ಬ್ರಿಸ್ಬೇನ್: ಶಫಾಲಿ ವರ್ಮಾ ಮತ್ತು ರಾಘವಿ ಬಿಷ್ಟ್ ಅವರಿಬ್ಬರ ಉಪಯುಕ್ತ ಅರ್ಧಶತಕಗಳ ಬಲದಿಂದ ಭಾರತ ಎ ತಂಡವು ಆಸ್ಟ್ರೇಲಿಯಾ ಎ ವಿರುದ್ದದ ಏಕೈಕ ‘ಟೆಸ್ಟ್’ ಪಂದ್ಯದಲ್ಲಿ ದಿಟ್ಟ ಪ್ರತಿಕ್ರಿಯೆ ನೀಡಿದೆ. ಎಮಿ ಎಡ್ಗರ್ (53ಕ್ಕೆ4) ಅವರ ಚುರುಕಿನ ದಾಳಿಯ ಎದುರಿಸಿದ ಭಾರತ ಎ ತಂಡವು ಪಂದ್ಯದ ಮೂರನೇ ದಿನದಾಟದ ಮುಕ್ತಾಯಕ್ಕೆ 254 ರನ್ಗಳ ಮುನ್ನಡೆ ಸಾಧಿಸಿದೆ.

ಭಾರತ ಎ ತಂಡವು ಮೊದಲ ಇನಿಂಗ್ಸ್ನಲ್ಲಿ 299 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಆಸ್ಟ್ರೇಲಿಯಾ ಎ ತಂಡವು 6 ಆರನ್ಗಳ ಅಲ್ಪ ಮುನ್ನಡೆ ಪಡೆಯಿತು. ಅದಕ್ಕೆ ಕಾರಣವಾಗಿದ್ದು ಸಿಯಾನಾ ಜಿಂಜರ್ (103; 138ಎ, 4X12, 6X1) ಅವರ ಶತಕ. ಅವರಿಗೆ ನಿಕೊಲ್ ಫಲ್ಟುಮ್ (54; 91ಎ) ಅರ್ಧಶತಕ ಗಳಿಸಿ ಬಲ ತುಂಬಿದರು. ಇದರಿಂದಾಗಿ ಆತಿಥೇಯ ತಂಡವು 76.2 ಓವರ್ಗಳಲ್ಲಿ 305 ರನ್ ಗಳಿಸಿತು. ಸೈಮಾ ಠಾಕೂರ್ (31ಕ್ಕೆ3) ಉತ್ತಮ ಬೌಲಿಂಗ್ ಮಾಡಿದರು.

ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ಎ ತಂಡವು 73 ಓವರ್ಗಳಲ್ಲಿ 8 ವಿಕೆಟ್ಗಳಿಗೆ 260 ರನ್ ಗಳಿಸಿತು. ಶಫಾಲಿ (52; 58ಎ, 4X2, 6X2) ಅವರು ನಂದಿನಿ ಕಶ್ಯಪ್ (12 ರನ್) ಜೊತೆಗೆ ಮೊದ ವಿಕೆಟ್ ಜೊತೆಯಾಟದಲ್ಲಿ 42 ರನ್ ಸೇರಿಸಿದರು. ಆದರೆ ಎಮಿ ಎಡ್ಗರ್ ಮತ್ತು ಸಿಯಾನಾ ಜಿಂಜರ್ ಅವರ ಬೌಲಿಂಗ್ ದಾಲಿಯ ಮುಂದೆ ತಂಡವು ಒಂದು ಹಂತದಲ್ಲಿ 140 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಇದರಿಂದಾಗಿ ತಂಡವು ಬೇಗನೆ ಕುಸಿಯುವ ಆತಂಕ ಮೂಡಿತ್ತು.

ಈ ಸಂದರ್ಭದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ರಾಘವಿ ಬಿಷ್ಠ್ (86; 119ಎ, 4X13) ಮತ್ತು ತನುಶ್ರೀ ಸರಕಾರ್ (25; 55ಎ) ಅವರು ಭಾರತ ಎ ತಂಡವು ಉತ್ತಮ ಮೊತ್ತ ಮುನ್ನಡೆ ಸಾಧಿಸಲು ಕಾರಣರಾದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ ಎ: 299 ಆಸ್ಟ್ರೇಲಿಯಾ ಎ: 76.2 ಓವರ್ಗಳಲ್ಲಿ 305 (ಸಿಯಾನಾ ಜಿಂಜರ್ 103, ನಿಕೊಲ್ ಫಾಲ್ಟಮ್ 54, ಸೈಮಾ ಠಾಕೂರ್ 31ಕ್ಕೆ3, ರಾಧಾ ಯಾದವ್ 68ಕ್ಕೆ2) ಭಾರತ ಎ: 73 ಓವರ್ಗಳಲ್ಲಿ 8ಕ್ಕೆ260 (ಶಫಾಲಿ ವರ್ಮಾ 52, ರಾಘವಿ ಬಿಷ್ಟ್ 86, ಎಮಿ ಎಡ್ಗರ್ 53ಕ್ಕೆ4)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.