ಚೆನ್ನೈ: ಮೊದಲ ಇನ್ನಿಂಗ್ಸ್‌ನಲ್ಲಿ 329 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿರುವ ಭಾರತ ತಂಡವು ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ತಿರುಗೇಟು ನೀಡುತ್ತಿದೆ.

ಎರಡನೇ ದಿನದ ಊಟದ ವಿರಾಮದ ಹೊತ್ತಿಗೆ 18 ಓವರ್‌ಗಳಲ್ಲಿ 39 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡಿರುವ ಇಂಗ್ಲೆಂಡ್ ಸಂಕಷ್ಟದಲ್ಲಿದೆ.

ರೋರಿ ಬರ್ನ್ಸ್ (0), ಡಾಮಿನಿಕ್ ಸಿಬ್ಲಿ (16), ನಾಯಕ ಜೋ ರೂಟ್ (6) ಹಾಗೂ ಡ್ಯಾನಿಯಲ್ ಲಾರೆನ್ಸ್ (9) ಹೊರದಬ್ಬುವಲ್ಲಿ ಭಾರತ ಯಶಸ್ವಿಯಾಗಿದೆ.

ಈ ಪೈಕಿ ಪದಾರ್ಪಣಾ ಟೆಸ್ಟ್ ಪಂದ್ಯದಲ್ಲಿ ರೂಟ್ ವಿಕೆಟ್ ಕಬಳಿಸಿದ ಸ್ಪಿನ್ನರ್ ಅಕ್ಷರ್ ಪಟೇಲ್ ಜೊಚ್ಚಲ ವಿಕೆಟ್ ಸಾಧನೆ ಮಾಡಿದರು. ರವಿಚಂದ್ರನ್ ಅಶ್ವಿನ್ ಎರಡು ಹಾಗೂ ಇಶಾಂತ್ ಶರ್ಮಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ:ಯುಡಿಆರ್ಎಸ್: ವಿವಾದಕ್ಕೀಡಾದ ಮೂರನೇ ಅಂಪೈರ್ ತೀರ್ಪು

ಪಂತ್ ಫಿಫ್ಟಿ; ಭಾರತ 329ಕ್ಕೆ ಆಲೌಟ್...
ಈ ಮೊದಲು ರೋಹಿತ್ ಶರ್ಮಾ ಅಮೋಘ ಶತಕ (161) ಮತ್ತು ಅಜಿಂಕ್ಯ ರಹಾನೆ (67) ಹಾಗೂ ರಿಷಭ್ ಪಂತ್ (58*) ಆಕರ್ಷಕ ಅರ್ಧಶತಕದ ಹೊರತಾಗಿಯೂ ಟೀಮ್ ಇಂಡಿಯಾ 329 ರನ್‌ಗಳಿಗೆ ಆಲೌಟ್ ಆಗಿತ್ತು.

ಆರು ವಿಕೆಟ್ ನಷ್ಟಕ್ಕೆ 300 ರನ್ ಎಂಬ ಮೊತ್ತದಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತ ಮತ್ತಷ್ಟು 29 ರನ್ ಗಳಿಸುವಷ್ಟರಲ್ಲಿ ಉಳಿದಿರುವ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು 95.5 ಓವರ್‌ಗಳಲ್ಲಿ 329 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಎರಡನೇ ದಿನದಾಟದಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರಿಷಭ್ ಪಂತ್ ಅಜೇಯ ಅರ್ಧಶತಕ ಸಾಧನೆ ಮಾಡಿದರು. ಆದರೆ ವಿಕೆಟ್‌ನ ಮತ್ತೊಂದು ತುದಿಯಿಂದ ಉತ್ತಮ ಬೆಂಬಲ ಸಿಗದೇ ನಿರಾಸೆ ಅನುಭವಿಸಿದರು.

ಇದನ್ನೂ ಓದಿ:IND vs ENG: ಸ್ಟೋಕ್ಸ್ ಸ್ಲೆಡ್ಜಿಂಗ್; ಬ್ಯಾಟಿಂಗ್ ಮಾಡಲು ನಿರಾಕರಿಸಿದ ಪಂತ್

77 ಎಸೆತಗಳನ್ನು ಎದುರಿಸಿದ ಪಂತ್ ಏಳು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 67 ರನ್ ಗಳಿಸಿ ಔಟಾಗದೆ ಉಳಿದರು. ಇನ್ನುಳಿದಂತೆ ಚೊಚ್ಚಲ ಪಂದ್ಯವನ್ನಾಡುತ್ತಿರುವ ಅಕ್ಷರ್ ಪಟೇಲ್ (5), ಇಶಾಂತ್ ಶರ್ಮಾ (0), ಕುಲ್‌ದೀಪ್ ಯಾದವ್ (0) ಹಾಗೂ ಮೊಹಮ್ಮದ್ ಸಿರಾಜ್ (4) ನಿರಾಸೆ ಮೂಡಿಸಿದರು.

ಇಂಗ್ಲೆಂಡ್ ಪರ ಮೊಯಿನ್ ಅಲಿ ನಾಲ್ಕು, ಒಲ್ಲಿ ಸ್ಟೋನ್ ಮೂರು, ಜ್ಯಾಕ್ ಲೀಚ್ ಎರಡು ಮತ್ತು ನಾಯಕ ಜೋ ರೂಟ್ ಒಂದು ವಿಕೆಟ್ ಕಬಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.