ಕೋಲ್ಕತ್ತ: ವಿಕೆಟ್ಕೀಪರ್ –ಬ್ಯಾಟರ್ ಧ್ರುವ ಜುರೇಲ್ ಅವರನ್ನು ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ. ನಿತೀಶ್ ಕುಮಾರ್ ರೆಡ್ಡಿ ಅವರ ಬದಲಿಗೆ ಧ್ರುವ ಸ್ಥಾನ ಪಡೆಯಲಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತ ತಂಡದ ಸಹಾಯಕ ಕೋಚ್ ರಿಯಾನ್ ಟೆನ್ ಡಾಶೆಟ್, ‘ಜುರೇಲ್ ಮತ್ತು ರಿಷಭ್ ಪಂತ್ ಅವರನ್ನು ಮೊದಲ ಟೆಸ್ಟ್ನಲ್ಲಿ ಆಡುವ ತಂಡದಿಂದ ಹೊರಗಿಡುವುದು ಸಾಧ್ಯವಿಲ್ಲದ ಮಾತು. ಅವರಿಬ್ಬರದ್ದೂ ಉತ್ತಮ ಸಂಯೋಜನೆ’ ಎಂದರು.

ಗಾಯದಿಂದ ಚೇತರಿಸಿಕೊಂಡು ಮರಳಿದ ರಿಷಭ್ ಪಂತ್ ದಕ್ಷಿಣ ಆಫ್ರಿಕಾ ಎ ವಿರುದ್ಧದ ಎರಡು ‘ಟೆಸ್ಟ್’ ಪಂದ್ಯಗಳ ಸರಣಿಯಲ್ಲಿ ಭಾರತ ಎ ತಂಡವನ್ನು ಮುನ್ನಡೆಸಿದ್ದರು. ಅವರು ಬ್ಯಾಟಿಂಗ್ನಲ್ಲಿಯೂ ಮಿಂಚಿದ್ದರು. ಅದೇ ಸರಣಿಯ ಎರಡನೇ ಪಂದ್ಯದಲ್ಲಿ ಧ್ರುವ ಜುರೇಲ್ ಅವರು ಎರಡೂ ಇನಿಂಗ್ಸ್ಗಳಲ್ಲಿ ಶತಕ ಹೊಡೆದಿದ್ದರು.

ಈಡನ್ ಗಾರ್ಡನ್ನಲ್ಲಿ ಇದೇ ಶುಕ್ರವಾರದಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ಒಂದೂವರೆ ವರ್ಷದ ಹಿಂದೆ ಜುರೇಲ್ ಪದಾರ್ಪಣೆ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ತಾವು ಆಡಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ಸೆಪ್ಟೆಂಬರ್ನಿಂದ ಇಲ್ಲಿಯವರೆಗೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅವರು (140, 56, 125, 44, ಔಟಾಗದೇ 132 ಮತ್ತು ಅಜೇಯ 127) ಅಮೋಘ ಲಯದಲ್ಲಿದ್ದಾರೆ. 47.34 ರಿಂದ 58ರ ಸರಾಸರಿಯಲ್ಲಿ ಅವರು ರನ್ ಗಳಿಸಿದ್ದಾರೆ.

‘ನಿತೀಶ್ ಕುಮಾರ್ ರೆಡ್ಡಿ ಅವರಿಗೆ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಆಡಲು ಹೆಚ್ಚು ಅವಕಾಶಗಳು ಲಭಿಸಿರಲಿಲ್ಲ. ಸದ್ಯ ಇಲ್ಲಿಯ ಸ್ಥಿತಿ–ಗತಿಗೆ ಅನುಗುಣವಾಗಿ ನಿತೀಶ್ ಅವರಿಗೆ ಅಂತಿಮ ಹನ್ನೊಂದರ ಪಟ್ಟಿಯಲ್ಲಿ ಸ್ಥಾನ ಸಿಗುವುದು ಕಷ್ಟವಾಗಲಿದೆ. ಆದ್ದರಿಂದ ಮುಂಬರುವ ಟೆಸ್ಟ್ನಲ್ಲಿ ಅವರಿಗೆ ಅವಕಾಶ ಸಿಗಲಿಕ್ಕಿಲ್ಲ’ ಎಂದೂ ಟೆನ್ ಡಾಶೆಟ್ ಹೇಳಿದರು.
.ಭಾರತವನ್ನು ಅವರದ್ದೇ ನೆಲದಲ್ಲಿ ಸೋಲಿಸುವ ಹಸಿವಿದೆ: ಕೇಶವ್ ಮಹಾರಾಜ್.ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ದೃಷ್ಟಿಯಿಂದ ದ.ಆಫ್ರಿಕಾ ಸರಣಿ ನಿರ್ಣಾಯಕ: ಸಿರಾಜ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.