ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC Womens World Cup: ವಿಂಡೀಸ್ ಎದುರು ಜಯ; ಪಾಯಿಂಟ್ ಪಟ್ಟಿಯಲ್ಲಿ ಭಾರತ ನಂ.1

Last Updated 12 ಮಾರ್ಚ್ 2022, 11:03 IST
ಅಕ್ಷರ ಗಾತ್ರ

ಹ್ಯಾಮಿಲ್ಟನ್: ಭಾರತ ತಂಡವುಈ ಬಾರಿಯಮಹಿಳೆಯರ ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಆಡಿದ ತನ್ನ ಮೂರನೇ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 155 ರನ್ ಅಂತರದ ಗೆಲುವು ಸಾಧಿಸಿದೆ.

ಸೆಡನ್ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ,ಸ್ಮೃತಿ ಮಂದಾನ ಹಾಗೂ ಹರ್ಮನ್‌ಪ್ರೀತ್‌ ಕೌರ್‌ ಗಳಿಸಿದ ಅಮೋಘ ಶತಕಗಳ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 317 ರನ್ ಕಲೆಹಾಕಿತ್ತು.

119 ಎಸೆತಗಳನ್ನು ಎದುರಿಸಿದ ಮಂದಾನ 2 ಸಿಕ್ಸರ್ ಮತ್ತು 13 ಬೌಂಡರಿ ಸಹಿತ 123ರನ್ ಸಿಡಿಸಿದರೆ,ಕೌರ್‌ 107 ಎಸೆತಗಳಲ್ಲಿ10 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 109 ರನ್ ಬಾರಿಸಿದರು.

ವಿಂಡೀಸ್‌ಗೆ ಉತ್ತಮ ಆರಂಭ
ಈ ಬೃಹತ್‌ ಗುರಿ ಬೆನ್ನತ್ತಿದ ವಿಂಡೀಸ್‌ ತಂಡಕ್ಕೆ ಆರಂಭಿಕ ಆಟಗಾರ್ತಿಯರಾದ ಡಿಯಾಂಡ್ರ ದೊತ್ತಿನ್ ಮತ್ತು ಹೀಲಿ ಮ್ಯಾಥ್ಯೂಸ್ ಶತಕದ ಆರಂಭ ಒದಗಿಸಿದರು.

ದೊತ್ತಿನ್ ಕೇವಲ 46 ಎಸೆತಗಳಲ್ಲಿ 62 ರನ್ ಚಚ್ಚಿದರೆ, ಮ್ಯಾಥ್ಯೂಸ್‌ 36 ಎಸೆತಗಳಲ್ಲಿ 43 ರನ್ ಬಾರಿಸಿದರು.

ಈ ಜೋಡಿ ಕೇವಲ 12.2 ಓವರ್‌ಗಳಲ್ಲಿಯೇ 100 ರನ್‌ ಗಳಿಸಿ, ಭಾರತದ ಪಾಳಯದಲ್ಲಿ ಭೀತಿ ಸೃಷ್ಟಿಸಿದ್ದರು. ಆದರೆ, ಈ ಹಂತದಲ್ಲಿ ದೊತ್ತಿನ್ ವಿಕೆಟ್ ಪಡೆದ ಸ್ನೇಹ್ ರಾಣ, ಮಿಥಾಲಿ ರಾಜ್ ಪಡೆಗೆ ಮೊದಲ ಯಶಸ್ಸು ತಂದುಕೊಟ್ಟರು.ಅದಾದ ಬಳಿಕ ವಿಂಡೀಸ್ ತಂಡ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದು, ಮುಳುವಾಯಿತು.ಸ್ಟೆಫಾನಿ ಟೇಲರ್ ಬಳಗ ಅಂತಿಮವಾಗಿ 162 ರನ್‌ಗಳಿಗೆ ಸರ್ವ ಪತನ ಕಂಡಿತು.

ಭಾರತ ಪರ ಸ್ನೇಹ್ ರಾಣ ಮೂರು ವಿಕೆಟ್ ಪಡೆದರೆ ಮೇಘನಾ ಸಿಂಗ್ ಎರಡು ವಿಕೆಟ್ ಕಿತ್ತರು. ಜೂಲನ್ ಗೋಸ್ವಾಮಿ, ರಾಜೇಶ್ವರಿ ಗಾಯಕವಾಡ್ ಮತ್ತು ಪೂಜಾ ವಸ್ತ್ರಾಕರ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.

ಪಂದ್ಯಕ್ಕೂ ಮುನ್ನ ಪಾಯಿಂಟ್‌ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದ ಭಾರತ, ಇದೀಗ ಮೊದಲ ಸ್ಥಾನಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT