ಗುರುವಾರ , ಜೂಲೈ 2, 2020
28 °C

ಸತ್ಯ ಹೇಳಿದರೆ ನಿಮ್ಮನ್ನು ಹುಚ್ಚ ಎನ್ನಲಾಗುತ್ತದೆ ಎಂದ ಪಾಕ್ ಮಾಜಿ ನಾಯಕ ಯೂನಿಸ್

ಏಜೆಸ್ಸೀಸ್ Updated:

ಅಕ್ಷರ ಗಾತ್ರ : | |

ಲಾಹೋರ್: ಪಾಕಿಸ್ತಾನಕ್ಕೆ ಟಿ20 ವಿಶ್ವಕಪ್‌ ಗೆದ್ದುಕೊಟ್ಟ ಕೆಲವೇ ದಿನಗಳಲ್ಲಿ ನಾಯಕತ್ವದಿಂದ ಕೆಳಗಿಳಿದ ಮಾಜಿ ನಾಯಕ ಯೂನಿಸ್‌ ಖಾನ್‌, ತಾವು ನಾಯಕತ್ವ ತೊರೆದದ್ದು ಏಕೆ ಎಂದು ತಿಳಿಸಿದ್ದಾರೆ. ಸತ್ಯ ಹೇಳಿದರೆ ನಿಮ್ಮನ್ನು ಹುಚ್ಚ ಎಂದು ಪರಿಗಣಿಸಲಾಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನಾಯಕತ್ವದ ವಿಚಾರವಾಗಿ ಗಲ್ಫ್‌ ನ್ಯೂಸ್‌ ಜೊತೆ ನಡೆಸಿದ ಮಾತುಕತೆ ವೇಳೆ, ‘ಸತ್ಯವನ್ನು ಹೇಳಿದ ನಂತರ ನಿಮ್ಮನ್ನು ಹುಚ್ಚು ಮನುಷ್ಯ ಎಂದು ಕರೆದಿರುವ ಸನ್ನಿವೇಶಗಳನ್ನು ನಿಮ್ಮ ಜೀವನದಲ್ಲಿ ಸಾಕಷ್ಟು ಸಲ ಎದುರಿಸಿರುತ್ತೀರಿ. ಕೆಲವು ಆಟಗಾರರ ಗುಂಪು ದೇಶಕ್ಕಾಗಿ ಮೈದಾನದಲ್ಲಿ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತಿಲ್ಲ ಎಂಬುದನ್ನು ಬೊಟ್ಟು ಮಾಡಿ ಹೇಳಿದ್ದು ನನ್ನ ತಪ್ಪಾಯಿತು’ ಎಂದು ಹೇಳಿಕೊಂಡಿದ್ದಾರೆ.

‘ಕೆಲ ಸಮಯದ ಬಳಿಕ ಆ ಆಟಗಾರರು ತಮ್ಮ ತಪ್ಪಿಗೆ ವಿಷಾಧಿಸಿದ್ದರು ಮತ್ತು ನಂತರ ನಾವೆಲ್ಲ ಒಂದು ತಂಡವಾಗಿ ಒಟ್ಟಿಗೆ ಆಡಿದ್ದೇವೆ. ಸತ್ಯ ಹೇಳುವುದು ಮತ್ತು ವಿನಮ್ರವಾಗಿರುವುದು ನಾನು ನನ್ನ ತಂದೆಯಿಂದ ಕಲಿತ ಪಾಠವಾಗಿದೆ’ ಎಂದಿದ್ದಾರೆ.

2009ರಲ್ಲಿ ಯೂನಿಸ್‌ ಖಾನ್‌ ನೇತೃತ್ವದ ಪಾಕಿಸ್ತಾನ ತಂಡ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್‌ ಎನಿಸಿತ್ತು. ಆದರೆ, ಆಟಗಾರರ ಬೇಜವಾಬ್ದಾರಿ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಯೂನಿಸ್‌, ಕೆಲದಿನಗಳ ಬಳಿಕ ನಾಯಕತ್ವ ತೊರೆದಿದ್ದರು.

ಪಾಕ್‌ ಪರ 118 ಟೆಸ್ಟ್‌, 265 ಏಕದಿನ ಮತ್ತು 25 ಟೆಸ್‌ ಪಂದ್ಯಗಳನ್ನು ಆಡಿರುವ ಯೂನಿಸ್‌, ಕ್ರಮವಾಗಿ 10,099 ರನ್‌, 7,249 ರನ್ ಮತ್ತು 442 ರನ್‌ ಕಲೆ ಹಾಕಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು