ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ಸಿಇಒ ಮನು ಸಾವ್ನಿ ರಾಜೀನಾಮೆ

Last Updated 8 ಜುಲೈ 2021, 15:23 IST
ಅಕ್ಷರ ಗಾತ್ರ

ದುಬೈ: ದುರ್ವರ್ತನೆಯಿಂದಾಗಿ ತನಿಖೆಗೆ ಒಳಗಾಗಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನು ಸಾವ್ನಿ ಗುರುವಾರ ತಮ್ಮ ಸ್ಥಾನಕ್ಕೆ ರಾಜೇನಾಮೆ ನೀಡಿದ್ದಾರೆ. ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಲಾಗಿತ್ತು.

ಮನು ಸಾವ್ನಿ ರಾಜೀನಾಮೆಯನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಂಗೀಕರಿಸಲಾಗಿದೆ. ಜೆಫ್ ಅಲಾರ್ಡಿಸ್ ಅವರನ್ನು ಹಂಗಾಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಅವರಿಗೆ ಐಸಿಸಿಯ ಆಡಳಿತ ಮಂಡಳಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಐಸಿಸಿ ತಿಳಿಸಿದೆ.

2019ರ ವಿಶ್ವಕಪ್‌ ನಂತರ ಡೇವ್ ರಿಚರ್ಡ್ಸನ್‌ ಬದಲಿಗೆ ಸಾವ್ನಿ ಅವರನ್ನು ನೇಮಕ ಮಾಡಲಾಗಿತ್ತು. 2022ರ ವರೆಗೆ ಅವರ ಅವಧಿ ಇತ್ತು. ಕಳೆದ ವರ್ಷ ಚುನಾವಣೆ ಘೋಷಣೆಯಾದ ನಂತರ ಸಾವ್ನಿ ಒತ್ತಡಕ್ಕೆ ಒಳಗಾಗಿದ್ದರು. 56 ವರ್ಷದ ಸಾವ್ನಿ ಅವರ ವರ್ತನೆ ಬಗ್ಗೆ ಈ ಸಂದರ್ಭದಲ್ಲಿ ಹೆಚ್ಚು ಆರೋಪಗಳು ಕೇಳಿಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT