್ ಗುಪ್ತಾ ಅವರು ದೂರು ನೀಡಿದ್ದರು. ರಾಹುಲ್ ಅವರು ಇಂಡಿಯಾ ಸಿಮೆಂಟ್ಸ್‌ನಲ್ಲಿ ಉನ್ನತ ಸ್ಥಾನದಲ್ಲಿರುವ ಉದ್ಯೋಗಿ. ಆದರೂ ಅವರಿಗೆ ಎನ್‌ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ)ಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವುದು ಹಿತಾಸಕ್ತಿ ಸಂಘರ್ಷ ನಿಯಮದ ಉಲ್ಲಂಘನೆ ಎಂದು ಗುಪ್ತಾ ದೂರಿದ್ದರು. ಅದಕ್ಕಾಗಿ ಹೋದ ತಿಂಗಳು ದ್ರಾವಿಡ್ ಅವರನ್ನು ವಿಚಾರಣೆ ಮಾಡಲಾಗಿತ್ತು. ಇದೀಗ ಎರಡನೇ ಬಾರಿ ವಿಚಾರಣೆಗೆ ಕರೆಯಲಾಗಿತ್ತು. 46 ವರ್ಷದ ದ್ರಾವಿಡ್ ಅವರು ತಮ್ಮ ವಕೀಲರೊಂದಿಗೆ ಹಾಜರಾಗಿದ್ದರು.

‘ಮೊದಲ ವಿಚಾರಣೆಯ ನಂತರ ಉಂಟಾಗಿದ್ದ ಕೆಲವು ಸಂದೇಹಗಳನ್ನು ನಿವಾರಿಸಿಕೊಳ್ಳಲು ಮತ್ತೊಮ್ಮೆ ಕರೆಯಲಾಗಿತ್ತು. ಈ ಸಂದರ್ಭದಲ್ಲಿ ದೂರುದಾರರ ಮತ್ತು ಬಿಸಿಸಿಐ ಪರ ವಕೀಲರೂ ಹಾಜರಿದ್ದರು. ಅವರಿಂದಲೂ ಹೇಳಿಕೆಗಳನ್ನು ಪಡೆಯಲಾಯಿತು’ ಎಂದು ಜೈನ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು