ಸೋಮವಾರ, ಅಕ್ಟೋಬರ್ 25, 2021
26 °C

ಸಿಎಸ್‌ಕೆ ಸಿಬ್ಬಂದಿಗೆ ಧೋನಿ ಸೆಲ್ಯೂಟ್; ಅಭಿಮಾನಿಗಳ ಹೃದಯ ಗೆದ್ದ ಉತ್ತಪ್ಪ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಶಾರ್ಜಾ: ಐಪಿಎಲ್‌ನಲ್ಲಿ ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲುವಿನ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಸಹಾಯಕ ಸಿಬ್ಬಂದಿಗೆ ಸೆಲ್ಯೂಟ್ ಹೊಡೆದಿರುವುದು ಬೆಳಕಿಗೆ ಬಂದಿದೆ.

ಪಂದ್ಯ ಮುಗಿದ ಬಳಿಕ ಅಂಬಟಿ ರಾಯುಡು ಅವರೊಂದಿಗೆ ಧೋನಿ ಸಮಾಲೋಚನೆ ನಡೆಸುತ್ತಿರುವ ವೇಳೆ ಘಟನೆ ನಡೆದಿದೆ.

ಇದನ್ನೂ ಓದಿ: 

ತಮ್ಮ ಬಳಿ ಬಂದ ಸಿಎಸ್‌ಕೆ ಸಹಾಯಕ ಸಿಬ್ಬಂದಿ ಮೊದಲು ಧೋನಿ ಅವರಿಗೆ ಸೆಲ್ಯೂಟ್ ಹೊಡೆದರು. ಇದನ್ನು ಗಮನಿಸಿದ ಧೋನಿ ಸಹ ಗೌರವ ಸೂಚಕವಾಗಿ ಸೆಲ್ಯೂಟ್ ಹೊಡೆದರು. ಬಳಿಕ ಪರಸ್ಪರ ಹಸ್ತಲಾಘವ ಮಾಡಿದರು. ನಂತರ ರಾಯುಡು ಜೊತೆಗೆ ಮಹಿ ಸಮಾಲೋಚನೆ ಮುಂದುವರಿಸಿದರು.

 

 

 

ಹೃದಯ ಗೆದ್ದ ಉತ್ತಪ್ಪ...
ಏತನ್ಮಧ್ಯೆ ಮಹೇಂದ್ರ ಸಿಂಗ್ ಧೋನಿ ಹಾಗೂ ಸುರೇಶ್ ರೈನಾ ಅವರ ಕ್ರಿಕೆಟ್ ಕಿಟ್‌ಗಳನ್ನು (ಬ್ಯಾಟ್, ಹೆಲ್ಮೆಟ್) ಪೆವಿಲಿಯನ್‌ಗೆ ಹೊತ್ತೊಯ್ಯುವ ಮೂಲಕ ರಾಬಿನ್ ಉತ್ತಪ್ಪ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಈ ಮೂಲಕ ಉತ್ತಮ ಕ್ರೀಡಾಸ್ಫೂರ್ತಿಯನ್ನು ಮೆರೆದಿದ್ದಾರೆ. ಇವೆರಡು ಘಟನೆಗಳು ಒಂದೇ ವಿಡಿಯೊದಲ್ಲಿ ಸೆರೆಯಾಗಿದ್ದು, ಸಿಎಸ್‌ಕೆ ಫ್ಯಾನ್ಸ್ ಖಾತೆಯಿಂದ ಬಿಡುಗಡೆಗೊಳಿಸಲಾಗಿದೆ. 

 

ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ಅಂತಿಮ ಹಂತದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಸುರೇಶ್ ರೈನಾ ಅಜೇಯರಾಗುಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು