ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿ ಹಾದಿ ಅನುಸರಿಸುತ್ತಿರುವ ರಿಷಭ್ ಪಂತ್ ಹೇಳಿದ್ದೇನು?

Last Updated 11 ಏಪ್ರಿಲ್ 2021, 10:22 IST
ಅಕ್ಷರ ಗಾತ್ರ

ಮುಂಬೈ: ನಾಯಕರಾಗಿ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಗುರು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ದಾಖಲಿಸಿದ ಗೆಲುವಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಪ್ತಾನ ರಿಷಭ್ ಪಂತ್ ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ.

ಹಾಗಿದ್ದರೂ ತಮ್ಮ ಹೀರೊಧೋನಿ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಲು ಮರೆಯಲಿಲ್ಲ. ಮಹಿ ಅವರಿಂದ ಸಾಕಷ್ಟುಕ್ರಿಕೆಟ್ ಪಾಠಗಳನ್ನು ಕಲಿತಿದ್ದು, ಅವರ ಹಾದಿಯನ್ನೇ ಅನುಸರಿಸುವುದಾಗಿ ಪಂದ್ಯದ ಬಳಿಕ ರಿಷಭ್ ಪಂತ್ ಹೇಳಿದ್ದಾರೆ.

ನಾಯಕನಾದ ಮೊದಲ ಪಂದ್ಯದಲ್ಲೇ ಮಹೇಂದ್ರ ಸಿಂಗ್ ಧೋನಿ ಜೊತೆಗೆ ಟಾಸ್‌ಗೆ ತೆರಳಿರುವುದು ನನ್ನ ಪಾಲಿಗೆ ತುಂಬಾನೇ ವಿಶೇಷವಾದ ಕ್ಷಣವಾಗಿದೆ. ಧೋನಿಯಿಂದ ಸಾಕಷ್ಟು ಪಾಠಗಳನ್ನು ಕಲಿತಿದ್ದು, ಅವರ ಹಾದಿಯನ್ನು ಅನುಸರಿಸುತ್ತಿದ್ದೇನೆ. ನನ್ನ ಪಾಲಿಗಿದು ಅತ್ಯುತ್ತಮವಭಾವನೆಯನ್ನುಂಟು ಮಾಡಿದೆ ಎಂದಿದ್ದಾರೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಡೆಲ್ಲಿ ಏಳು ವಿಕೆಟ್ ಅಂತರದ ಅಧಿಕಾರಯುತ ಗೆಲುವು ದಾಖಲಿಸಿತ್ತು. ಬಿರುಸಿನ ಅರ್ಧಶತಕಗಳನ್ನು ಬಾರಿಸಿದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಡೆಲ್ಲಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಅಂತಿಮವಾಗಿ ಪಂದ್ಯ ಗೆದ್ದಾಗ ತುಂಬಾನೇ ಸಂತಸವಾಗುತ್ತದೆ. ಮಧ್ಯಂತರ ಅವಧಿಯಲ್ಲಿ ನಾನು ಒತ್ತಡದಲ್ಲಿದ್ದೆ. ಆದರೆ ಆವೇಶ್ ಹಾಗೂ ಟಾಮ್ ಕರನ್ ಉತ್ತಮ ದಾಳಿ ಸಂಘಟಿಸಿ ಎದುರಾಳಿ ತಂಡವನ್ನು 188 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ನೆರವಾದರು. ಬಳಿಕ ಪವರ್ ಪ್ಲೇನಲ್ಲಿ ಪೃಥ್ವಿ ಹಾಗೂ ಶಿಖರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು ಪರಿಸ್ಥಿತಿಯನ್ನು ಸರಳವಾಗಿಟ್ಟುಕೊಂಡರು. ಅಲ್ಲದೆ ಉತ್ತಮ ಹೊಡೆತಗಳತ್ತ ಗಮನ ಹರಿಸಿದ್ದರು ಎಂದು ಪಂತ್ ವಿವರಿಸಿದ್ದಾರೆ.

ಈ ನಡುವೆ ಐಪಿಎಲ್‌ನ ಐದನೇ ಅತಿ ಕಿರಿಯ ನಾಯಕ ಎಂಬ ಖ್ಯಾತಿಗೂ ರಿಷಭ್ ಪಂತ್ ಪಾತ್ರವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT