ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಚೆನ್ನೈಗೆ ಬಂದಿಳಿದ ಧೋನಿ; ಫ್ಯಾನ್ಸ್ ಫಿದಾ!

Last Updated 4 ಮಾರ್ಚ್ 2021, 5:20 IST
ಅಕ್ಷರ ಗಾತ್ರ

ಚೆನ್ನೈ: 2021ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸುವ ಸಲುವಾಗಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಚೆನ್ನೈಗೆ ಬಂದಿಳಿದಿದ್ದಾರೆ.

ಐಪಿಎಲ್ 2021 ವೇಳಾಪಟ್ಟಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಬಲ್ಲ ಮೂಲಗಳ ಪ್ರಕಾರ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಆರಂಭದಲ್ಲಿ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆರಂಭವಾಗುವ ಸಾಧ್ಯತೆಯಿದೆ.

ಇದರಂತೆ ಪೂರ್ವ ಸಿದ್ಧತೆ ಹಾಗೂ ರಣತಂತ್ರ ರೂಪಿಸಿಕೊಳ್ಳುವ ಯೋಜನೆಯೊಂದಿಗೆ ಮಹಿ ಚೆನ್ನೈಗೆ ತಲುಪಿದ್ದಾರೆ. ಭಾರತೀಯ ಕ್ರಿಕೆಟಿಗ ಅಂಬಟಿ ರಾಯುಡು ಸಹ ಚೆನ್ನೈ ಕ್ಯಾಂಪ್ ತಲುಪಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್, ಮಾರ್ಚ್ 8 ಅಥವಾ 9ರೊಳಗೆ ಶಿಬಿರ ಪ್ರಾರಂಭಿಸಲು ತಯಾರಿ ನಡೆಸಿದ್ದೇವೆ ಎಂದು ಹೇಳಿದರು.

ಧೋನಿ ಆಗಮನದೊಂದಿಗೆ ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ. ಅಂತರ ರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಧೋನಿ, ಐಪಿಎಲ್‌ನಲ್ಲಷ್ಟೇ ಭಾಗವಹಿಸುತ್ತಿದ್ದಾರೆ.

ಐಪಿಎಲ್ ಮಿನಿ ಹರಾಜಿಗೂ ಮುನ್ನ ಚೆನ್ನೈ ತಂಡವು ಹರಭಜನ್ ಸಿಂಗ್, ಕೇದಾರ್ ಜಾಧವ್, ಮುರಳಿ ವಿಜಯ್ ಹಾಗೂ ಪಿಯೂಷ್ ಚಾವ್ಲಾ ಅವರನ್ನು ಕೈಬಿಟ್ಟಿತ್ತು. ಇನ್ನೊಂದೆಡೆ ಶೇನ್ ವಾಟ್ಸನ್ ನಿವೃತ್ತಿ ಸಲ್ಲಿಸಿದ್ದರು.

ಫೆಬ್ರುವರಿ 18ರಂದು ನಡೆದ ಹರಾಜಿನಲ್ಲಿ ಕರ್ನಾಟಕದ ಕೆ. ಗೌತಮ್, ಭಾರತ ತಂಡದ ಚೇತೇಶ್ವರ್ ಪೂಜಾರ, ಇಂಗ್ಲೆಂಡ್‌ನ ಮೊಯಿನ್ ಅಲಿ ಮುಂತಾದ ಆಟಗಾರರನ್ನು ಖರೀದಿಸಿತ್ತು.

ಯುಎಇನಲ್ಲಿ ನಡೆದ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್, ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಚೆನ್ನೈ ಸೂಪರ್ ಕಿಂಗ್ಸ್:

ಉಳಿಸಿಕೊಂಡ ಆಟಗಾರರು: ಎಂಎಸ್ ಧೋನಿ, ಎನ್ ಜಗದೀಶನ್, ಆರ್ ಗಾಯಕ್‌ವಾಡ್, ಕೆಎಂ ಆಸಿಫ್, ರವೀಂದ್ರ ಜಡೇಜ, ಜೋಶ್ ಹ್ಯಾಜಲ್‌ವುಡ್, ಕೆ ಶರ್ಮಾ, ಅಂಬಟಿ ರಾಯುಡು, ಸುರೇಶ್ ರೈನಾ, ಇಮ್ರಾನ್ ತಾಹೀರ್, ರಾಹುಲ್ ಚಹರ್, ಫಾಫ್ ಡು ಪ್ಲೆಸಿಸ್, ಶಾರ್ದೂಲ್ ಠಾಕೂರ್, ಮಿಚೆಲ್ ಸ್ನಾಂಟ್ನರ್, ಡ್ವೇಯ್ನ್ ಬ್ರಾವೋ, ಲುಂಗಿ ಎನ್‌ಗಿಡಿ, ಸ್ಯಾಮ್ ಕರ್ರನ್, ಎಸ್ ಕಿಶೋರ್.

ಹರಾಜಿನಲ್ಲಿ ಖರೀದಿಸಿದ ಆಟಗಾರರು: ಕೃಷ್ಣಪ್ಪ ಗೌತಮ್ (₹9.25 ಕೋಟಿ), ಮೊಯಿನ್ ಅಲಿ (₹7 ಕೋಟಿ), ಚೇತೆಶ್ವರ್ ಪೂಜಾರ (₹50 ಲಕ್ಷ), ಕೆ. ಭಗತ್ ವರ್ಮಾ (₹20 ಲಕ್ಷ), ಸಿ. ಹರಿ ನಿಶಾಂತ್ (₹20 ಲಕ್ಷ) ಮತ್ತು ಎಂ. ಹರಿಶಂಕರ್ ರೆಡ್ಡಿ (₹20 ಲಕ್ಷ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT