ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ind vs SA ಟಿ20: ಪಂದ್ಯಕ್ಕೆ ಮಳೆ ಅಡ್ಡಿ, 19 ಓವರ್‌ ನಿಗದಿ

ಅಕ್ಷರ ಗಾತ್ರ

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಐದನೇ ಮತ್ತು ಅಂತಿಮ ಟಿ20 ಕ್ರಿಕೆಟ್ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ದಕ್ಷಿಣ ಆಫ್ರಿಕಾ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದೆ. ಆದರೆ, ಪಂದ್ಯ ಆರಂಭಕ್ಕೆ ಮಳೆಯಿಂದಾಗಿ ಅಡ್ಡಿಯಾಯಿತು.ಮಳೆ ಬಂದ ಕಾರಣ ಟಿ20 ಪಂದ್ಯವನ್ನು ಇನಿಂಗ್ಸ್‌ವೊಂದಕ್ಕೆ 19 ಓವರ್‌ಗಳಿಗೆ ನಿಗದಿಪಡಿಸಲಾಗಿದೆ.

ಆಟಗಾರರು ಅಂಗಳಕ್ಕೆ ಇಳಿಯುವ ಹೊತ್ತಿಗೆ ವರುಣನ ಆರ್ಭಟ ಶುರುವಾಗಿದ್ದರಿಂದ ಪಂದ್ಯದ ಆರಂಭ ವಿಳಂಬವಾಯಿತು. ಭಾರತ ತಂಡವು ಬ್ಯಾಟಿಂಗ್ ಆರಂಭಿಸುವ ಕೆಲವೇ ಕ್ಷಣಗಳ ಮುನ್ನ ಮಳೆ ಜೋರಾಗಿ ಸುರಿಯಿತು. ಸುಮಾರು 15 ನಿಮಿಷದ ನಂತರ ನಿಂತಿತು.

ಪಿಚ್ ಮತ್ತು ಮೈದಾನ ಪರಿಶೀಲಿಸಿದ ಅಂಪೈರ್‌ಗಳು ಪಂದ್ಯವನ್ನು 7:50ಕ್ಕೆ ಶುರು ಮಾಡಲಾಯಿತು. 20–20 ಓವರ್‌ಗಳ ಬದಲು ಇನಿಂಗ್ಸ್‌ಗೆ 19 ಓವರ್‌ಗಳನ್ನು ನಿಗದಿ ಮಾಡಲಾಗಿದೆ. ಭಾರತದ ಪರ ಇಶಾನ್‌ ಕಿಶನ್‌ ಮತ್ತುಋತುರಾಜ್‌ ಗಾಯಕವಾಡ್‌ ಬ್ಯಾಟಿಂಗ್‌ ಆರಂಭಿಸಿದ್ದಾರೆ. ಮೊದಲ ಓವರ್‌ನಲ್ಲಿ ಇಶಾನ್‌ ಎರಡು ಸಿಕ್ಸರ್‌ ಸಿಡಿಸಿದರು.

ಐದು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 2–2ರಿಂದ ಸಮಬಲ ಸಾಧಿಸಿದ್ದು, ಇದರಿಂದಾಗಿ ಇಂದಿನ ಪಂದ್ಯವು ನಿರ್ಣಾಯಕವಾಗಿದೆ. ಮೂರು ವರ್ಷಗಳ ನಂತರ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಟಿ20 ಪಂದ್ಯ ನಡೆಯುತ್ತಿದೆ. ಉಭಯ ತಂಡಗಳು 2019ರಲ್ಲಿ ಇಲ್ಲಿ ಮುಖಾಮುಖಿಯಾಗಿದ್ದವು. ಅದರಲ್ಲಿ ದಕ್ಷಿಣ ಆಫ್ರಿಕಾ ಜಯಭೇರಿ ಬಾರಿಸಿತ್ತು.

ಯುವನಾಯಕ ರಿಷಭ್ ಪಂತ್ ಮುನ್ನಡೆಸುತ್ತಿರುವ ಭಾರತತಂಡದಲ್ಲಿ ದಿನೇಶ್ ಕಾರ್ತಿಕ್ ಅವರೇ ಪ್ರಮುಖ ಆಕರ್ಷಣೆಯಾಗಿದ್ದಾರೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮಿಂಚಿದ್ದರು.

ತಂಡಗಳು:

ಭಾರತ: ರಿಷಭ್‌ ಪಂತ್‌ (ನಾಯಕ–ವಿಕೆಟ್ ಕೀಪರ್‌), ಇಶಾನ್‌ ಕಿಶನ್‌, ಋತುರಾಜ್‌ ಗಾಯಕವಾಡ್‌, ಶ್ರೇಯಸ್‌ ಅಯ್ಯರ್‌, ಹಾರ್ದಿಕ್‌ ಪಾಂಡ್ಯ, ದಿನೇಶ್‌ ಕಾರ್ತಿಕ್‌, ಅಕ್ಷರ್‌ ಪಟೇಲ್‌, ಹರ್ಷಲ್‌ ಪಟೇಲ್‌, ಭುವನೇಶ್ವರ್‌ ಕುಮಾರ್‌, ಆವೇಶ್‌ ಖಾನ್‌, ಯಜುವೇಂದ್ರ ಚಾಹಲ್‌.

ದಕ್ಷಿಣ ಆಫ್ರಿಕಾ: ಕೇಶವ್ ಮಹಾರಾಜ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ರೀಜಾ ಹೆನ್ರಿಕ್ಸ್, ರಸಿ ವ್ಯಾನ್ ಡರ್ ಡಸೆ, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟನ್ ಸ್ಟಬ್ಸ್, ಡ್ವೇನ್ ಪ್ರಿಟೊರಿಯಸ್, ಕಗಿಸೊ ರಬಾಡ, ಲುಂಗಿ ಗಿಡಿ, ಎನ್ರಿಚ್ ನಾಕಿಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT