ಏಕದಿನ ಕ್ರಿಕೆಟ್‌: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 8 ರನ್‌ ರೋಚಕ ಜಯ 

ಗುರುವಾರ , ಮಾರ್ಚ್ 21, 2019
30 °C

ಏಕದಿನ ಕ್ರಿಕೆಟ್‌: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 8 ರನ್‌ ರೋಚಕ ಜಯ 

Published:
Updated:

ನಾಗಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಗೆಲುವಿನ ನಗೆ ಬೀರಿದೆ. 

ಭಾರತ ನೀಡಿದ್ದ 251 ರನ್‌ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 242 ರನ್‌ ಗಳಿಸಿ ಆಲೌಟ್‌ ಆಗಿದೆ. ಈ ಮೂಲಕ ಭಾರತ 8 ರನ್‌ಗಳಿಂದ ಜಯ ಸಾಧಿಸಿತು. 

ಆಸೀಸ್‌ ವಿರುದ್ಧ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ನಾಯಕ ವಿರಾಟ್‌ ಕೊಹ್ಲಿ ಶತಕದ ಬಲದಿಂದ (116), ವಿಜಯ್‌ ಶಂಕರ್‌ (46) ರನ್‌ ನೇರವಿನಿಂದ 48.2 ಓವರ್‌ಗಳಲ್ಲಿ 250 ರನ್‌ ಗಳಿಸಿ ಆಲೌಟ್‌ ಆಗಿತ್ತು.

ಆಸ್ಟ್ರೇಲಿಯಾ ಪರ: ಆ್ಯರನ್ ಫಿಂಚ್‌ 37, ಉಸ್ಮಾನ್ ಖ್ವಾಜಾ 38, ಶಾನ್‌ ಮಾರ್ಶ್‌ 16, ಪೀಟರ್‌ ಹ್ಯಾಂಡ್ಸ್‌ಕಂಬ್‌ 48, ಗ್ಲೇನ್‌ ಮ್ಯಾಕ್ಸ್‌ವೇಲ್‌ 4, ಮಾರ್ಕಸ್ ಸ್ಟೊಯಿನಿಸ್‌ 52, ಅಲೆಕ್ಸ್ ಕ್ಯಾರಿ 22, ನೇಥನ್ ಕಾಲ್ಟರ್‌ನೈಲ್‌ 4, ಪ್ಯಾಟ್‌ ಕಮಿನ್ಸ್‌ 00, ನೇಥನ್ ಲಯನ್‌ 6, ಆ್ಯಡಂ ಜಂಪಾ 02 ರನ್‌ ಗಳಿಸಿದರು.

ಭಾರತದ ಪರ: ಕುಲದೀಪ್‌ ಯಾದವ್‌ 3, ಜಸ್‌ಪ್ರೀತ್‌ ಬೂಮ್ರಾ 2, ವಿಜಯ್‌ ಶಂಕರ್‌ 2, ಜಡೇಜ 1, ಕೇದಾರ್‌ ಜಾಧವ್‌ 1 ವಿಕೆಟ್‌ ಪಡೆದರು. 

ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2–0ರಲ್ಲಿ ಮುನ್ನಡೆ ಸಾಧಿಸಿದೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !