ಒಂದು ದಿನ ರೊನೊಲ್ಡೊ ಆಗಿ ಬದಲಾದರೆ 'ಹೀಗೆ' ಮಾಡುತ್ತೇನೆ: ಕೊಹ್ಲಿ

ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಪೋರ್ಚುಗೀಸ್ನ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಅಪ್ಪಟ ಅಭಿಮಾನಿ. ಫಿಟ್ನೆಸ್ಗೆ ಒತ್ತು ನೀಡುವ ಕೊಹ್ಲಿಯನ್ನು ಕ್ರಿಕೆಟ್ ಲೋಕದ ರೊನಾಲ್ಡೊ ಎಂದೂ ಕರೆಯುವುದುಂಟು.
ಕೊಹ್ಲಿ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಾರೆ. ಪ್ರಾಂಚೈಸ್ಗಾಗಿ ಫೋಟೊಶೂಟ್ ನಡೆಸುತ್ತಿದ್ದ ಸಂದರ್ಭದಲ್ಲಿ ಅವರು ರೊನಾಲ್ಡೊ ಬಗೆಗಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಆರ್ಸಿಬಿಯ 'ಬಿಹೈಂಡ್ ದಿ ಸೀನ್ಸ್' ಸರಣಿಯಲ್ಲಿ, 'ನೀವೇನಾದರೂ ಒಂದು ಮುಂಜಾನೆ ಕ್ರಿಸ್ಟಿಯಾನೊ ರೊನಾಲ್ಡೊ ಆಗಿ ಎಚ್ಚರಗೊಂಡರೆ ಏನು ಮಾಡುವಿರಿ' ಎಂದು ಕೇಳಿದ ಪ್ರಶ್ನೆಗೆ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
'ನಾನು ರೊನೊಲ್ಡೊ ಆಗಿ ಎಚ್ಚರಗೊಂಡರೆ, ನನ್ನ ಮೆದುಳು ಸ್ಕ್ಯಾನ್ ಮಾಡುತ್ತೇನೆ ಮತ್ತು ಅಷ್ಟು ಮಾನಸಿಕ ಶಕ್ತಿ ಎಲ್ಲಿಂದ ಬರುತ್ತದೆ ಎಂಬುದನ್ನು ನೋಡುತ್ತೇನೆ' ಎಂದು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.