ಶುಕ್ರವಾರ, ಜನವರಿ 17, 2020
29 °C

IND vs AUS | ಬೂಮ್ರಾ ಬೌನ್ಸರ್, ಯಾರ್ಕರ್‌ಗಳು ಚಕಿತಗೊಳಿಸಿದವು: ವಾರ್ನರ್

ಏಜನ್ಸೀಸ್ Updated:

ಅಕ್ಷರ ಗಾತ್ರ : | |

ಮುಂಬೈ: ಭಾರತ ಎದುರಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿ ತಮ್ಮ ತಂಡಕ್ಕೆ ಹತ್ತು ವಿಕೆಟ್‌ ಜಯ ತಂದುಕೊಟ್ಟ ಡೇವಿಡ್‌ ವಾರ್ನರ್‌, ವೇಗಿ ಜಸ್‌ಪ್ರಿತ್‌ ಬೂಮ್ರಾ ಅವರ ಬೌನ್ಸರ್‌ ಹಾಗೂ ಯಾರ್ಕರ್‌ಗಳಿಂದ ಅಚ್ಚರಿಗೊಳಗಾಗಿದ್ದಾಗಿ ಹೇಳಿಕೊಂಡಿದ್ದಾರೆ.

ಬೂಮ್ರಾ ಹಾಗೂ ಕುಲದೀಪ್‌ ಯಾದವ್‌ ಸ್ಪಿನ್ ಎದುರಿಸಲು ಹೇಗೆ ತಯಾರಿ ನಡೆಸಿದ್ದಿರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ವಾರ್ನರ್‌, ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಬಹುತೇಕ ಬೌಂಡರಿ ಗೆರೆಯಿಂದ ಓಡಿ ಬರುತ್ತಿದ್ದ ಬ್ರೆಟ್‌ ಲೀ ಏಕಾಏಕಿ 150 ಕಿ.ಮೀ ವೇಗದಲ್ಲಿ ಚೆಂಡು ಎಸೆಯುತ್ತಿದ್ದರು. ಇದನ್ನು ಕರಗತ ಮಾಡಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ ಆ ಕೌಶಲ ಬೂಮ್ರಾಗೆ ಇದೆ ಎಂದಿದ್ದಾರೆ.

‘ಆತನ (ಬೂಮ್ರಾ) ಬೌನ್ಸರ್‌ಗಳು ಚಕಿತಗೊಳಸಿದವು. ಯಾರ್ಕರ್‌ಗಳೂ ಅಚ್ಚರಿ ಮೂಡಿಸಿದವು. ಮಾತ್ರವಲ್ಲದೆ ವೇಗದ ಏರಿಳಿತಗೊಳೊಂದಿಗೆ ಬರುವ ಆತನ ಎಸೆತಗಳನ್ನು ಎದುರಿಸುವುದು ಅತ್ಯಂತ ಕಠಿಣ. ಅವು, ಲಸಿತ್ ಮಾಲಿಂಗ ತನ್ನ ಉತ್ಕೃಷ್ಠ ಫಾರ್ಮ್‌ನಲ್ಲಿದ್ದ ದಿನಗಳಲ್ಲಿ 140 ಕಿ.ಮೀ ವೇಗದಲ್ಲಿ ಚೆಂಡನ್ನು ಸ್ವಿಂಗ್‌ ಮಾಡುತ್ತಿದ್ದಂತೆ ತೋರುತ್ತವೆ. ನೀವು ಯಾರ್ಕರ್ ಹಾಗೂ ಬೌನ್ಸರ್‌ಗಳು ಎದುರಿಸುತ್ತೀರಿ ಎಂಬುದು ತಿಳಿದಿರುತ್ತದೆ. ಆದರೆ, ಅವುಗಳಿಗೆ ಹೇಗೆ ಉತ್ತರಿಸುತ್ತೀರಿ ಎಂಬುದೇ ವಿಶೇಷ’ ಎಂದು ಹೇಳಿದ್ದಾರೆ.

ಕುಲದೀಪ್‌ ಯಾದವ್‌ ಕುರಿತು, ಚೈನಾಮನ್‌ ಬೌಲಿಂಗ್‌ನಲ್ಲಿ ಏರಿಳಿತಗಳಿರುತ್ತವೆ. ಈಚಿನ ದಿನಗಳಲ್ಲಿ ಆತ ನಿಧಾನವಾಗಿ ಬೌಲ್‌ ಮಾಡುತ್ತಾನೆ. 100 ಕಿ.ಮೀ ವೇಗದಲ್ಲಿ ಬೌಲ್‌ ಮಾಡುವ ರಶೀದ್‌ ಖಾನ್‌ಗೆ ಹೋಲಿಸಿದರೆ ಎಡಗೈ ಬೌಲರ್‌ ಎಸೆತಗಳನ್ನು ಎದುರಿಸುವುದು ಕಠಿಣ’ ಎಂದಿದ್ದಾರೆ.

ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ಭಾರತ 255 ರನ್ ಗಳಿಸಿ ಆಲೌಟ್‌ ಆಗಿತ್ತು. ಈ ಮೊತ್ತವನ್ನು ಪ್ರವಾಸಿ ಪಡೆ ಒಂದೂ ವಿಕೆಟ್‌ ಕಳೆದುಕೊಳ್ಳದೆ ಮುಟ್ಟಿ ಜಯದ ನಗೆ ಬೀರಿತ್ತು.

ವಾರ್ನರ್‌ 112 ಎಸೆತಗಳಲ್ಲಿ 128 ರನ್‌ ಗಳಿಸಿದ್ದರೆ, ನಾಯಕ ಆ್ಯರನ್‌ ಫಿಂಚ್‌ 114 ಎಸೆತಗಳಲ್ಲಿ 110 ರನ್‌ ಕಲೆಹಾಕಿದ್ದರು. ಎರಡನೇ ಪಂದ್ಯ ರಾಜ್‌ಕೋಟ್‌ನಲ್ಲಿ ಜನವರಿ 17ರಂದು ನಡೆಯಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು