ಬುಧವಾರ, ಅಕ್ಟೋಬರ್ 21, 2020
22 °C

IPL-2020 | ಬ್ಯಾಟಿಂಗ್ ವಿಚಾರದಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ: ಪೀಟರ್ಸನ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಸಮರ್ಥಿಸಿಕೊಂಡಿರುವ ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್, ಸ್ಟಾರ್‌ ಬ್ಯಾಟ್ಸ್‌ಮನ್‌ ವಿರಾಟ್‌ ಬ್ಯಾಟಿಂಗ್ ವಿಷಯದಲ್ಲಿ ಅತ್ಯುತ್ತಮ. ಅವರು ಐಪಿಎಲ್–2020ಯಲ್ಲಿ ಹೇಗೆ ಫಾರ್ಮ್‌ ಕಂಡುಕೊಳ್ಳಲಿದ್ದಾರೆ ಎಂಬುದು ಆಸಕ್ತಿದಾಯಕವಾಗಿದೆ ಎಂದು ಹೇಳಿದ್ದಾರೆ.

ಈ ಬಾರಿಯು ಐಪಿಎಲ್‌ನಲ್ಲಿ ಎರಡು ಪಂದ್ಯಗಳಲ್ಲಿ ಬ್ಯಾಟ್‌ ಬೀಸಿರುವ ಕೊಹ್ಲಿ ಕೇವಲ 17 ರನ್‌ ಗಳಿಸಿದ್ದು, ಸುದೀರ್ಘ ಬಿಡುವಿನ ಬಳಿಕ ಕ್ರಿಕೆಟ್‌ ಆಡುತ್ತಿರುವುದರಿಂದ ಫಾರ್ಮ್‌ ಕಂಡುಕೊಳ್ಳಲು ಕಷ್ಟಪಡುತ್ತಿದ್ದಾರೆ. ಮಾತ್ರವಲ್ಲದೆ ಅವರು ಕಳೆದ ಪಂದ್ಯದಲ್ಲಿ ಕಿಂಗ್ಸ್‌ ಇಲವನೆ್‌ ಪಂಜಾಬ್‌ ತಂಡದ ನಾಯಕ ಕೆ.ಎಲ್‌.ರಾಹುಲ್‌ ಅವರು ನೀಡಿದ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು. ಹೀಗಾಗಿ ಟೀಕೆ ವ್ಯಕ್ತವಾಗಿದೆ.

ಮುಂಬೈ ವಿರುದ್ಧ ಇಂದು ನಡೆಯುವ ಕಠಿಣ ಹೋರಾಟದಲ್ಲಿಯಾದರೂ ಫಾರ್ಮ್‌ಗೆ ಮರಳುವರೇ ಎಂಬ ಪ್ರಶ್ನೆ ಆರ್‌ಸಿಬಿ ಅಭಿಮಾನಿಗಳಲ್ಲಿದೆ.

‘ಕೊಹ್ಲಿ ಉತ್ತಮ ಆರಂಭವನ್ನು ಪಡೆದಿಲ್ಲ ಮತ್ತು ಅದನ್ನು ಅವರು ಒಪ್ಪಿಕೊಳ್ಳುತ್ತಾರೆ. ಈ ವಿಚಾರವನ್ನು ಪತ್ರಿಕಾಗೋಷ್ಠಿಯಲ್ಲೂ ಹೇಳಿದ್ದಾರೆ. ಅವರು ಜವಾಬ್ದಾರಿಯನ್ನು ತೆಗೆದುಕೊಳ್ಳು ಸಿದ್ಧರಿದ್ದಾರೆ. ಅಂತಹ ವ್ಯಕ್ತಿ ಹೇಗೆ ತಮ್ಮ ಆಟಕ್ಕೆ ವಾಪಸ್‌ ಆಗಲಿದ್ದಾರೆ ಎಂಬುದನ್ನು ನೋಡಲು ನಾನು ಈಗಲೂ ಉತ್ಸುಕನಾಗಿದ್ದೇನೆ’ ಎಂದು ಹೇಳಿದ್ದಾರೆ.

‘ಬ್ಯಾಟಿಂಗ್‌ ವಿಚಾರ ಬಂದಾಗ ಕೊಹ್ಲಿ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ. ಆದರೆ, ಈಗ ಅಲ್ಲಿ ಪ್ರೇಕ್ಷಕರೇ ಇಲ್ಲ. ಆಟಗಾರನಿಗೆ ಪ್ರೇಕ್ಷಕರ ಅಗತ್ಯವಿದೆ. ಹಾಗಾಗಿ ಸದ್ಯಕ್ಕೆ ಅವರು ಉತ್ತಮ ಆಟವಾಡಿಲ್ಲ. ಅದನ್ನು ಅವರು ಒಪ್ಪಿಕೊಂಡಿದ್ದಾರೆ. ಇದು ಹೀಗೆಯೇ ಸಾಗುತ್ತದೆಯೇ ಅಥವಾ ಚೆನ್ನಾಗಿ ಆಡುತ್ತಾರೆಯೇ ಎಂಬುದು ಕುತೂಹಲಕಾರಿಯಾಗಿದೆ. ಜನಸಂದಣಿಯಿಲ್ಲದೆ ಕೊಹ್ಲಿಯ ಆಟವನ್ನು ನೋಡುವುದು ಈ ಐಪಿಎಲ್‌ನ ಅತ್ಯಂತ ಆಸಕ್ತಿದಾಯಕ ವಿಚಾರವಾಗಿದೆ’ ಎಂದು ಹೇಳಿದ್ದಾರೆ.‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು