ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Emerging Asia Cup Final: ಪಾಕ್ ವಿರುದ್ಧ ಭಾರತಕ್ಕೆ 353 ರನ್ ಗೆಲುವಿನ ಗುರಿ

Published 23 ಜುಲೈ 2023, 13:02 IST
Last Updated 23 ಜುಲೈ 2023, 13:02 IST
ಅಕ್ಷರ ಗಾತ್ರ

ಕೊಲಂಬೊ: ಎಮರ್ಜಿಂಗ್ ಏಷ್ಯಾ ಕಪ್ ಫೈನಲ್ ಗೆದ್ದು ಚಾಂಪಿಯನ್ ಆಗಲು ಭಾರತ 'ಎ' ತಂಡವು ಪಾಕಿಸ್ತಾನ 'ಎ' ವಿರುದ್ಧ 353 ರನ್ ಗಳಿಸಬೇಕಿದೆ.

ಶ್ರೀಲಂಕಾದ ಕೊಲಂಬೊದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ 'ಎ', ತಯ್ಯಬ್ ತಾಹೀರ್ ಅಮೋಘ ಶತಕದ (108) ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿತು.

ಟಾಸ್ ಗೆದ್ದ ಭಾರತದ ನಾಯಕ ಯಶ್ ಧುಲ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಪಾಕಿಸ್ತಾನಕ್ಕೆ ಆರಂಭಿಕರಾದ ಸೈಮ್ ಅಯುಬ್ (59) ಮತ್ತು ಸಾಹಿಬ್‌ಝಾದಾ ಫರ್ಹಾನ್ (65) ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 17.2 ಓವರ್‌ಗಳಲ್ಲಿ 121 ರನ್‌ಗಳ ಜೊತೆಯಾಟ ಕಟ್ಟಿದರು.

ಬಳಿಕ ಕ್ರೀಸಿಗಿಳಿದ ತಯ್ಯಬ್ ತಾಹೀರ್ ಬಿರುಸಿನ ಶತಕ ಗಳಿಸುವ ಮೂಲಕ ಗಮನ ಸೆಳೆದರು. ತಾಹೀರ್ 71 ಎಸೆತಗಳಲ್ಲಿ 108 ರನ್ (12 ಬೌಂಡರಿ, 4 ಸಿಕ್ಸರ್) ಗಳಿಸಿದರು.

ಇನ್ನುಳಿದಂತೆ ಒಮರ್ ಯೂಸುಫ್‌ 35 ಹಾಗೂ ಮುಬಸೀರ್ ಖಾನ್ ತಲಾ 35 ರನ್ ಗಳಿಸಿದರು. ಭಾರತ 'ಎ' ತಂಡದ ಪರ ರಾಜವರ್ಧನ್ ಹಂಗರಗೆಕರ್ ಹಾಗೂ ರಿಯಾನ್ ಪರಾಗ್ ತಲಾ ಎರಡು ವಿಕೆಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT