ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಎಲ್ಲ 10 ತಂಡಗಳ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ

Last Updated 25 ಮಾರ್ಚ್ 2022, 11:13 IST
ಅಕ್ಷರ ಗಾತ್ರ

ನವದೆಹಲಿ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ನಾಳೆ (ಶನಿವಾರ) ಉದ್ಘಾಟನಾ ಪಂದ್ಯ ಆಡುವುದರೊಂದಿಗೆ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಚಾಲನೆ ದೊರಕಲಿದೆ.

ಈ ಬಾರಿ ಐಪಿಎಲ್‌ಗೆ ಹೊಸ ಎರಡು ತಂಡಗಳು (ಲಖನೌ ಹಾಗೂ ಗುಜರಾತ್) ಸೇರ್ಪಡೆಗೊಂಡಿದ್ದು, ಒಟ್ಟು ತಂಡಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಐಪಿಎಲ್‌ನ ಎಲ್ಲ 10 ತಂಡಗಳ ಪ್ರಮುಖ ಆಟಗಾರರ ಬಗ್ಗೆ ಇಲ್ಲಿ ಮಾಹಿತಿ ಕೊಡಲಾಗಿದೆ.

ಮುಂಬೈ ಇಂಡಿಯನ್ಸ್:
ಪ್ರಮುಖ ಆಟಗಾರರು: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಜಸ್‌ಪ್ರೀತ್ ಬೂಮ್ರಾ (ವೇಗಿ), ಸೂರ್ಯಕುಮಾರ್ ಯಾದವ್ (ಬ್ಯಾಟರ್)
ಅಗ್ರ ವಿದೇಶಿ ಆಟಗಾರರು: ಕೀರನ್ ಪೊಲಾರ್ಡ್ (ಆಲ್‌ರೌಂಡರ್), ಫ್ಯಾಬಿಯನ್ ಅಲೆನ್ (ಆಲ್‌ರೌಂಡರ್), ಜೋಫ್ರಾ ಆರ್ಚರ್ (ವೇಗಿ).
ಐಪಿಎಲ್ ದಾಖಲೆ: ಐದು ಬಾರಿ ಚಾಂಪಿಯನ್ (2013, 2015, 2017, 2019, 2020)

ಚೆನ್ನೈ ಸೂಪರ್ ಕಿಂಗ್ಸ್:
ಪ್ರಮುಖ ಆಟಗಾರರು: ರವೀಂದ್ರ ಜಡೇಜ (ನಾಯಕ), ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಾಹರ್ (ಆಲ್‌ರೌಂಡರ್), ಋತುರಾಜ್ ಗಾಯಕವಾಡ್ (ಬ್ಯಾಟರ್)
ಅಗ್ರ ವಿದೇಶಿ ಆಟಗಾರರು: ಮೊಯಿನ್ ಅಲಿ (ಆಲ್‌ರೌಂಡರ್), ಡ್ವೇನ್ ಬ್ರಾವೊ (ಆಲ್‌ರೌಂಡರ್), ಡೆವೊನ್ ಕಾನ್ವೆ (ಬ್ಯಾಟರ್).
ಐಪಿಎಲ್ ದಾಖಲೆ: ನಾಲ್ಕು ಬಾರಿ ಚಾಂಪಿಯನ್ (2010, 2011, 2018, 2021), ಐದು ಬಾರಿ ರನ್ನರ್-ಅಪ್ (2008, 2012, 2013, 2015, 2019)

ಡೆಲ್ಲಿ ಕ್ಯಾಪಿಟಲ್ಸ್:
ಪ್ರಮುಖ ಆಟಗಾರರು: ರಿಷಭ್ ಪಂತ್ (ನಾಯಕ), ಯಶ್ ಧುಲ್ (ಬ್ಯಾಟರ್), ಪೃಥ್ವಿ ಶಾ (ಬ್ಯಾಟರ್)
ಅಗ್ರ ವಿದೇಶಿ ಆಟಗಾರರು: ಡೇವಿಡ್ ವಾರ್ನರ್ (ಬ್ಯಾಟರ್), ಲುಂಗಿ ಗಿಡಿ (ವೇಗಿ), ಎನ್ರಿಚ್ ನಾಕಿಯಾ (ವೇಗಿ).
ಐಪಿಎಲ್ ದಾಖಲೆ: ರನ್ನರ್-ಅಪ್ (2020)

ಪಂಜಾಬ್ ಕಿಂಗ್ಸ್:
ಪ್ರಮುಖ ಆಟಗಾರರು: ಮಯಂಕ್ ಅಗರವಾಲ್ (ನಾಯಕ), ಶಿಖರ್ ಧವನ್ (ಬ್ಯಾಟರ್), ಶಾರುಖ್ ಖಾನ್ (ಬ್ಯಾಟರ್), ಅರ್ಶದೀಪ್ ಸಿಂಗ್ (ವೇಗಿ)
ಅಗ್ರ ವಿದೇಶಿ ಆಟಗಾರರು: ಲಯಾಮ್ ಲಿವಿಂಗ್‌ಸ್ಟೋನ್ (ಬ್ಯಾಟರ್), ಜಾನಿ ಬೆಸ್ಟೊ (ವಿಕೆಟ್ ಕೀಪರ್), ಕಗಿಸೊ ರಬಾಡ (ವೇಗಿ).
ಐಪಿಎಲ್ ದಾಖಲೆ: ರನ್ನರ್-ಅಪ್ (2014)

ರಾಜಸ್ಥಾನ್ ರಾಯಲ್ಸ್:
ಪ್ರಮುಖ ಆಟಗಾರರು: ಸಂಜು ಸ್ಯಾಮ್ಸನ್ (ನಾಯಕ), ಯಜುವೇಂದ್ರ ಚಾಹಲ್ (ಸ್ಪಿನ್ನರ್), ರವಿಚಂದ್ರನ್ ಅಶ್ವಿನ್ (ಸ್ಪಿನ್ನರ್), ದೇವದತ್ತ ಪಡಿಕ್ಕಲ್ (ಬ್ಯಾಟರ್)
ಅಗ್ರ ವಿದೇಶಿ ಆಟಗಾರರು: ಜೋಸ್ ಬಟ್ಲರ್ (ವಿಕೆಟ್ ಕೀಪರ್), ನಥನ್ ಕೌಲ್ಟರ್ ನೈಲ್ (ವೇಗಿ), ಶಿಮ್ರಾನ್ ಹೆಟ್ಮೆಯರ್ (ಬ್ಯಾಟರ್).
ಐಪಿಎಲ್ ದಾಖಲೆ: ಚಾಂಪಿಯನ್ (2008)

ಕೋಲ್ಕತ್ತ ನೈಟ್ ರೈಡರ್ಸ್:
ಪ್ರಮುಖ ಆಟಗಾರರು: ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್ (ಬ್ಯಾಟರ್), ವರುಣ್ ಚಕ್ರವರ್ತಿ (ಸ್ಪಿನ್ನರ್).
ಅಗ್ರ ವಿದೇಶಿ ಆಟಗಾರರು: ಪ್ಯಾಟ್ ಕಮಿನ್ಸ್ (ವೇಗಿ), ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಸುನಿಲ್ ನಾರಾಯಣ್ (ಆಲ್‌ರೌಂಡರ್), ಆ್ಯಂಡ್ರೆ ರಸೆಲ್ (ಆಲ್‌ರೌಂಡರ್)
ಐಪಿಎಲ್ ದಾಖಲೆ: ಎರಡು ಬಾರಿ ಚಾಂಪಿಯನ್ (2012, 2014)

ಸನ್‌ರೈಸರ್ಸ್ ಹೈದರಾಬಾದ್:
ಪ್ರಮುಖ ಆಟಗಾರರು: ಭುವನೇಶ್ವರ್ ಕುಮಾರ್ (ವೇಗಿ), ವಾಷಿಂಗ್ಟನ್ ಸುಂದರ್ (ಸ್ಪಿನ್ನರ್), ಉಮ್ರಾನ್ ಮಲಿಕ್(ವೇಗಿ), ಅಬ್ದುಲ್ ಸಮದ್ (ಬ್ಯಾಟರ್)
ಅಗ್ರ ವಿದೇಶಿ ಆಟಗಾರರು: ಕೇನ್ ವಿಲಿಯಮ್ಸನ್ (ನಾಯಕ), ಮಾರ್ಕೊ ಜ್ಯಾನ್ಸೆನ್ (ಆಲ್‌ರೌಂಡರ್), ರೊಮರಿಯೊ ಶೆಫರ್ಡ್ (ವೇಗಿ), ನಿಕೋಲಸ್ ಪೂರನ್ (ವಿಕೆಟ್ ಕೀಪರ್)
ಐಪಿಎಲ್ ದಾಖಲೆ: 2016ರಲ್ಲಿ ಚಾಂಪಿಯನ್(2009ರಲ್ಲಿ ಡೆಕ್ಕನ್ ಚಾರ್ಜರ್ಸ್ ಕೂಡಚಾಂಪಿಯನ್ ಆಗಿತ್ತು.)

ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಪ್ರಮುಖ ಆಟಗಾರರು: ವಿರಾಟ್ ಕೊಹ್ಲಿ (ಬ್ಯಾಟರ್), ಮೊಹಮ್ಮದ್ ಸಿರಾಜ್ (ವೇಗಿ), ಹರ್ಷಲ್ ಪಟೇಲ್ (ವೇಗಿ).
ಅಗ್ರ ವಿದೇಶಿ ಆಟಗಾರರು: ಫಫ್ ಡು ಪ್ಲೆಸಿ (ನಾಯಕ), ವನಿಂದು ಹಸರಂಗ (ಸ್ಪಿನ್ನರ್), ಗ್ಲೆನ್ ಮ್ಯಾಕ್ಸ್‌ವೆಲ್ (ಆಲ್‌ರೌಂಡರ್), ಜೋಶ್ ಹ್ಯಾಜಲ್‌ವುಡ್ (ವೇಗಿ)
ಐಪಿಎಲ್ ದಾಖಲೆ: ಮೂರು ಬಾರಿ ರನ್ನರ್-ಅಪ್ (2009, 2011, 2016)

ಲಖನೌ ಸೂಪರ್ ಜೈಂಟ್ಸ್:
ಪ್ರಮುಖ ಆಟಗಾರರು: ಕೆ.ಎಲ್. ರಾಹುಲ್ (ನಾಯಕ), ಆವೇಶ್ ಖಾನ್ (ವೇಗಿ), ರವಿ ಬಿಷ್ಣೋಯಿ (ಸ್ಪಿನ್ನರ್)
ಅಗ್ರ ವಿದೇಶಿ ಆಟಗಾರರು: ಕ್ವಿಂಟನ್ ಡಿ ಕಾಕ್ (ಬ್ಯಾಟರ್), ಜೇಸನ್ ಹೋಲ್ಡರ್ (ವೆಸ್ಟ್‌ಇಂಡೀಸ್), ಮಾರ್ಕಸ್ ಸ್ಟೋಯಿನಿಸ್ (ಆಲ್‌ರೌಂಡರ್).
ದಾಖಲೆ: ಚೊಚ್ಚಲ ಬಾರಿಗೆ ಐಪಿಎಲ್‌ಗೆ ಲಗ್ಗೆಯಿಟ್ಟಿದೆ.

ಗುಜರಾತ್ ಟೈಟನ್ಸ್:
ಪ್ರಮುಖ ಆಟಗಾರರು: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್ (ಬ್ಯಾಟರ್), ಮೊಹಮ್ಮದ್ ಶಮಿ (ವೇಗಿ).
ಅಗ್ರ ವಿದೇಶಿ ಆಟಗಾರರು: ಲಾಕಿ ಫರ್ಗ್ಯುಸನ್ (ವೇಗಿ), ರಶೀದ್ ಖಾನ್ (ಸ್ಪಿನ್ನರ್), ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್).
ದಾಖಲೆ: ಚೊಚ್ಚಲ ಬಾರಿಗೆ ಐಪಿಎಲ್‌ಗೆ ಲಗ್ಗೆಯಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT