ಲಂಡನ್: ಭಾರತ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಐದನೇ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿರುವ ಜೋ ರೂಟ್, ಒಂದೇ ತಂಡದ ವಿರುದ್ಧ ಅತಿಹೆಚ್ಚು ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿದ ಆಟಗಾರರ ಸಾಲಿನಲ್ಲಿ ಜಂಟಿ ಎರಡನೇ ಸ್ಥಾನಕ್ಕೇರಿದ್ದಾರೆ.

ಐದು ಪಂದ್ಯಗಳ ಸರಣಿಯ ಅಂತಿಮ 'ಟೆಸ್ಟ್' ಕೆನ್ನಿಂಗ್ಟನ್ ಓವಲ್ನಲ್ಲಿ ನಡೆಯುತ್ತಿದೆ. ಸರಣಿ ಉಳಿಸಿಕೊಳ್ಳಲು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಟೀಂ ಇಂಡಿಯಾ, ಆಂಗ್ಲರಿಗೆ 374 ರನ್ಗಳ ಕಠಿಣ ಗುರಿಯೊಡ್ಡಿದೆ.

ಆದರೆ, ಈ ಗುರಿ ಎದುರು ಆತಿಥೇಯ ತಂಡ ಲೀಲಾಜಾಲವಾಗಿ ಬ್ಯಾಟಿಂಗ್ ನಡೆಸುತ್ತಿದೆ. 62 ಓವರ್ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 293 ರನ್ ಗಳಿಸಿದ್ದು, ಗೆಲುವಿಗೆ 81 ರನ್ ಬೇಕಾಗಿದೆ.

'ಟೆಸ್ಟ್ ಪರಿಣತ' ಬ್ಯಾಟರ್ಗಳಾದ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್, ನಾಲ್ಕನೇ ವಿಕೆಟ್ ಪಾಲುದಾರಿಕೆಯಲ್ಲಿ 187 ರನ್ ಗಳಿಸಿದ್ದು ತಮ್ಮ ತಂಡಕ್ಕೆ ಜಯ ತಂದುಕೊಡುವ ಛಲದಲ್ಲಿ ಆಡುತ್ತಿದ್ದಾರೆ.

ಬೀಸಾಟಕ್ಕೆ ಒತ್ತು ನೀಡಿರುವ ಬ್ರೂಕ್, ಈ ಮಾದರಿಯಲ್ಲಿ 10ನೇ ಶತಕ ಬಾರಿಸಿದ್ದಾರೆ. ಅವರು, 91 ಎಸೆತಗಳಲ್ಲೇ ಶತಕ ಸಿಡಿಸಿದ್ದು, 103 ರನ್ ಗಳಿಸಿ ಆಡುತ್ತಿದ್ದಾರೆ.

ಇತ್ತ, ರೂಟ್ ಕೂಡ ಶತಕದ ಹೊಸ್ತಿಲಲ್ಲಿದ್ದಾರೆ. 126 ಎಸೆತಗಳಲ್ಲಿ 83 ರನ್ ಗಳಿಸಿದ್ದಾರೆ.
.ENG vs IND Test | 400ಕ್ಕಿಂತ ಅಧಿಕ ರನ್ ಗಳಿಸಿದ 9 ಬ್ಯಾಟರ್ಗಳು: ಇದೇ ಮೊದಲು!.ENG vs IND Test | ಐದು ಪಂದ್ಯಗಳಲ್ಲಿ 3,809 ರನ್: ಹೊಸ ದಾಖಲೆ ಬರೆದ ಭಾರತ.
ಭಾರತದ ವಿರುದ್ಧ 16 ಬಾರಿ 50+ ರನ್
ಅಮೋಘ ಆಟವಾಡುತ್ತಿರುವ ರೂಟ್, ಭಾರತದ ವಿರುದ್ಧ 16ನೇ ಬಾರಿಗೆ 50ಕ್ಕಿಂತ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಅವರು, ಒಂದೇ ತಂಡದ ವಿರುದ್ಧ ಅತಿಹೆಚ್ಚು ಬಾರಿ 'ಫಿಫ್ಟಿ ಪ್ಲಸ್' ರನ್ ಗಳಿಸಿದ ಬ್ಯಾಟರ್ಗಳ ಸಾಲಿನಲ್ಲಿ ದಕ್ಷಿಣ ಆಫ್ರಿಕಾದ ಹೆರ್ಬೀ ಟೇಲರ್ ಅವರೊಂದಿಗೆ ಜಂಟಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.

ಹೆರ್ಬೀ, ಇಂಗ್ಲೆಂಡ್ ವಿರುದ್ಧ 16 ಸಲ ಅರ್ಧಶತಕಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ.

ಒಟ್ಟಾರೆ ಈ ಪಟ್ಟಿಯಲ್ಲಿ ಬ್ಯಾಟಿಂಗ್ ದಂತಕಥೆ ಡಾನ್ ಬ್ರಾಡ್ಮನ್ ಇದ್ದಾರೆ. ಅವರು, ಇಂಗ್ಲೆಂಡ್ ವಿರುದ್ಧ 17 ಬಾರಿ ಇಂತಹ ಸಾಧನೆ ಮಾಡಿದ್ದಾರೆ. ಅವರ ದಾಖಲೆ ಸರಿಗಟ್ಟಲು ರೂಟ್ಗೆ ಇನ್ನೊಂದು (ಭಾರತದ ವಿರುದ್ಧ) ಅರ್ಧಶತಕ ಬೇಕಾಗಿದೆ.

3ನೇ '500'
ಪ್ರಸ್ತುತ ಸರಣಿಯಲ್ಲಿ 5 ಪಂದ್ಯಗಳ 9 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ರೂಟ್, ಒಟ್ಟು 511 ರನ್ ಗಳಿಸಿಕೊಂಡಿದ್ದಾರೆ.

ಇದರೊಂದಿಗೆ ಅವರು, ಟೀಂ ಇಂಡಿಯಾ ವಿರುದ್ಧ 3ನೇ ಬಾರಿಗೆ ಸರಣಿಯೊಂದರಲ್ಲಿ ಐನೂರಕ್ಕಿಂತ ಹೆಚ್ಚು ರನ್ ಗಳಿಸಿದ ದಾಖಲೆ ಬರೆದಿದ್ದಾರೆ.

ಈ ಹಿಂದೆ ವೆಸ್ಟ್ ಇಂಡೀಸ್ನ ಎವರ್ಟನ್ ವೀಕ್ಸ್, ಗ್ಯಾರಿ ಸೋಬರ್ಸ್, ಪಾಕಿಸ್ತಾನ ಜಹೀರ್ ಅಬ್ಬಾಸ್, ಯೂನಿಸ್ ಖಾನ್, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ತಲಾ ಎರಡು ಸಲ ಈ ಸಾಧನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.