ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವಳಿ ವೇಗಿಗಳಿಗೆ ಅಶ್ವಿನ್ ಸಾಥ್: 150 ರನ್‌ಗೆ ಆಲೌಟ್ ಆದ ಬಾಂಗ್ಲಾ

Last Updated 14 ನವೆಂಬರ್ 2019, 11:03 IST
ಅಕ್ಷರ ಗಾತ್ರ

ಇಂದೋರ್:ಭಾರತ ಎದುರಿನ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ, ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ತಂಡ 150 ಗಳಿಸಿ ಆಲೌಟ್‌ ಆಯಿತು.

ಇಲ್ಲಿನ ಹೋಳ್ಕರ್‌ ಕ್ರೀಡಾಂಗಣದಲ್ಲಿ ಇಂದು(ಗುರುವಾರ) ಆರಂಭವಾದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಪಡೆಯ ಬೌಲರ್‌ಗಳು ಬಾಂಗ್ಲಾ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಅನುಭವಿ ಆಟಗಾರ ಮುಷ್ಫಿಕುರ್ ರಹೀಮ್(43) ಹಾಗೂನಾಯಕ ಮೊಮಿನುಲ್ ಹಕ್(37) ಹೊರತುಪಡಿಸಿ ಉಳಿದ ಆಟಗಾರರಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರಲಿಲ್ಲ.

ಒಂದು ಹಂತದಲ್ಲಿ ಕೇವಲ 31ರನ್‌ ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿದ್ದ ಬಾಂಗ್ಲಾ ತಂಡ ಶತಕದ ಗಡಿ ದಾಟುವುದೇ ಅನುಮಾನವಿತ್ತು. ಈ ವೇಳೆ ಜೊತೆಯಾದಹಕ್‌–ರಹೀಮ್‌, ನಾಲ್ಕನೇ ವಿಕೆಟ್‌ಗೆ 68 ರನ್‌ ಸೇರಿಸಿ ಚೇತರಿಕೆ ನೀಡಿದರು. ರವಿಚಂದ್ರನ್‌ ಅಶ್ವಿನ್‌ ಈ ಜೋಡಿಯನ್ನು 38ನೇ ಓವರ್‌ನಲ್ಲಿಬೇರ್ಪಡಿಸಿದರು.

ವೇಗಿ ಮೊಹಮದ್‌ ಶಮಿ ಮೂರು ವಿಕೆಟ್‌ ಪಡೆದರೆ, ಇಶಾಂತ್‌ ಶರ್ಮಾ, ಉಮೇಶ್‌ ಯಾದವ್‌ ಮತ್ತು ಅಶ್ವಿನ್‌ ತಲಾ 2 ವಿಕೆಟ್‌ ಪಡೆದರು.

ಸದ್ಯ ಇನಿಂಗ್ಸ್‌ ಆರಂಭಿಸಿರುವ ಭಾರತ 12 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು 32 ರನ್‌ ಗಳಿಸಿದೆ. ಕಳೆದ ತಿಂಗಳು ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಮಿಂಚಿದ್ದ ಅನುಭವಿ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ, ಯುವ ವೇಗಿಅಬು ಜಯೆದ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿ ನಿರ್ಗಮಿಸಿದರು.

ಆರಂಭಿಕ ಮಯಂಕ್‌ ಅಗರವಾಲ್‌ ಹಾಗೂ ಟೆಸ್ಟ್‌ ಪರಿಣತ ಚೇತೇಶ್ವರ ಪೂಜಾರ ಕ್ರೀಸ್‌ನಲ್ಲಿದ್ದು, ಇನಿಂಗ್ಸ್‌ ಮುನ್ನಡೆಗೆ ಇನ್ನು 118ರನ್‌ ಗಳಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT