ಶುಕ್ರವಾರ, ಅಕ್ಟೋಬರ್ 29, 2021
20 °C

IPL 2021 playoffs ವೇಳಾಪಟ್ಟಿ: ಡೆಲ್ಲಿ vs ಚೆನ್ನೈ; ಆರ್‌ಸಿಬಿ vs ಕೆಕೆಆರ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪ್ಲೇ-ಆಫ್ ಹಂತದ ರೋಚಕ ಪಂದ್ಯಗಳಿಗೆ ವೇದಿಕೆ ಸಜ್ಜುಗೊಂಡಿದೆ. 

ಅಕ್ಟೋಬರ್ 10 ಭಾನುವಾರ ದುಬೈಯಲ್ಲಿ ನಡೆಲಿರುವ ಮೊದಲ ಕ್ವಾಲಿಫೈಯರ್‌‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸಲಿದೆ. 

ಬಳಿಕ ಅಕ್ಟೋಬರ್ 11 ಸೋಮವಾರ ಶಾರ್ಜಾದಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಸವಾಲನ್ನು ಎದುರಿಸಲಿದೆ. 

ಮೊದಲ ಕ್ವಾಲಿಫೈಯರ್‌ನಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದೆ. ಅಲ್ಲಿ ಸೋತ ತಂಡವು ಅಕ್ಟೋಬರ್ 13 ಬುಧವಾರ ಶಾರ್ಜಾದಲ್ಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್‌ನಲ್ಲಿ ಎಲಿಮಿನೇಟರ್‌ ವಿಜೇತ ತಂಡದ ಸವಾಲನ್ನು ಎದುರಿಸಲಿದೆ.  

ಫೈನಲ್ ಪಂದ್ಯವು ಅಕ್ಟೋಬರ್ 15 ಶುಕ್ರವಾರದಂದು ದುಬೈಯಲ್ಲಿ ನಿಗದಿಯಾಗಿದೆ. 

ಪ್ಲೇ-ಆಫ್ ಪ್ರವೇಶಿಸಿದ ತಂಡಗಳು: 
1. ಡೆಲ್ಲಿ ಕ್ಯಾಪಿಟಲ್ಸ್
2. ಚೆನ್ನೈ ಸೂಪರ್ ಕಿಂಗ್ಸ್ 
3. ರಾಯಲ್ ಚಾಲೆಂಜರ್ಸ್ ಬೆಂಗಳೂರು
4. ಕೋಲ್ಕತ್ತ ನೈಟ್ ರೈಡರ್ಸ್

ಟೂರ್ನಿಯಿಂದ ನಿರ್ಗಮಿಸಿದ ತಂಡಗಳು: ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್. 

ಅಂಕಪಟ್ಟಿ ಇಂತಿದೆ:
 


ಚಿತ್ರ ಕೃಪೆ: ಐಪಿಎಲ್

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು