ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್–2020: ಮಾರ್ಗನ್‌ಗೆ ಕೆಕೆಆರ್ ನಾಯಕತ್ವ ಬಿಟ್ಟುಕೊಟ್ಟ ದಿನೇಶ್ ಕಾರ್ತಿಕ್

Last Updated 16 ಅಕ್ಟೋಬರ್ 2020, 10:19 IST
ಅಕ್ಷರ ಗಾತ್ರ

ಅನುಭವಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌ ಅವರುಕೋಲ್ಕತ್ತ ನೈಟ್‌ರೈಡರ್ಸ್‌ ತಂಡದ ನಾಯಕತ್ವವನ್ನು ಸಹ ಆಟಗಾರ ಎಯಾನ್‌ ಮಾರ್ಗನ್‌ ಅವರಿಗೆ ಬಿಟ್ಟುಕೊಟ್ಟಿದ್ದಾರೆ.

ಈ ಬಾರಿಯು ಐಪಿಎಲ್‌ನಲ್ಲಿ 7 ಪಂದ್ಯಗಳನ್ನು ಆಡಿರುವ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡ ನಾಲ್ಕು ಜಯ ಮತ್ತು ಮೂರು ಸೋಲುಗಳೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೆ, ಕಾರ್ತಿಕ್‌ ವೈಯಕ್ತಿಕವಾಗಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. 7 ಇನಿಂಗ್ಸ್‌ಗಳಿಂದ ಅವರು ಗಳಿಸಿರುವುದು ಕೇವಲ 108 ರನ್‌ ಮಾತ್ರ.

ಕಾರ್ತಿಕ್‌ ನಿರ್ಧಾರವನ್ನು ತಂಡದ ಸಿಇಒ ವೆಂಕಿ ಮೈಸೂರುಖಚಿತಪಡಿಸಿದ್ದಾರೆ. ‘ತಂಡದ ಹಿತಕ್ಕೆ ಮೊದಲ ಆದ್ಯತೆ ನೀಡುವಡಿಕೆ (ದಿನೇಶ್‌ ಕಾರ್ತಿಕ್‌) ಅವರಂತಹ ನಾಯಕರಿರುವುದು ನಮ್ಮ ಅದೃಷ್ಟ. ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಸಾಕಷ್ಟು ಧೈರ್ಯ ಬೇಕು. ಈ ನಿರ್ಧಾರದಿಂದ ನಾವು ಅಚ್ಚರಿಗೊಂಡಿದ್ದೇವೆ, ಅವರ ಆಶಯವನ್ನು ಗೌರವಿಸುತ್ತೇವೆ. ಇದುವರೆಗೆ ತಂಡದ ಉಪನಾಯಕರಾಗಿದ್ದ ಹಾಗೂ 2019ರ ಏಕದಿನ ವಿಶ್ವಕಪ್‌ ಗೆದ್ದ ತಂಡದ (ಇಂಗ್ಲೆಂಡ್‌) ನಾಯಕ ಎಯಾನ್‌ ಮಾರ್ಗನ್‌ ಅವರು ತಂಡದಲ್ಲಿರುವುದೂ ನಮ್ಮ ಅದೃಷ್ಟವೇ. ಅವರು ತಂಡವನ್ನು ಮುನ್ನಡೆಸಲಿದ್ದಾರೆ’ ಎಂದುತಿಳಿಸಿದ್ದಾರೆ.

ಮುಂದುವರಿದು, ‘ಈ ಟೂರ್ನಿಯಲ್ಲಿ ಡಿಕೆ ಮತ್ತು ಮಾರ್ಗನ್‌ ಇಬ್ಬರೂ ಒಟ್ಟಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆದಾಗ್ಯೂ ಮಾರ್ಗನ್‌ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ. ಇದು ಪರಿಣಾಮಕಾರಿಯಾದ ಬೆಳವಣಿಗೆಯಾಗಿದೆ. ಈ ಬದಲಾವಣೆಯಿಂದಾಗಿ ತಂಡ ತಡೆರಹಿತ ಓಟ ಮುಂದುವರಿಸಲಿದೆ ಎಂದು ನಿರೀಕ್ಷಿಸುತ್ತೇವೆ’ ಎಂದೂ ಹೇಳಿದ್ದಾರೆ.

ಈ ವಿಚಾರವನ್ನು ಕೆಕೆಆರ್‌ ತನ್ನ ಟ್ವಿಟರ್‌ ಖಾತೆಯಲ್ಲೂ ಹಂಚಿಕೊಂಡಿದೆ.

ಕೆಕೆಆರ್‌ ತಂಡವು 2018ರಿಂದ ಇಲ್ಲಿಯವರೆಗೆ ಕಾರ್ತಿಕ್‌ ನಾಯಕತ್ವದಲ್ಲಿ 37 ಪಂದ್ಯಗಳಲ್ಲಿ ಆಡಿದ್ದು, 19 ಗೆಲುವು ಮತ್ತು 17 ಸೋಲುಗಳನ್ನು ಕಂಡಿದೆ. 2018ರಲ್ಲಿ ಮೂರನೇ ಸ್ಥಾನ ಮತ್ತು ಕಳೆದ ವರ್ಷ 5ನೇ ಸ್ಥಾನಗಳಲ್ಲಿ ಕಾಣಿಸಿಕೊಂಡಿತ್ತು.

ಕೆಕೆಆರ್ ಇಂದು ಬಲಿಷ್ಠ ಮುಂಬೈ ಇಂಡಿಯನ್ಸ್‌ ವಿರುದ್ಧ ಕಣಕ್ಕಿಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT