ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC Women World Cup: ಸೆಮಿಫೈನಲ್ ಪ್ರವೇಶಿಸಿದ ಇಂಗ್ಲೆಂಡ್

ಆಫ್ರಿಕಾ ಎದುರು ಗೆದ್ದರಷ್ಟೇ ಭಾರತ ಮುಂದಿನ ಹಂತಕ್ಕೆ
Last Updated 27 ಮಾರ್ಚ್ 2022, 5:55 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್‌: ಮಹಿಳಾ ವಿಶ್ವಕಪ್‌ಕ್ರಿಕೆಟ್‌ ಟೂರ್ನಿಯಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ 100 ರನ್ ಅಂತರದ ಗೆಲುವು ಸಾಧಿಸಿದೆ. ಇದರೊಂದಿಗೆ ಟೂರ್ನಿಯಲ್ಲಿ ಸೆಮಿಫೈನಲ್‌ ತಲುಪಿದ ಮೂರನೇ ತಂಡ ಎನಿಸಿದೆ.

ವೆಲ್ಲಿಂಗ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಮಧ್ಯಮ ಕ್ರಮಾಂಕದ ಬ್ಯಾಟರ್‌ ಸೋಫಿಯಾ ಡಂಕ್ಲೆ (67) ಮತ್ತು ನಥಾಲೀ ಸ್ಕೀವರ್ (40) ಬ್ಯಾಟಿಂಗ್‌ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 234 ರನ್ ಗಳಿಸಿದೆ.

ಈ ಗುರಿ ಬೆನ್ನತ್ತಿದ ಬಾಂಗ್ಲಾ, ಆಂಗ್ಲ ಪಡೆಯ ಸ್ಪಿನ್ ದಾಳಿ ಎದುರು ದಿಟ್ಟ ಆಟವಾಡಲು ವಿಫಲವಾಯಿತು. ಮಧ್ಯಮ ಕ್ರಮಾಂಕದ ಬ್ಯಾಟರ್‌ ಲತಾ ಮೊಂಡಲ್ 30 ರನ್‌ ಗಳಿಸಿದ್ದೇ, ಬಾಂಗ್ಲಾ ಪರ ವೈಯಕ್ತಿಕ ಗರಿಷ್ಠ ಮೊತ್ತವೆನಿಸಿತು. ಹೀಗಾಗಿ ಕೇವಲ 134ರನ್‌ ಗಳಿಗೆ ಆಲೌಟ್‌ ಆಯಿತು.

ಹತ್ತು ಓವರ್‌ ಎಸೆದ ಸೋಫಿ ಎಕ್ಲೆಸ್ಟೋನ್ ಕೇವಲ 15 ರನ್ ನೀಡಿ ಮೂರು ವಿಕೆಟ್ ಪಡೆದರು. ಅವರಿಗೆ ಉತ್ತಮ ನೆರವು ನೀಡಿದ ಚಾರ್ಲೊಟ್ ಡೀನ್ ಸಹ ಮೂರು ವಿಕೆಟ್ ಉರುಳಿಸಿದರು. ಮಧ್ಯಮ ವೇಗಿ ಫ್ರೆಯಾ ಡೆವೀಸ್ ಎರಡು ಮತ್ತು ಹೀದರ್ ನೈಟ್ ಒಂದು ವಿಕೆಟ್ ಕಿತ್ತರು.

ಫ್ರಿಕಾ ಎದುರು ಗೆದ್ದರಷ್ಟೇ ಭಾರತ ಸೆಮಿಗೆ
ಸದ್ಯ ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮತ್ತುದಕ್ಷಿಣ ಆಫ್ರಿಕಾ ಸೆಮಿಫೈನಲ್‌ ಹಂತಕ್ಕೆ ತಲುಪಿವೆ. ಉಳಿದಿರುವ ಒಂದು ಸ್ಥಾನದ ಮೇಲೆ ಭಾರತ ಮತ್ತು ವೆಸ್ಟ್‌ ಇಂಡೀಸ್ ಕಣ್ಣಿಟ್ಟಿವೆ.

ಕ್ರೈಸ್ಟ್‌ಚರ್ಚ್‌ನಲ್ಲಿ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಟ ನಡೆಸುತ್ತಿದೆ. ಭಾರತ ಈ ಪಂದ್ಯದಲ್ಲಿ ಗೆದ್ದರೆ, ವಿಂಡೀಸ್‌ ಪಡೆಯನ್ನು ಹೊರದಬ್ಬಿ ನಾಲ್ಕರ ಘಟಕ್ಕೆ ತಲುಪಲಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿರುವ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ 274ರನ್ ಕಲೆಹಾಕಿದೆ. ಈ ಮೊತ್ತ ಬೆನ್ನತ್ತಿರುವ ಆಫ್ರಿಕಾ ತಂಡ 10 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 50 ರನ್‌ ಗಳಿಸಿದೆ.

ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಆಡಿರುವ ವಿಂಡೀಸ್‌ಗೆ, ಭಾರತ ಸೋತರಷ್ಟೇ ಮುಂದಿನ ಹಂತಕ್ಕೆ ತಲುಪುವ ಅವಕಾಶ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT