ಮಂಗಳವಾರ, ಅಕ್ಟೋಬರ್ 27, 2020
19 °C

IPL-2020 | ‘ಹಿಟ್‌ಮ್ಯಾನ್‌’ಬಳಗಕ್ಕೆ ಗೆಲುವು, ಕೆಕೆಆರ್‌ಗೆ ನಿರಾಸೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಅಬುಧಾಬಿ: ‘ಹಿಟ್‌ಮ್ಯಾನ್‌’ರೋಹಿತ್ ಶರ್ಮಾ ಅವರ ಬೀಸಾಟದಿಂದಾಗಿ ಮುಂಬೈ ಇಂಡಿಯನ್ಸ್‌ ಗೆಲುವಿನ ನಗೆ ಬೀರಿತು.

ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡದ ಫಲವಾಗಿ ಸೋಲುಕಂಡಿತು.

ರೋಹಿತ್ (80; 54ಎಸೆತ, 3ಬೌಂಡರಿ, 6ಸಿಕ್ಸರ್) ಆಟದ ಬಲದಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 195 ರನ್‌ ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಕೋಲ್ಕತ್ತ ತಂಡ 146/9 ರನ್‌ಗಳಿಗೆ ಔಟ್‌ ಆಯಿತು..

ಶೇಖ್ ಝಯೀದ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಕೋಲ್ಕತ್ತ ತಂಡದ ನಾಯಕ ದಿನೇಶ್ ಕಾರ್ತಿಕ್ ಫೀಲ್ಡಿಂಗ್  ಅಯ್ಕೆ ಮಾಡಿಕೊಂಡರು. ಆರು ಬೌಲರ್‌ಗಳನ್ನು ಕಣಕ್ಕಿಳಿಸಿದರು. ಆದರೆ ಅವರ ಪ್ರಯೋಗಗಳಿಗೆ ಫಲ ಸಿಗದಂತೆ ನೋಡಿಕೊಂಡಿದ್ದು ರೋಹಿತ್. 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಪಂಚ್, ಡ್ರೈವ್, ಫ್ರಂಟ್‌ಫೂಟ್ ಶಾಟ್‌ಗಳ ಅಮೋಘ  ಆಟದ ಸವಿ ಉಣಬಡಿಸಿದರು. 

ಕೆಕೆಆರ್‌ ತಂಡದಿಂದ ಉತ್ತಮ ಜೊತೆಯಾಟ ಬರಲಿಲ್ಲವಾದ್ದರಿಂದ ತಂಡ ಸುಲಭವಾಗಿ ಹಿಟ್‌ ಮ್ಯಾನ್‌ ಬಳಗಕ್ಕೆ ಮಣಿಯಿತು.

ಸಂಕ್ಷಿಪ್ತ ಸ್ಕೋರ್‌

ಮುಂಬೈ ಇಂಡಿಯನ್ಸ್‌: 195/5
ಕೆಕೆಆರ್‌: 146/9

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು