ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ವಿಶ್ವಕಪ್: ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ ನೀಡಿದ ಪಾಕ್

Last Updated 6 ಮಾರ್ಚ್ 2022, 1:41 IST
ಅಕ್ಷರ ಗಾತ್ರ

ಮೌಂಟ್‌ ಮಾಂಗನೂಯಿ: ಮಹಿಳೆಯರ ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಭಾರತ, ಆರಂಭಿಕ ಆಘಾತಕ್ಕೆ ಸಿಲುಕಿದೆ. ಅನುಭವಿ ಸ್ಮೃತಿ ಮಂದಾನ ಅವರೊಂದಿಗೆ ಇನಿಂಗ್ಸ್‌ ಆರಂಭಿಸಿದ ಯುವ ಆಟಗಾರ್ತಿ ಶಫಾಲಿ ವರ್ಮಾ ಖಾತೆ ತೆರೆಯದೆ ವಿಕೆಟ್‌ ಒಪ್ಪಿಸಿದ್ದಾರೆ.

ಇದು ಉಭಯ ತಂಡಗಳು ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ಆಡುತ್ತಿರುವ ಮೊದಲ ಪಂದ್ಯವಾಗಿದ್ದು, ಜಯದೊಂದಿಗೆ ಅಭಿಯಾನ ಆರಂಭಿಸುವ ಇರಾದೆಯಲ್ಲಿವೆ.

15 ರನ್ ಗಳಿಸಿರುವ ಮಂದಾನ ಹಾಗೂ 4 ರನ್ ಗಳಿಸಿರುವ ದೀಪ್ತಿ ಶರ್ಮಾ ಕ್ರೀಸ್‌ನಲ್ಲಿದ್ದು, ತಂಡದ ಮೊತ್ತ 8 ಓವರ್‌ಗಳಲ್ಲಿ 21 ರನ್‌ ಆಗಿದೆ. ಮಧ್ಯಮ ವೇಗಿ ಡಯಾನಾ ಬೇಗ್‌ ವರ್ಮಾ ವಿಕೆಟ್‌ ಪಡೆದಿದ್ದಾರೆ.

ತಂಡಗಳು ಹೀಗಿವೆ
ಭಾರತ ತಂಡ: ಸ್ಮೃತಿ ಮಂದಾನ, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಹರ್ಮನ್‌ಪ್ರೀತ್ ಕೌರ್‌, ಮಿಥಾಲಿ ರಾಜ್ (ನಾಯಕಿ), ರಿಚಾ ಘೋಷ್ (ವಿಕೆಟ್‌ ಕೀಪರ್‌), ಸ್ನೇಹಾ ರಾಣಾ, ಜೂಲನ್‌ ಗೋಸ್ವಾಮಿ, ಮೇಘನಾ ಸಿಂಗ್‌, ಪೂಜಾ ವಸ್ತ್ರಾಕರ್‌, ರಾಜೇಶ್ವರಿ ಗಾಯಕವಾಡ್‌

ಪಾಕಿಸ್ತಾನ ತಂಡ: ಜವೆರಿಯಾ ಖಾನ್‌, ಸಿದ್ರಾ ಅಮೀನ್‌, ಬಿಷ್ಮಾ ಮರೂಫ್‌ (ನಾಯಕಿ), ಒಮಾಇಮಾ ಸೊಹೈಲ್, ನಿದಾ ದರ್‌, ಅಲಿಯಾ ರಿಯಾಜ್‌, ಫಾತಿಮಾ ಸನಾ, ಸಿದ್ರಾ ನವಾಜ್‌ (ವಿಕೆಟ್‌ ಕೀಪರ್‌), ಡಯಾನಾ ಬೇಗ್‌, ನಷ್ರಾ ಸಂಧು, ಅನಮ್ ಅಮಿನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT