ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಕೇವಲ 46 ರನ್ನಿಗೆ ಆಲೌಟ್ ಆಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತೀಯ ಬ್ಯಾಟರ್ಗಳು ಸತತ ವೈಫಲ್ಯವನ್ನು ಕಂಡಿದ್ದಾರೆ.

ಭಾರತದ ಈ ಕಳಪೆ ಪ್ರದರ್ಶನಕ್ಕೆ ಕ್ರಿಕೆಟ್ನ ಮಾಜಿ ದಿಗ್ಗಜರು ಸೇರಿದಂತೆ ಅಭಿಮಾನಿಗಳಿಂದ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ.

ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಭಾರತದ ಕೆಟ್ಟ ಪ್ರದರ್ಶನದ ಕುರಿತು ವ್ಯಂಗ್ಯವಾಡಿದೆ. 'ಆಲೌಟ್ 36'ರ ಹೊಸ ರೂಪವೇ 'ಆಲೌಟ್ 46'? ಎಂದು ಕುಟುಕಿದೆ.

2020ರ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಭಾರತ 36 ರನ್ನಿಗೆ ಆಲೌಟ್ ಆಗಿತ್ತು. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಇನಿಂಗ್ಸ್ವೊಂದರಲ್ಲಿ ಭಾರತದಿಂದ ದಾಖಲಾದ ಕನಿಷ್ಠ ಮೊತ್ತವಾಗಿದೆ.

ಇಂಗ್ಲೆಂಡ್ನ ಮಾಜಿ ನಾಯಕ ಮೈಕಲ್ ವಾನ್ ಸಹ ಟೀಕೆ ಮಾಡಿದ್ದಾರೆ. 'ಕನಿಷ್ಠ ಪಕ್ಷ ಭಾರತ 36ರ ಗಡಿ ದಾಟಿರುವುದು ಭಾರತೀಯ ಅಭಿಮಾನಿಗಳ ಪಾಲಿಗೆ ಧನಾತ್ಮಕ ಅಂಶವಾಗಿದೆ' ಎಂದು ಕಾಲೆಳೆದಿದ್ದಾರೆ.
.IND vs NZ 1st Test Memes: ಗಂಭೀರ್ ಅಡಿಯಲ್ಲಿ ಆರ್ಸಿಬಿ ದಾಖಲೆ ಮುರಿದ ಭಾರತ!.IND vs NZ: ಕೊಹ್ಲಿ ಸೇರಿದಂತೆ ಸೊನ್ನೆ ಸುತ್ತಿದ ಐವರು ಬ್ಯಾಟರ್ಗಳು!.ಅಡಿಲೇಡ್ನಲ್ಲಿ 36, ಬೆಂಗಳೂರಿನಲ್ಲಿ 46: ಟೀಮ್ ಇಂಡಿಯಾ ಕಳಪೆ ಸಾಧನೆಗಳ ಪಟ್ಟಿ.IND vs NZ: ಭಾರತ 46ಕ್ಕೆ ಆಲೌಟ್; ನ್ಯೂಜಿಲೆಂಡ್ಗೆ ಇನಿಂಗ್ಸ್ ಮುನ್ನಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.