ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 4th Test: ಭಾರತದ ಗೆಲುವಿಗೆ ಬೇಕು ಇನ್ನೂ 74 ರನ್

Published 26 ಫೆಬ್ರುವರಿ 2024, 6:42 IST
Last Updated 26 ಫೆಬ್ರುವರಿ 2024, 6:42 IST
ಅಕ್ಷರ ಗಾತ್ರ

ರಾಂಚಿ: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ 4ನೇ ದಿನದಾಟದ ಭೋಜನ ವಿರಾಮಕ್ಕೆ ಭಾರತ ತಂಡವು ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದ್ದು, ಗೆಲುವಿಗೆ ಇನ್ನೂ 74 ರನ್‌ಗಳ ಅಗತ್ಯವಿದೆ.

ಮೂರನೇ ದಿನವಾದ ಭಾನುವಾರ ಇಂಗ್ಲೆಂಡ್ ತಂಡವು ಭಾರತಕ್ಕೆ 192 ರನ್‌ಗಳ ಗೆಲುವಿನ ಗುರಿ ನೀಡಿತ್ತು. ದಿನದಾಟದ ಅಂತ್ಯಕ್ಕೆ ಆತಿಥೇಯ ತಂಡವು 8 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 40 ರನ್ ಗಳಿಸಿತ್ತು. ಇಂದು ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡ 3 ವಿಕೆಟ್ ಕಳೆದುಕೊಂಡಿದೆ.

ರೋಹಿತ್ ಶರ್ಮಾ 55, ಯಶಸ್ವಿ ಜೈಸ್ವಾಲ್ 37 ರನ್ ಗಳಿಸಿ ಔಟಾಗಿದ್ದಾರೆ. ರಜತ್ ಪಾಟಿದಾರ್‌ ಸೊನ್ನೆ ಸುತ್ತಿದ್ದಾರೆ. 18 ರನ್ ಗಳಿಸಿರುವ ಶುಭಮನ್ ಗಿಲ್ ಮತ್ತು 3 ರನ್ ಗಳಿಸಿರುವ ಜಡೇಜ ಕ್ರೀಸ್‌ನಲ್ಲಿದ್ದಾರೆ.

ಇಂದು ಎರಡು ಸೆಷನ್ ಮತ್ತು ನಾಳೆ ಒಂದು ದಿನದ ಆಟ ಬಾಕಿ ಉಳಿದಿದೆ. ವಿಕೆಟ್ ಕಾಯ್ದುಕೊಂಡು ಭಾರತ ಎಚ್ಚರಿಕೆ ಆಟವಾಡಬೇಕಿದೆ.

ಈಗಾಗಲೇ ಸರಣಿಯಲ್ಲಿ 2–1ರ ಮುನ್ನಡೆಯಲ್ಲಿರುವ ಭಾರತ ತಂಡ ಈ ಪಂದ್ಯ ಗೆದ್ದರೆ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT