ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs WI 1st Test | ಜೈಸ್ವಾಲ್–ರೋಹಿತ್ ಅಮೋಘ ಶತಕ; ಬೃಹತ್ ಮುನ್ನಡೆಯತ್ತ ಭಾರತ ತಂಡ

Published 14 ಜುಲೈ 2023, 2:21 IST
Last Updated 14 ಜುಲೈ 2023, 2:21 IST
ಅಕ್ಷರ ಗಾತ್ರ

ರೊಸಿಯು, ಡಾಮಿನಿಕಾ: ಪದಾರ್ಪಣೆ ಪಂದ್ಯವಾಡುತ್ತಿರುವ ಯಶಸ್ವಿ ಜೈಸ್ವಾಲ್‌ ಹಾಗೂ ನಾಯಕ ರೋಹಿತ್‌ ಶರ್ಮ ಗಳಿಸಿದ ಶತಕಗಳ ಬಲದಿಂದ ಭಾರತ ಕ್ರಿಕೆಟ್‌ ತಂಡವು ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಸಾಧಿಸಿದೆ.

ಡಾಮ್ನಿಕಾದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ 2 ವಿಕೆಟ್‌ಗಳನ್ನು ಕಳೆದುಕೊಂಡು 312 ರನ್ ಗಳಿಸಿದೆ.

ಜೈಸ್ವಾಲ್‌ ಜೊತೆಗೂಡಿ ಮೊದಲ ವಿಕೆಟ್‌ ಜೊತೆಯಾಟದಲ್ಲಿ 229 ರನ್‌ ಕಲೆಹಾಕಿದ ರೋಹಿತ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ 10ನೇ ಶತಕ ಪೂರೈಸಿಕೊಂಡರು. ಆದರೆ, ಶತಕ ಗಳಿಸಿದ ಬಳಿಕ ಅವರು ಹೆಚ್ಚು ಹೊತ್ತು ನಿಲ್ಲಲಿಲ್ಲ. 221 ಎಸೆತಗಳನ್ನು ಎದುರಿಸಿದ ರೋಹಿತ್‌ 103 ರನ್ ಗಳಿಸಿ ಔಟಾದರು. ಬಳಿಕ ಬಂದ ಶುಭಮನ್ ಗಿಲ್‌ ಆಟ ಕೇವಲ 6 ರನ್‌ಗೆ ಕೊನೆಗೊಂಡಿತು.

ಸದ್ಯ ಅನುಭವಿ ವಿರಾಟ್‌ ಕೊಹ್ಲಿ ಕ್ರೀಸ್‌ಗೆ ಆಗಮಿಸಿದ್ದು, ಜೈಸ್ವಾಲ್‌ ಜೊತೆಗೆ ಮೂರನೇ ವಿಕೆಟ್‌ ಪಾಲುದಾರಿಕೆಯಲ್ಲಿ ಮುರಿಯದ 72 ರನ್ ಕೂಡಿಸಿದ್ದಾರೆ.

ಬರೋಬ್ಬರಿ 350 ಎಸೆತಗಳನ್ನು ಎದುರಿಸಿರುವ ಜೈಸ್ವಾಲ್‌, 143 ರನ್ ಗಳಿಸಿ ಕಲಾತ್ಮಕ ಬ್ಯಾಟಿಂಗ್‌ ಮುಂದುವರಿಸಿದ್ದಾರೆ. ಕೊಹ್ಲಿ 36 ರನ್ ಗಳಿಸಿ ಮೂರನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಸದ್ಯ 162 ರನ್ ಮುನ್ನಡೆ ಪಡೆದಿರುವ ಟೀಂ ಇಂಡಿಯಾ ಭಾರಿ ಮುನ್ನಡೆಯತ್ತ ಹೆಜ್ಜೆ ಇಟ್ಟಿದೆ.

ಬುಧವಾರ ಆರಂಭವಾದ ಪಂದ್ಯದಲ್ಲಿ ವಿಂಡೀಸ್‌ ತಂಡ 150 ರನ್‌ ಗಳಿಸಿ ಆಲೌಟ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT