ಬುಧವಾರ, ಏಪ್ರಿಲ್ 14, 2021
24 °C
ನಾಯಕ ಫಿಂಚ್, ವಾರ್ನರ್ ಅರ್ಧಶತಕ; ಮನಗೆದ್ದ ನಜೀಬುಲ್ಲಾ ಜದ್ರಾನ್

ಆಸ್ಟ್ರೇಲಿಯಾ ತಂಡದ ಶುಭಾರಂಭ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಬ್ರಿಸ್ಟಲ್: ನಾಯಕ ಆ್ಯರನ್ ಫಿಂಚ್‌ (66; 49 ಎಸೆತ, 4 ಸಿಕ್ಸರ್, 6 ಬೌಂಡರಿ) ಮತ್ತು ಡೇವಿಡ್ ವಾರ್ನರ್ (ಅಜೇಯ 89; 114 ಎ, 8 ಬೌಂ) ಅವರ ಅಮೋಘ ಆಟದ ನೆರವಿನಿಂದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಅಪ್ಗಾನಿಸ್ತಾನವನ್ನು ಆಸ್ಟ್ರೇಲಿಯಾ ಏಳು ವಿಕೆಟ್‌ಗಳಿಂದ ಮಣಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಅಫ್ಗಾನಿಸ್ತಾನ, ದಿಟ್ಟತನದ ಬ್ಯಾಟಿಂಗ್ ಮಾಡಿದ ನಜೀಬುಲ್ಲಾ ಜದ್ರಾನ್ (51; 49ಎಸೆತ, 7ಬೌಂಡರಿ, 2ಸಿಕ್ಸರ್) ಮತ್ತು ರೆಹಮತ್ ಶಾ (43; 60ಎಸೆತ, 6 ಬೌಂಡರಿ) ಅವರ ಬಲದಿಂದ 38.2 ಓವರ್‌ಗಳಲ್ಲಿ 207 ರನ್‌ ಗಳಿಸಿತು.

ಟೂರ್ನಿಯಲ್ಲಿ ಶುಕ್ರವಾರ ಪಾಕಿ ಸ್ತಾನ ತಂಡವು ವಿಂಡೀಸ್ ಎದುರು 105 ರನ್‌ಗಳಿಗೆ ಆಲೌಟ್ ಆಗಿತ್ತು. ಶನಿವಾರದ ಇನ್ನೊಂದು ಪಂದ್ಯದಲ್ಲಿ  ಶ್ರೀಲಂಕಾ ತಂಡವೂ ಅಲ್ಪಮೊತ್ತ ಗಳಿಸಿ ನ್ಯೂಜಿಲೆಂಡ್ ಎದುರು ಶರಣಾಯಿತು. ಆದರೆ ಆ ಎರಡೂ ತಂಡಗಳಿಗೆ ಹೋಲಿ ಸಿದರೆ ಅನುಭವ ಮತ್ತು ಸಾಧನೆಗಳಲ್ಲಿ ಇನ್ನೂ ಬಾಲ್ಯಾವಸ್ಥೆಯಲ್ಲಿರುವ ತಂಡ ಅಫ್ಗಾನ್ ಉತ್ತಮವಾಗಿ ಆಡಿತು.

ಟಾಸ್ ಗೆದ್ದ ಅಫ್ಗಾನ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.  ಇನಿಂಗ್ಸ್‌ನ ಮೂರನೇ ಎಸೆತದಲ್ಲಿಯೇ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಷೆಲ್ ಸ್ಟಾರ್ಕ್‌ ಅವರು ಮೊಹಮ್ಮದ್ ಶೆಹಜಾದ್ ವಿಕೆಟ್ ಹಾರಿಸಿದರು. ನಂತರದ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್‌ ಹಜರತ್‌ ಉಲ್ಲಾ ಜಜೈ ವಿಕೆಟ್ ಉರುಳಿಸಿದರು.

ರೆಹಮತ್ ಶಾ ಮತ್ತು ಹಷ್ಮತ್‌ ಉಲ್ಲಾ ಶಾಹೀದಿ (18) ಸ್ವಲ್ಪ ಹೋರಾಟ ನಡೆಸಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 51 ರನ್‌ಗಳನ್ನು ಗಳಿಸಿದರು.

ಶಾಹಿದಿ  ಮತ್ತು ರೆಹಮತ್ ವಿಕೆಟ್‌ಗಳನ್ನು ಸ್ಪಿನ್ನರ್ ಆ್ಯಡಂ ಜಂಪಾ ಕಬಳಿಸಿದರು. ಇದರಿಂದಾಗಿ ತಂಡವು ಅಲ್ಪಮೊತ್ತಕ್ಕೆ ಉರುಳುವ ಸಾಧ್ಯತೆ ಇತ್ತು. ನಾಯಕ ಗುಲ್ಬದೀನ್ ನೈಬ್ ಮತ್ತು  ಜದ್ರಾನ್ ಜೊತೆಯಾಟವು ತಂಡಕ್ಕೆ ಚೇತರಿಕೆ ನೀಡಿತು.

ಆರನೇ ವಿಕೆಟ್‌ ಜೊತೆಯಾಟದಲ್ಲಿ ಇಬ್ಬರೂ ಸೇರಿ 83 ರನ್‌ಗಳನ್ನು ಕಲೆ ಹಾಕಿದರು. ಅದರಲ್ಲೂ ಜದ್ರಾನ್ ಅವರು ಬೀಸಾಟದಿಂದ ಗಮನ ಸೆಳೆದರು.  ಮಿಷೆಲ್ ಸ್ಟಾರ್ಕ್, ಕಮಿನ್ಸ್‌, ಕೌಲ್ಟರ್‌ನೈಲ್ ಮತ್ತು ಕಾರ್ಕಸ್‌ ಸ್ಟೊಯಿನಿಸ್ ಅವರ ಎಸೆತಗಳನ್ನು ದಿಟ್ಟವಾಗಿ ಎದುರಿಸಿದರು.

ತಂಡವು ಇನ್ನೂರರ ಗಡಿ ದಾಟು ವಲ್ಲಿ ಜದ್ರಾನ್ ಆಟ ಪ್ರಮುಖವಾಯಿತು.  ಅವರು ಸ್ಪಿನ್ನರ್ ಜಂಪಾ ಅವರ ಎಸೆತಗಳನ್ನು ಪುಡಿಗಟ್ಟಿದರು. ಜಂಪಾ ಎಂಟು ಓವರ್‌ಗಳಲ್ಲಿ 60 ರನ್‌ ಕೊಟ್ಟು ತುಟ್ಟಿಯಾದರು.  ಒಟ್ಟು ಮೂರು ವಿಕೆಟ್ ಪಡೆದರು.

ಕಮಿನ್ಸ್ ಮೂರು ಮತ್ತು ಸ್ಟೊಯಿನಿಸ್ ಎರಡು ವಿಕೆಟ್‌ಗಳನ್ನು ಗಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು