ನವದೆಹಲಿ: ಐಪಿಎಲ್ನಲ್ಲಿ ಜಗಳವಾಡಿಕೊಂಡಿದ್ದ ಭಾರತ ತಂಡದ ಸೂಪರ್ಸ್ಟಾರ್ ವಿರಾಟ್ ಕೊಹ್ಲಿ ಹಾಗೂ ಅಫ್ಗಾನಿಸ್ತಾನದ ವೇಗದ ಬೌಲರ್ ನವೀನ್ ಉಲ್ ಹಕ್, ಬುಧವಾರ ಪರಸ್ಪರ ಹಸ್ತಲಾಘವ ಮಾಡಿಕೊಂಡು ನಗು ಚೆಲ್ಲಿದ್ದಾರೆ. ಆ ಮೂಲಕ ಇವರಿಬ್ಬರ ನಡುವಿನ ಮುನಿಸು ಅಂತ್ಯವಾಗಿದೆ.

ಬುಧವಾರ ಭಾರತ ಹಾಗೂ ಅಫ್ಗಾನಿಸ್ತಾನದ ನಡುವಿನ ಪಂದ್ಯದಲ್ಲಿ ಇಬ್ಬರು ಆಟಗಾರರು ಹಸ್ತಲಾಘವ ಮಾಡಿ, ತಬ್ಬಿಕೊಂಡು ದ್ವೇಷವನ್ನು ಮರೆತರು. ಪಂದ್ಯದ ಬಳಿಕ ಇಬ್ಬರೂ ಆಟಗಾರರು ಸ್ನೇಹದಿಂದ ವರ್ತಿಸುವುದು ಕಂಡುಬಂತು.

ಇದೇ ವರ್ಷ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್ ಪಂದ್ಯದಲ್ಲಿ ಈ ಇಬ್ಬರು ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿತ್ತು. ಪಂದ್ಯದ ನಂತರವೂ ಇವರಿಬ್ಬರ ಮುನಿಸು ಪ್ರದರ್ಶನವಾಗಿತ್ತು. ಕೊನೆಗೆ ಲಖನೌ ನಾಯಕ ಕೆ.ಎಲ್ ರಾಹುಲ್ ರಾಹುಲ್ ಹಾಗೂ ಮೆಂಟರ್ ಗೌತಮ್ ಗಂಭೀರ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಗಂಭೀರ್ ಕೂಡ ಕೋಪಗೊಂಡಿದ್ದರು.

ಬುಧವಾರದ ಪಂದ್ಯದಲ್ಲಿ ನವೀನ್ ಉಲ್ ಹಕ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಲು ಬಂದಾಗ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ‘ಕೊಹ್ಲಿ, ಕೊಹ್ಲಿ’ ಎಂದು ಕೂಗುತ್ತಿದ್ದರು.

‘ಅದು ಮೈದಾನದಲ್ಲಿ ನಡೆದ ಘಟನೆ. ಮೈದಾನದ ಹೊರಗೆ ಏನೂ ಇಲ್ಲ. ಜನ ಅದನ್ನು ದೊಡ್ಡದು ಮಾಡುತ್ತಾರೆ. ಅವರ ಬೆಂಬಲಿಗರಿಗೆ ಏನಾದರೂ ಬೇಕು. ನಾವು ಅದನ್ನು ಕೊನೆಗೊಳಿಸಿದ್ದೇವೆ. ನಾವು ಹಸ್ತಲಾಘವ ಮಾಡಿ, ತಬ್ಬಿಕೊಂಡಿದ್ದೇವೆ’ ಎಂದು ನವೀನ್ ಹೇಳಿದ್ದಾರೆ.

‘ತವರು ಮೈದಾನದಲ್ಲಿ ಆಟಗಾರರ ಹೆಸರನ್ನು ಪ್ರೇಕ್ಷಕರು ಕೂಗಿದ್ದಾರೆ. ಇದು ಕೊಹ್ಲಿಯ ತವರು ಅಂಗಳ. ಅವರು ಒಳ್ಳೆಯ ಮನುಷ್ಯ. ಉತ್ತಮ ಆಟಗಾರ’ ಎಂದು ನವೀನ್ ಪ್ರಶಂಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.