ರಾಜ್‌ಕೋಟ್: ಸಂಘಟಿತ ಪ್ರದರ್ಶನ ತೋರಿದ ಭಾರತ ತಂಡ, ಇಂಗ್ಲೆಂಡ್ ಎದುರಿನ ಮೂರನೇ ಟೆಸ್ಟ್ ಪಂದ್ಯದಲ್ಲಿ 434 ರನ್‌ಗಳ ದಾಖಲೆ ಅಂತರದ ಜಯ ಗಳಿಸಿದೆ. ಆ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2–1 ಅಂತರದ ಮುನ್ನಡೆ ಸಾಧಿಸಿದೆ.

ಗುರುವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಾಯಕ ರೋಹಿತ್ ಶರ್ಮಾ (131 ರನ್) ಹಾಗೂ ರವೀಂದ್ರ ಜಡೇಜ (112 ರನ್) ಗಳಿಸಿದ ಶತಕಗಳ ಬಲದಿಂದ 1ನೇ ಇನಿಂಗ್ಸ್‌ನಲ್ಲಿ 445 ರನ್ ಕಲೆಹಾಕಿತ್ತು. ಈ ಮೊತ್ತದೆದುರು ಪ್ರವಾಸಿ ಪಡೆ 319 ರನ್‌ಗಳಿಗೆ ಆಲೌಟ್ ಆಗಿತ್ತು.

126 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ, ಯಶಸ್ವಿ ಜೈಸ್ವಾಲ್ ದ್ವಿಶತಕ (ಅಜೇಯ 214 ರನ್), ಶುಭಮನ್ ಗಿಲ್ (91 ರನ್) ಹಾಗೂ ಸರ್ಫರಾಜ್ ಖಾನ್ (ಅಜೇಯ 68 ರನ್) ಅರ್ಧಶತಗಳ ನೆರವಿನಿಂದ 4 ವಿಕೆಟ್‌ಗೆ 430 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.

557 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 122 ರನ್ ಗಳಿಸಿ, 39.4 ಓವರ್‌ಗಳಲ್ಲೇ ಸರ್ವಪತನ ಕಂಡಿದೆ. ಇದರೊಂದಿಗೆ ಭಾರೀ ಮುಖಭಂಗ ಅನುಭವಿಸಿದೆ.
.IND vs ENG Test | ಅಜೇಯ ದ್ವಿಶತಕ ಸಿಡಿಸಿ ಹಲವು ದಾಖಲೆ ಬರೆದ ಯಶಸ್ವಿ ಜೈಸ್ವಾಲ್.
ಭಾರತದ ತ್ರಿವಳಿ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ, ಕುಲದೀಪ್ ಯಾದವ್ ಹಾಗೂ ಆರ್.ಅಶ್ವಿನ್ ಎಂಟು ವಿಕೆಟ್‌ಗಳನ್ನು ಕಿತ್ತರು. ಉಳಿದ ಎರಡರಲ್ಲಿ ಒಂದು ರನೌಟ್ ಆದರೆ, ಇನ್ನೊಂದು ವಿಕೆಟ್ ವೇಗಿ ಜಸ್‌ಪ್ರೀತ್ ಬೂಮ್ರಾ ಪಾಲಾಯಿತು.

ಜಡೇಜ 5 ವಿಕೆಟ್ ಗೊಂಚಲು ಸಾಧನೆ ಮಾಡಿದರೆ, ಕುಲದೀಪ್ ಯಾದವ್ ಎರಡು ಮತ್ತು ಅಶ್ವಿನ್ ಒಂದು ವಿಕೆಟ್ ಪಡೆದರು.

ದಾಖಲೆಯ ಜಯ
ಟೀಂ ಇಂಡಿಯಾಗೆ ಈ ಪಂದ್ಯದಲ್ಲಿ ದೊರೆತ ಗೆಲುವು, ಟೆಸ್ಟ್ ಕ್ರಿಕೆಟ್‌ನಲ್ಲಿ ರನ್ ಅಂತರದಲ್ಲಿ ಸಿಕ್ಕ ಅತಿದೊಡ್ಡ ಜಯವಾಗಿದೆ. 2021ರಲ್ಲಿ ನ್ಯೂಜಿಲೆಂಡ್ ವಿರುದ್ಧ 372 ರನ್ ಅಂತರದ ಗೆಲುವು ಸಾಧಿಸಿದ್ದು, ಈವರೆಗೆ ದಾಖಲೆಯಾಗಿತ್ತು.

1934ರಲ್ಲಿ ಆಸ್ಟ್ರೇಲಿಯಾ ವಿರುದ್ಧ 562 ರನ್ ಅಂತರದ ಹೀನಾಯ ಸೋಲು ಕಂಡಿದ್ದ ಇಂಗ್ಲೆಂಡ್ ಪಡೆಗೆ ಇಂದು ಎದುರಾದ ಸೋಲು, ರನ್ ಅಂತರದಲ್ಲಿ ಎರಡನೇ ಅತಿದೊಡ್ಡ ಸೋಲೆನಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.