ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೀಲ್ಡಿಂಗ್ ಮಧ್ಯೆ ಕ್ರೀಸಿಗಿಳಿದು ಸ್ಟೀವನ್ ಸ್ಮಿತ್ ಅನುಕರಿಸಿದ ರೋಹಿತ್ ಶರ್ಮಾ

Last Updated 18 ಜನವರಿ 2021, 5:12 IST
ಅಕ್ಷರ ಗಾತ್ರ

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ ಗಾಬಾದಲ್ಲಿ ಸಾಗುತ್ತಿರುವ ಅಂತಿಮ ಟೆಸ್ಟ್ ಪಂದ್ಯವು ರೋಚಕ ಹಂತವನ್ನು ತಲುಪಿದೆ. ಈ ಮಧ್ಯೆ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಅನುಕರಿಸಿರುವ ಭಾರತದ ರೋಹಿತ್ ಶರ್ಮಾ, ಕ್ರೀಸಿಗಿಳಿದಿರುವುದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ನಿರ್ಣಾಯಕ ಐದನೇ ದಿನದಾಟದಲ್ಲಿ ಭಾರತದ ಎರಡನೇ ಇನ್ನಿಂಗ್ಸ್‌ ವೇಳೆ ಕ್ರೀಸ್ ಮಧ್ಯೆ ಪ್ರವೇಶಿಸಿದ್ದ ಸ್ಮಿತ್, ತಮ್ಮ ಶೂವಿನಿಂದ ಪಿಚ್ ಉಜ್ಜುವ ಮೂಲಕ ವಿರೂಪಗೊಳಿಸಲು ಯತ್ನಿಸಿದ್ದರು.

ಇದಕ್ಕೆ ಸಮಾನವಾಗಿ ಗಾಬಾದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್‌ನಲ್ಲಿಸ್ಟೀವನ್ ಸ್ಮಿತ್ ಬ್ಯಾಟಿಂಗ್ ಮಾಡುತ್ತಿರುವಾಗಲೇ ಕ್ರೀಸ್ ಮಧ್ಯೆ ಪ್ರವೇಶಿಸಿದ ರೋಹಿತ್ ಶರ್ಮಾ, ಬ್ಯಾಟಿಂಗ್ ಅಭ್ಯಾಸಿಸುವಂತೆ ನಟಿಸಿದರು.

ಸ್ಮಿತ್ ತರಹನೇ ಡ್ರಿಂಕ್ಸ್ ಬ್ರೇಕ್ ವೇಳೆಯಲ್ಲೇ ರೋಹಿತ್ ಶರ್ಮಾ ಕ್ರೀಸ್‌ಗೆ ಲಗ್ಗೆಯಿಟ್ಟರು.ಅಲ್ಲದೆ ಬ್ಯಾಟಿಂಗ್ ಅಭ್ಯಾಸಿಸುವ ರೀತಿಯಲ್ಲಿ ಪೋಸ್ ಕೊಟ್ಟು ಹಿಂತಿರುಗಿದರು. ಇದನ್ನು ಬಹಳ ಕುತೂಹಲದಿಂದ ಸ್ಟೀವನ್ ಸ್ಮಿತ್ ವೀಕ್ಷಿಸುತ್ತಿದ್ದರು.

ಸಾಮಾನ್ಯವಾಗಿ ಪಿಚ್ ಮಧ್ಯೆ ಪ್ರವೇಶಿಸಲು ಯಾರಿಗೂ ಅನುಮತಿರುವುದಿಲ್ಲ. ಈಗ ಸ್ಟೀವನ್ ಸ್ಮಿತ್ ಬಳಿಕ ರೋಹಿತ್ ಶರ್ಮಾ ಕ್ರೀಸ್‌ಗೆ ಪ್ರವೇಶಿಸಿರುವುದು ಸರಿಯೇ ಎಂಬುದು ಕ್ರೀಡಾ ವಲಯದಲ್ಲಿ ಹೆಚ್ಚಿನ ಚರ್ಚಗೆ ಗ್ರಾಸವಾಗಿದೆ.

ಕ್ರೀಸ್‌ನಲ್ಲಿ ರಿಷಭ್ ಪಂತ್ 'ಗಾರ್ಡ್' ಅನ್ನು ಕೆಡವಲು ಪ್ರಯತ್ನಿಸಿದ್ದ ಸ್ಟೀವನ್ ಸ್ಮಿತ್ ವಿರುದ್ಧ ಭಾರತೀಯ ಮಾಜಿ ದಿಗ್ಗಜ ವೀರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕ ಕ್ರಿಕೆಟ್ ಪಂಡಿತರು ಆಕ್ರೋಶ ವ್ಯಕ್ತಪಡಿಸಿದ್ದರು. ಹಿಂದೊಮ್ಮೆ 'ಬಾಲ್ ಟ್ಯಾಂಪರಿಂಗ್' ಪ್ರಕರಣದಲ್ಲಿ ಸಿಕ್ಕಿಬಿದ್ದು ನಿಷೇಧ ಶಿಕ್ಷೆ ಎದುರಿಸಿರುವ ಸ್ಮಿತ್ ತಮ್ಮ ಹಳೆಯ ಚಾಳಿ ಬಿಟ್ಟಿಲ್ಲ ಎಂದು ಅಭಿಮಾನಿಗಳು ಕಿಡಿ ಕಾರಿದ್ದರು. ಬಳಿಕ ಸ್ಪಷ್ಟನೆ ನೀಡಿದ್ದ ಸ್ಟೀವನ್ ಸ್ಮಿತ್ ಮೋಸದಾಟವನ್ನು ನಿರಾಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT