ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC Test Rankings: ವಿರಾಟ್ ಕೊಹ್ಲಿ ಹಿಂದಿಕ್ಕಿದ ಕೇನ್ ವಿಲಿಯಮ್ಸನ್ ನಂ.1

Last Updated 31 ಡಿಸೆಂಬರ್ 2020, 10:39 IST
ಅಕ್ಷರ ಗಾತ್ರ

ದುಬೈ: ಅಂತರ ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವರ್ಷಾಂತ್ಯದಲ್ಲಿ ಬಿಡುಗಡೆ ಮಾಡಿರುವ ತಾಜಾ ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಹಾಗೂ ಭಾರತ ತಂಡದ ಖಾಯಂ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿರುವ ನ್ಯೂಜಿಲೆಂಡ್ ಕಪ್ತಾನ ಕೇನ್ ವಿಲಿಯಮ್ಸನ್ ಅಗ್ರಸ್ಥಾನಕ್ಕೇರಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ಓವಲ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿರುವ ವಿರಾಟ್ ಕೊಹ್ಲಿ ಪಿತೃತ್ವ ರಜೆಯ ಮೆರೆಗೆ ತಾಯ್ನಾಡಿಗೆ ಮರಳಿದ್ದರು. ಇದರಿಂದಾಗಿ ಸರಣಿಯ ಉಳಿದ ಪಂದ್ಯಗಳಿಗೆ ಅಲಭ್ಯವಾಗಿದ್ದರು.

ಇನ್ನೊಂದೆಡೆ ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಾಧನೆ ಮಾಡಿರುವ ಕೇನ್ ವಿಲಿಯಮ್ಸನ್, 890 ರೇಟಿಂಗ್ ಅಂಕಗಳೊಂದಿಗೆ ಎರಡು ಸ್ಥಾನಗಳ ನೆಗೆತ ಕಂಡು ಅಗ್ರಪಟ್ಟ ಅಲಂಕರಿಸಿದ್ದಾರೆ.

ಭಾರತದ ವಿರಾಟ್ ಕೊಹ್ಲಿ (879) ಹಾಗೂ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ (877) ಅನುಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ. ಈ ಪೈಕಿ ಸ್ಟೀವನ್ ಸ್ಮಿತ್ ಎರಡು ಸ್ಥಾನಗಳ ಕುಸಿತ ಅನುಭವಿಸಿದ್ದಾರೆ. ಇವರಿಬ್ಬರನ್ನು ವಿಲಿಯಮ್ಸನ್ ಹಿಂದಿಕ್ಕಿದ್ದಾರೆ.

ಆಸ್ಟ್ರೇಲಿಯಾದವರೇ ಆದ ಯುವ ಬ್ಯಾಟ್ಸ್‌ಮನ್ ಮಾರ್ನಸ್ ಲಾಬುಷೇನ್ 850 ರೇಟಿಂಗ್ ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಅಜಿಂಕ್ಯ ರಹಾನೆ ಐದು ಸ್ಥಾನಗಳ ನೆಗೆತ...
ಮೆಲ್ಬೆರ್ನ್ ಕ್ರಿಕೆಟ್ ಮೈದಾನದಲ್ಲಿ ಮ್ಯಾಚ್ ವಿನ್ನಿಂಗ್ ಶತಕ ಸಾಧನೆ ಮಾಡಿರುವ ಹಂಗಾಮಿ ನಾಯಕ ಅಜಿಂಕ್ಯ ರಹಾನೆ, ಐದು ಸ್ಥಾನಗಳ ನೆಗೆದ ಕಂಡು ಒಟ್ಟು 784 ರೇಟಿಂಗ್ ಅಂಕಗಳೊಂದಿಗೆ ಆರನೇ ಸ್ಥಾನಕ್ಕೆ ತಲುಪಿದ್ದಾರೆ. ಅತ್ತ ಚೇತೇಶ್ವರ ಪೂಜಾರ (728) ಎರಡು ಸ್ಥಾನಗಳ ಕುಸಿತ ಕಂಡು 10ನೇ ಸ್ಥಾನಕ್ಕೆ ತಲುಪಿದ್ದಾರೆ.

ಪ್ಯಾಟ್ ಕಮಿನ್ಸ್ ಅಗ್ರ ಬೌಲರ್
ಬೌಲಿಂಗ್ ವಿಭಾಗದಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಈ ವಿಭಾಗವನ್ನು ಆಸ್ಟ್ರೇಲಿಯಾದ ಪ್ಯಾಟನ್ ಕಮಿನ್ಸ್ ಮುನ್ನಡೆಸುತ್ತಿದ್ದು, ಸ್ಟುವರ್ಟ್ ಬ್ರಾಡ್, ನೀಲ್ ವ್ಯಾಗ್ನರ್ ಹಾಗೂ ಟಿಮ್ ಸೌಥಿ ಅನುಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನಗಳನ್ನು ಅಲಂಕರಿಸಿದ್ದಾರೆ.

ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಎರಡು ಸ್ಥಾನಗಳ ಬಡ್ತಿ ಪಡೆದು 5ನೇ ಸ್ಥಾನಕ್ಕೆ ತಲುಪಿದ್ದಾರೆ. ಇನ್ನು ಟಾಪ್ 10 ಪಟ್ಟಿಯ ಪೈಕಿ ಭಾರತೀಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಎರಡು ಸ್ಥಾನಗಳ ನೆಗೆತ ಕಂಡು 7ನೇ ಸ್ಥಾನಕ್ಕೆ ತಲುಪಿದ್ದಾರೆ. ಹಾಗೆಯೇ ಒಂದು ಸ್ಥಾನ ಬಡ್ತಿ ಪಡೆದಿರುವ ಜಸ್‌ಪ್ರೀತ್ ಬೂಮ್ರಾ 9ನೇ ಸ್ಥಾನದಲ್ಲಿದ್ದಾರೆ.

ಐಸಿಸಿ ಟಾಪ್ 10 ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿ ಇಂತಿದೆ:
1. ಕೇನ್ ವಿಲಿಯಮ್ಸನ್ (ಕೇನ್ ವಿಲಿಯಮ್ಸನ್): 890
2. ವಿರಾಟ್ ಕೊಹ್ಲಿ (ವಿರಾಟ್ ಕೊಹ್ಲಿ): 879
3. ಸ್ಟೀವನ್ ಸ್ಮಿತ್ (ಆಸ್ಟ್ರೇಲಿಯಾ): 877
4. ಮಾರ್ನಸ್ ಲಾಬುಷೇನ್ (ಆಸ್ಟ್ರೇಲಿಯಾ): 850
5. ಬಾಬರ್ ಅಜಾಮ್ (ಪಾಕಿಸ್ತಾನ): 789)
6. ಅಜಿಂಕ್ಯ ರಹಾನೆ (ಭಾರತ): 784
7. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ): 777
8. ಬೆನ್ ಸ್ಟೋಕ್ಸ್ (ಇಂಗ್ಲೆಂಡ್) : 760
9. ಜೋ ರೂಟ್(ಇಂಗ್ಲೆಂಡ್): 738
10. ಚೇತೇಶ್ವರ ಪೂಜಾರ (ಭಾರತ): 728

ಐಸಿಸಿ ಟಾಪ್ 10 ಟೆಸ್ಟ್ ಬೌಲರ್‌ಗಳ ರ‍್ಯಾಂಕಿಂಗ್ ಪಟ್ಟಿ ಇಂತಿದೆ:
1. ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ): 906
2. ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್): 845
3. ನೀಲ್ ವ್ಯಾಗ್ನರ್ (ನ್ಯೂಜಿಲೆಂಡ್): 833
4. ಟಿಮ್ ಸೌಥಿ (ನ್ಯೂಜಿಲೆಂಡ್): 826
5. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ): 804
6. ಕಗಿಸೋ ರಬಡ (ದ.ಆಫ್ರಿಕಾ): 794
7. ಆರ್ ಅಶ್ವಿನ್ (ಭಾರತ): 793
8. ಜೋಶ್ ಹ್ಯಾಜಲ್‌ವುಡ್ (ಆಸ್ಟ್ರೇಲಿಯಾ): 790
9. ಜಸ್‌ಪ್ರೀತ್ ಬೂಮ್ರಾ (ಭಾರತ): 783
10. ಜೇಮ್ಸ್ ಆ್ಯಂಡ್ರೆಸನ್ (ಇಂಗ್ಲೆಂಡ್): 781

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT