ಶುಕ್ರವಾರ, ಅಕ್ಟೋಬರ್ 23, 2020
21 °C

IPL 2020| ಧೋನಿ ಗಡ್ಡದ ಕುರಿತ ಟ್ವಿಟರ್‌ ಚರ್ಚೆ ಐಪಿಎಲ್‌ಗಿಂತಲೂ ಜೋರು!

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಕಳೆದ ವರ್ಷದ ಐಪಿಎಲ್‌ನ ಚಾಂಪಿಯನ್‌ ಮತ್ತು ರನ್ನರ್ ಅಪ್‌ಗಳ ನಡುವಿನ ಪಂದ್ಯದ ಮೂಲಕ 2020ರ ಐಪಿಎಲ್‌ ಋತುಮಾನ ಶನಿವಾರ ಆರಂಭವಾಯಿತು. ಆದರೆ, ಸಾಮಾಜಿಕ ತಾಣಗಳಲ್ಲಿ ಐಪಿಎಲ್‌ಗಿಂತಲೂ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹೊಸ ನೋಟದ ಚರ್ಚೆಯೇ ಜೋರಾಗಿ ನಡೆಯಿತು.

ಈ ಐಪಿಎಲ್‌ ಸರಣಿಯಲ್ಲಿ ಧೋನಿಯದ್ದು ವಿಭಿನ್ನ ನೋಟ. ಅವರ ಹೊಸ ಮಾದರಿಯ ಗಡ್ಡ ಎಲ್ಲರ ಗಮನ ಸೆಳೆಯುತ್ತಿದೆ. ಅತ್ತ ಫ್ರೆಂಚ್‌ ಗಡ್ಡವೂ ಅಲ್ಲದ, ಇತ್ತ ತಮಿಳಿನ ಜನಪ್ರಿಯ ಸಿನಿಮಾ ಸರಣಿ ‘ಸಿಂಗಂ’ ಪಾತ್ರದಾರಿ ಪೊಲೀಸ್‌ ಅಧಿಕಾರಿಯ ಮೀಸೆಯೂ ಅಲ್ಲದ ಮಾದರಿಯ ಗಡ್ಡವದು. ಇದರೊಂದಿಗೆ, ಧೋನಿ ಕಠಿಣ ವ್ಯಾಯಾಮ ಮಾಡಿ ತೋಳ್ಬಲವನ್ನು ಹೆಚ್ಚಿಸಿಕೊಂಡಂತೆಯೂ ಕಾಣುತ್ತಿದೆ. ಅವರ ಬೈಸಿಪ್ಸ್‌ ದೊಡ್ಡದಾದ ಬಗ್ಗೆಯೂ ನೆಟ್ಟಿಗರು ಮಾತಾಡಲಾರಂಭಿಸಿದ್ದಾರೆ.

ಹಾಗಾದರೆ, ಧೋನಿಯ ಹೊಸ ಅವತರಣಿಕೆ ಮತ್ತು ಅವರ ಗಡ್ಡ ಪುರಾಣದ ಬಗ್ಗೆ ಟ್ವಿಟರ್‌ನಲ್ಲಿ ಏನೆಲ್ಲ ಚರ್ಚೆಯಾಗಿದೆ? ಬನ್ನಿ ನೋಡೋಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು