ಶನಿವಾರ, ಮೇ 15, 2021
23 °C

IPL 2021: ಹೈದರಾಬಾದ್‌ಗೆ ಗೆಲುವು; ಕೊನೆಗೂ ಮಂದಹಾಸ ಬೀರಿದ ಕಾವ್ಯ ಮಾರನ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವತ್ತಿಯ ಟ್ವೆಂಟಿ-20 ಟೂರ್ನಿಯಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಹ್ಯಾಟ್ರಿಕ್ ಸೋಲಿನ ಮುಖಭಂಗಕ್ಕೊಳಗಾಗಿತ್ತು.

ಅತ್ತ ಹೈದರಾಬಾದ್ ತಂಡದ ಸಹ ಮಾಲಕಿ ಕಾವ್ಯ ಮಾರನ್ ಮುಖದಲ್ಲಿ ಬೇಸರ ಮಡುಗಟ್ಟಿತ್ತು. ಕೊನೆಗೂ ಸನ್‌ರೈಸರ್ಸ್ ಗೆಲುವಿನ ಹಾದಿಗೆ ಮರಳುವುದರೊಂದಿಗೆ ಹೈದರಾಬಾದ್ ಫ್ಯಾನ್ ಗರ್ಲ್ ಮುಖದಲ್ಲಿ ಮಂದಹಾಸ ಮರುಕಳಿಸಿದೆ.

ಬುಧವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಒಂಬತ್ತು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದ್ದ ಸನ್‌ರೈಸರ್ಸ್ ಹೈದರಾಬಾದ್, ಪ್ರಸಕ್ತ ಸಾಲಿನಲ್ಲಿ ಮೊದಲ ಗೆಲುವು ದಾಖಲಿಸಿತ್ತು.

 

 

 

ಕಳೆದ ಮೂರು ಪಂದ್ಯಗಳಲ್ಲಿ ಹೈದರಾಬಾದ್ ಸೋಲು ಅನುಭವಿಸಿದ್ದಕ್ಕಿಂತಲೂ ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಕಾವ್ಯ ಮಾರನ್ ಸುದ್ದಿಯಾಗಿದ್ದರು. ಹೈದರಾಬಾದ್ ಸೋಲಿಗಿಂತಲೂ ಆಕೆಯ ಬೇಸರವನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ಅಭಿಮಾನಿಗಳು ಬರೆದುಕೊಂಡಿದ್ದರು.

 

ಕೊನೆಗೂ ಹೈದರಾಬಾದ್ ಗೆಲುವು ದಾಖಲಿಸಿದೆ. ಅತ್ತ ಸನ್ ನೆಟ್‌ವರ್ಕ್ ಮಾಲೀಕ ಕಲಾನಿಧಿ ಮಾರನ್ ಪುತ್ರಿ ಕಾವ್ಯ ಮಾರನ್ ಮಂದಹಾಸ ಬೀರಿದ್ದಾರೆ. ಈ ಮೂಲಕ ಅಭಿಮಾನಿಗಳ ಹೃದಯ ಗೆಲ್ಲುವುದರೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಗದೊಮ್ಮೆ ಟ್ರೆಂಡ್ ಆಗಿದ್ದಾರೆ.

 

 

 

 

 

 

 

 

 

 

 

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು